ಕಾರ್ಮಿಕ ಪರ ನೀತಿಗೆ ಒತ್ತಾಯಿಸಿಫ್ರೀಡಂ ಪಾರ್ಕಲ್ಲಿ ನ.೨೭ಕ್ಕೆ ಬೃಹತ್ ಪ್ರತಿಭಟನೆ…

ಗಂಗಾವತಿ : ಕೇಂದ್ರ ಹಾಗು ರಾಜ್ಯ ಸರಕಾರಗಳು ಕಾರ್ಮಿಕ ಪರ ನೀತಿ ಅನುಸರಿಸಿ ಕನಿಷ್ಠ ವೇತನ ಜಾರಿ, ಗುತ್ತಿಗೆ ಪದ್ಧತಿ ರದ್ದತಿ, ಖಾಯಂ ನೇಮಕಾತಿಗೆ ಒತ್ತಾಯಿಸಿ ಬೆಂಗಳೂರು ಫ್ರಿಡಂ ಪಾರ್ಕ್ ಲ್ಲಿ ನವೆಂಬರ್ ೨೭ ಗುರುವಾರ ಬೆಳಗ್ಗೆ ೧೧ ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಇಸಿಸಿಟಿಯು ರಾಷ್ಟಿçÃಯ ಉಪಾಧ್ಯಕ್ಷ ಕ್ರಿಷ್ಟನ್ ರೋಜಾರಿಯ ತಿಳಿಸಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ಸರಕಾರ ಕಾರ್ಮಿಕರ ಕಾಂಟ್ರಾಕ್ಟ್ ಪದ್ಧತಿಯನ್ನು ತೆಗೆದು ಹಾಕಿ ಸ್ವಸಹಾಯ ಗುಂಪಿನ ಮಾದರಿಯಲ್ಲಿ ಕಾರ್ಮಿಕ ಕಾಯ್ದೆ ತರಲು ಉದ್ದೇಶಿಸಿದ್ದು, ಇದು ಅಳಿಯ ಅಲ್ಲ ಮಗಳ ಗಂಡ ಎನ್ನುವಂತಾಗುತ್ತದೆ ಖಾಯಂ ನೇಮಕ ಮಾಡಿಕೊಂಡು ಆಗುತ್ತಿರುವ ಭ್ರಷ್ಟಾಚಾರ ತಡೆಯಬೇಕು, ಕೇಂದ್ರ ಮೋದಿ ಸರಕಾರ ೧೯೨೬ ಟ್ರೇಡ್ ಯುನಿಯನ್ ಕಾಯ್ದೆ, ಗುತ್ತಿಗೆ ಕಾರ್ಮಿಕ ಕಾಯ್ದೆ ೧೯೭೦, ಕಾರ್ಖಾನೆ ಕಾಯ್ದೆ ೧೯೪೮, ಕೈಗಾರಿಕಾ ವಿವಾದಿತ ಕಾಯ್ದೆ ೧೯೪೭ ಇನ್ನು ಹಲವು ಕಾಯ್ದೆಗಳಲ್ಲಿ ಕಾರ್ಮಿಕ ಪರವಾದ ಅಂಶಗಳನ್ನು ತೆಗೆದು ಹಾಕುವ ನಿರ್ಧಾರ ಮೋದಿ ಸರಕಾರದ್ದಾಗಿದ್ದು, ಕೂಡಲೆ ಇಂಥ ವಿರೋಧಿ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.ಕಾರ್ಮಿಕ ವಿರೋಧಿ ೪ ಸಂಹಿತೆಗಳನ್ನು ರದ್ದುಗೊಳಿಸಬೇಕು, ದಿನಗೂಲಿ ೧೫ ಸಾವಿರ ರುಗೆ ನಿಗದಿಯಾಗಬೇಕು, ಸರ್ವರಿಗು ಉದ್ಯೋಗ ಖಾತ್ರಿ ಹಾಗು ಉದ್ಯೋಗ ಸಂರಕ್ಷಣೆ ಖಚಿತಪಡಿಸಬೇಕು, ಸಮಾನ ದುಡಿಮೆಗೆ ಸಮಾನ ವೇತನ ನೀಡಬೇಕು ಎಂದು ಸರಕಾರಕ್ಕೆ ಒತ್ತಡ ಹೇರಲಾಗುವುದು ಎಂದು ಹೇಳಿದರು.ಎಐಸಿಸಿಟಿಯು ಕೊಪ್ಪಳ ಜಿಲ್ಲಾಧ್ಯಕ್ಷ ವಿಜಯ್ ದೊರೆರಾಜ್ ಮಾತನಾಡಿ, ಕೊಪ್ಪಳ ಜಿಲ್ಲೆಯಿಂದ ಕನಿಷ್ಠ ೩೦೦ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿಭಟನೆ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾ ಸಮಿತಿ ಸದಸ್ಯ ಹನುಮಂತಪ್ಪ ಹುಲಿ ಹೈದರ್, ಪ್ರಮುಖರಾದ ರೇಣುಕಾ, ಕೇಶವ ನಾಯಕ ಇತರರಿದ್ದರು.
