50ನೇ ವರ್ಷದ ಪುರಾಣ ಸುವರ್ಣ ಮಹೋತ್ಸವ ಶ್ರೀ ಮುಡ್ಡಾಣೇಶ್ವರ ದೇವಸ್ಥಾನದ ಮಹಾಮಂಗಲೋತ್ಸವ ,,

ಗಂಗಾವತಿ : ತಾಲ್ಲೂಕಿನ ಹಿರೇಜಂತಕಲ್ ನ ಮಡ್ಡಾಣೇಶ್ವರ ದೇವಸ್ಥಾನದಲ್ಲಿ 50ನೇ ವರ್ಷದ ಪುರಾಣ ಶುಭ ಸುವರ್ಣ ಮಹೋತ್ಸವವು ಶುಕ್ರವಾರದಿಂದ ಕವಿರತ್ನ ದ್ಯಾಂಪೂರ ಕಲ್ಲಿನಾಥ ಶಾಸ್ತ್ರೀಗಳು ವಿರಚಿತ ಕಲಬುರ್ಗಿ ಶರಣಬಸವೇಶ್ವರ ಮಹಾ ಪುರಾಣ ಪ್ರಾರಂಭೋತ್ಸವಗೊಂಡು 24.08.25 ರವಿವಾರದಂದು ಮಹಾ ಮಂಗಲಗೊಂಡಿತು.ರವಿವಾರದಂದು ಬೆಳಗ್ಗೆ ವಿಷೇಶ ಪೂಜಾ ವಿಧಿ-ವಿಧಾನಗಳು ಜರುಗಿದವು, ನಂತರ ಗಂಗೆ ಸ್ಥಳಕ್ಕೆ ಹೋಗಿ ಕಳಸ, ಕನ್ನಡಿ ಹಾಗೂ ಕುಂಭದೊಂದಿಗೆ ಮಧ್ಯಾಹ್ನ 1ಗಂಟೆಗೆ ದೇವಸ್ಥಾನ ತಲುಪಿ, ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಾನಗಳ ನಂತರ ಪುರಾಣ ಮಂಗಲಗೊಂಡಿತು.ಪುರಾಣ ಮಹಾಮಂಗಲದಲ್ಲಿ ಕುಂಭಹೊತ್ತ ಮಹಿಳೆಯರಿಗೆ ಹಾಗೂ ಭಕ್ತಾಧಿಗಳಿಗೆ ಶ್ರೀ ಚೆನ್ನಬಸವ ತಾತ ಭಕ್ತ ಮಂಡಳಿಯವರು ನೀರು ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡುವ ಮೂಲಕ ತಮ್ಮ ಭಕ್ತಿ ಸೇವೆ ಸಮರ್ಪಿಸಿದರು.

ನಂತರ ಮಧ್ಯಾಹ್ನ 1ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಗಳಲ್ಲಿ ಸಕಲ ಸಧ್ಭಕ್ತರು ಕಾರ್ಯಕ್ರಮಗಳಿಗೆ ಆಗಮಿಸಿ ತನು-ಮನ-ಧನದಿಂದ ಸೇವೆ ಸಲ್ಲಿಸಿದ್ದರಿಂದ ಮಡ್ಡಾಣೇಶ್ವರ ಸೇವಾ ಸಮಿತಿಯವರು ಭಕ್ತಾಧಿಗಳಿಗೆ ಅಭಿನಂದಿಸಿದರು.
