ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ವಾಸುದೇವ್ ನವಲಿ ಅವರಿಗೆ ಸನ್ಮಾನ…

ಗಂಗಾವತಿ. ಇತ್ತೀಚಿಗಷ್ಟೇ ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾದ ವಾಸುದೇವ್ ನವಲಿ ಅವರಿಗೆ ಶ್ರೀ ಯೋಗೀಶ್ವರ ಯಜ್ಞ ವಲ್ಕ್ಯ. ಸೇವಾ ಟ್ರಸ್ಟ್ ನೇತೃತ್ವದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಆಶೀರ್ವದಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ವಾಸುದೇವ್ ನವಲಿ ಮಾತನಾಡಿ ಶ್ರೀ ಗುರುರಾಯರ ಹಾಗೂ ವಿಪ್ರ ಸಮಾಜ ಬಾಂಧವರ ಆಶೀರ್ವಾದದಿಂದಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ದೊರಕಿರುವುದು ಸಂತಸದಾಯಕವಾಗಿದೆ. ಯಾವುದೇ ವ್ಯಕ್ತಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದಲ್ಲಿ ಸೇವೆ ಸಲ್ಲಿಸಿದಲ್ಲಿ ಸೂಕ್ತವಾದ ಸ್ಥಾನಮಾನ ದೊರಕುವುದು ಎಂಬುವುದಕ್ಕೆ ತಾವೇ ಸಾಕ್ಷಿಯಾಗಿದ್ದು ಈ ಹಿನ್ನಲೆಯಲ್ಲಿ ಶಾಸಕ ಜನಾರ್ದನ್ ರೆಡ್ಡಿ ಮಾಜಿ ಶಾಸಕ ಪರಣ್ಣ ಮುನ್ನವಳ್ಳಿ ಸೇರಿದಂತೆ ಪಕ್ಷದ ಮುಖಂಡರನ್ನು ಸ್ಮರಿಸಿದರು. ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಮುರುಳಿದಾರ್ ಕುಲಕರ್ಣಿ ಮಾತನಾಡಿ ಸರ್ವರೊಂದಿಗೆ ಆತ್ಮೀಯವಾಗಿ ಗುರುತುಕು ಗುರುತಿಸಿಕೊಂಡಿರುವ ವಾಸುದೇವ್ ನವಲಿ ಅವರಿಗೆ ಸ್ಥಾಯಿ ಸಮಿತಿಯ ಅಧ್ಯಕ್ಷತೆಯಲ್ಲಿ ದೊರಕಿರುವುದು ವಿಪ್ರ ಸಮಾಜಕ್ಕೆ ಸಂತಸದಾಯಕವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಗನ್ನಾಥ್ ಆಲಂಪಲ್ಲಿ. ತಿರುಮಲ್ ರಾವ್. ರಾಘವೇಂದ್ರ ಮೇಗೂರು. ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಾಸುದೇವ ನವಲಿ ಅವರ ಗೆಳೆಯರು ಹಿತೈಷಿಗಳು ಮಹಿಳೆಯರು ಆತ್ಮೀಯವಾದ ಸನ್ಮಾನಿಸಿ ಗೌರವಿಸಿದರು.
