ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್’ ಮತ್ತು ‘ಡಾ. ಎಸ್.ವಿ. ಸವಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇವೆಗೆ ಸಿದ್ಧ...

ಗಂಗಾವತಿ: 24.10.2025<b>ಹೆರಿಗೆಯ ಸಮಯದಲ್ಲಿ ಉಂಟಾಗುವ ನೋವು ಅನೇಕ ತಾಯಂದಿರಿಗೆ ಭಯದ ವಿಷಯವಾಗಿದೆ. ಆದರೆ, ಈ ನೋವನ್ನು ನೀವಾರಿಸಲು ಇಂದು ಅನೇಕ ಸುಲಭ ಮಾರ್ಗಗಳು ಲಭ್ಯವಿವೆ. ತಾಯಿಯ ಸಂತೋಷದ ಅನುಭವವನ್ನು ಹೆಚ್ಚಿಸುವ ದೃಷ್ಟಿಯಿಂದ ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಕೆಲವು ಆಧುನಿಕ ಹೆರಿಗೆ ವಿಧಾನಗಳನ್ನು ಈಗ ಸ್ಥಳೀಯವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.✍️

ವಿದ್ಯಾನಗರ-ಜಂಗಮರ ಕಲ್ಗುಡಿ ಗ್ರಾಮದ ಮಧ್ಯದಲ್ಲಿ(ಅಕ್ಟೋಬರ್ 24) ಉದ್ಘಾಟನೆ ಗೊಂಡಿರುವ ‘ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್’ ಮತ್ತು ‘ಡಾ. ಎಸ್.ವಿ. ಸವಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ಯಲ್ಲಿ ಈ ಹೊಸ ವಿಧಾನಗಳನ್ನು ಪರಿಚಯಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಾನದಂಡದ ಚಿಕಿತ್ಸಾ ಸೌಲಭ್ಯಗಳನ್ನು ನೀಡುವ ಮೊದಲ ಆಸ್ಪತ್ರೆ ಇದಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ

✍️ಟಬ್ ಡೆಲಿವರಿ ಮತ್ತು ಆರೋಮಾ ಥೆರಪಿ ಡೆಲಿವರಿಯಂತಹ ವಿಧಾನಗಳನ್ನು ಅಳವಡಿಕೆ ಇಲ್ಲಿ ಸಾಧ್ಯವಾಗಿದೆ. ಈ ವಿಧಾನಗಳಲ್ಲಿ, ಗರ್ಭಿಣಿಯರು ನೀರಿನ ಟಬ್ನಲ್ಲಿ ಆರಾಮದಾಯಕವಾಗಿ ಕುಳಿತು ಅಥವಾ ಸುವಾಸನಾ ತೈಲಗಳ (ಆರೋಮಾ ಥೆರಪಿ) ಸಹಾಯದಿಂದ ಹೆರಿಗೆಯ ಅನುಭವವನ್ನು ಹೆಚ್ಚು ಸಹಜ ಮತ್ತು ಸುಖಕರವಾಗಿ ಮಾಡಿಕೊಳ್ಳಬಹುದು. ಇದರೊಂದಿಗೆ, ವಿವಾಹ ಛಾಯಾಚಿತ್ರ ಶೂಟ್‌ನಂತಹ ರೀತಿಯಲ್ಲಿ ಹೆರಿಗೆ ಮುನ್ನ ಮತ್ತು ನಂತರದ ಛಾಯಾಚಿತ್ರ/ವೀಡಿಯೋ ಮತ್ತು ನವಜಾತ ಶಿಶುವಿನ ಫೋಟೋ ಶೂಟ್‌ನ ವ್ಯವಸ್ಥೆಯೂ ಇದೆ.

✍️ಮೂರು ದಶಕಗಳ ಅನುಭವದ ನೆಲೆ</b>:…ಸ್ತ್ರೀರೋಗತಜ್ಞ ಡಾ. ಈಶ್ವರ ಸವಡಿ ಅವರ ನೇತೃತ್ವದಲ್ಲಿ ಈ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಡಾ. ಸವಡಿ ಅವರು ಈ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ‘ಸ್ಪೂರ್ತಿ ಸಮೂಹ ಸಂಸ್ಥೆ’ಯಡಿಯಲ್ಲಿ ಇದು ಆರಂಭವಾಗುವ ಮೂರನೇ ಆರೋಗ್ಯ ಸಂಸ್ಥೆಯಾಗಿದೆ. ರೋಗಿಗಳಿಗೆ ಕುಟುಂಬದ ಪರಿಸರ ಮತ್ತು ಮಧುರ ಅನುಭವ ನೀಡುವುದು ಇಲ್ಲಿನ ಧ್ಯೇಯ ಎಂದು ಸಿಬ್ಬಂದಿ ತಿಳಿಸಿದ್ದಾರೆಏಕೀಕೃತ ಸೇವೆಗಳು:….

ಈ ಆಸ್ಪತ್ರೆಯು ರೋಗಿಗಳಿಗೆ ಎಲ್ಲಾ ಸೇವೆಗಳನ್ನು ಒಂದೇ ಛಾವಣಿಯಡಿಯಲ್ಲಿ ನೀಡಲು ಉದ್ದೇಶಿಸಿದೆ. ಇಲ್ಲಿ ಅತ್ಯಾಧುನಿಕ ಕೋಣೆಗಳು, ಆಪರೇಷನ್ ಥಿಯೇಟರ್, ಐವಿಎಫ್ ಕೇಂದ್ರ, ಲ್ಯಾಪ್ರೊಸ್ಕೋಪಿ, ನವಜಾತ ಶಿಶುಗಳ ಆರೈಕೆ ಘಟಕ, ಹೈಡ್ರೋ ಲೇಬರ್ ವಾರ್ಡ್, 2ಡಿ ಎಕೊ, ಸಿಟಿ ಸ್ಕ್ಯಾನ್, ಡಿಜಿಟಲ್ ಎಕ್ಸ್-ರೆ, ಡಯಾಲಿಸಿಸ್ ಘಟಕ, ಎಂಡೋಸ್ಕೋಪಿ ಸೇವೆ ಸೇರಿದಂತೆ ನೂರಕ್ಕೂ ಹೆಚ್ಚಿನ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಸೌಕರ್ಯಗಳನ್ನು ನೀಡಲಾಗುವುದು.</b><b><b>ಆಸ್ಪತ್ರೆಯು ಎಲ್ಲಾ ಆರ್ಥಿಕ ವರ್ಗದ ರೋಗಿಗಳಿಗೂ ಕೈಗೆ ಟುಕುವ ಶುಲ್ಕದಲ್ಲಿ ಈ ಸೇವೆಗಳನ್ನು ಒದಗಿಸಲು ಮುಂದಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಬೆಳಗ್ಗೆ 8:00ಗಂಟೆಗೆ ಪೂಜೆಯ ವಿಧಿ ವಿಧಾನಗಳೊಂದಿಗೆ ಉದ್ಘಾಟನೆಗೊಂಡ ಈ ಕಾರ್ಯಕ್ರಮಕ್ಕೆ ಶಾಸಕರಾದ ಗಾಲಿ ಜನಾರ್ದನರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಮಾಜಿ ಸಚಿವ ಹಾಲಪ್ಪ ಆಚಾರ್ಯ, ಮಾಜಿ ಶಾಸಕ ಅಮರೇಗೌಡ ಬಯಾಪೂರು,ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ,ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ,ಜಿ.ಶ್ರೀಧರ, ವಿವಿಧ ಮಠಾದೀಶರು,ವಿವಿಧ ಸಂಘಟನೆ ಅಧ್ಯಕ್ಷರು,ಪತ್ರಕರ್ತರು, ರೈತ ಮುಖಂಡರು, ವೈದ್ಯರು, ಆಗಮಿಸಿ ಶುಭ ಹಾರೈಸಿದರು.

