ಸೋಮವಾರದಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಭೂಮಿ ಪೂಜೆ…. ರೂಪಾರಾಣಿ ಲಕ್ಷ್ಮಣ ರೈಚೂರ್ …

ಸೋಮವಾರದಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಭೂಮಿ ಪೂಜೆ…. ರೂಪಾರಾಣಿ ಲಕ್ಷ್ಮಣ ರೈಚೂರ್ …

ಗಂಗಾವತಿ ನಗರದ ಆರ್ಯವೈಶ್ಯ ಸಮಾಜದ ಜಯನಗರದ ಮಾಂತಗುಂಡ ಶಾಲೆ ಹತ್ತಿರ ಇರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ಅಡಿಗಲು ಸಮಾರಂಭ ಇದೇ ದಿನಾಂಕ 25 ಸೋಮವಾರ ದಿನದಂದು ಜರುಗಲಿದೆ ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪ ರಾಣಿ ರೈಚೂರ್ ಹೇಳಿದರು. ಅವರು ಶನಿವಾರದಂದು ವಾಸವಿ ಕಾರ್ಯಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ. ಅಂದು ಬೆಳಿಗ್ಗೆ ಗಂಗೆ ಪೂಜೆ. ಪೂರ್ಣ ಕುಂಭದೊಂದಿಗೆ ಶ್ರೀ ನಗರೇಶ್ವರ ದೇವಸ್ಥಾನದಿಂದ ಸಕಲ ವಾದ್ಯ ವೈಭವದೊಂದಿಗೆ ದೇವಸ್ಥಾನ ನಿರ್ಮಾಣದ ಸ್ಥಳಕ್ಕೆ ಹೋಗಲಾಗುತ್ತಿದ್ದು. ಭೂಮಿ ಪೂಜೆಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು. ನಗರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ದಿಗಂಬರ್ ಭಟ್ ಜೋಶಿ ನೆರವೇರಿಸ ಲಿದ್ದು. ಸಮಸ್ತ ಆರ್ಯವೈಶ್ಯ ಸಮಾಜ ಬಾಂಧವರು ಆಗಮಿಸಬೇಕೆಂದು ಮನವಿ ಮಾಡಿದರು. ಕಾರ್ಯದರ್ಶಿ ಈಶ್ವರ ಶೆಟ್ಟಿ ಮಾತನಾಡಿ. ಗಂಗಾವತಿ ಆರ್ಯವೈಶ್ಯ ಸಮಾಜದ ಹಲವು ದಶಕಗಳ ಕನಸು ನನಸಾಗುವ ದಿನ ಸಮೀಪಸು ತ್ತಿದ್ದು. ಕುಲದೇವತೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣ ಭೂಮಿ ಪೂಜ ಕಾರ್ಯಕ್ರಮಕ್ಕೆ ಶಾಸಕರಾದ ಗಾಲಿ ಜನಾರ್ದನ್ ರೆಡ್ಡಿ ಸಂಸದರಾದ ರಾಜಶೇಖರ್ ಹಿಟ್ನಾಳ್ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಮಾಜಿ ವಿಧಾನಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ಸೇರಿದಂತೆ ಇತರ ರಾಜಕೀಯ ಮುಖಂಡರು ಭಾಗವಹಿಸಲಿದ್ದು ಸಮಾಜದ ಹಿರಿಯರು ಕುಟುಂಬ ಸಮೇತ ಭೂಮಿ ಪೂಜೆ ಅಡಿಗಲು ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೊಳಿಸಬೇಕೆಂದು ತಿಳಿಸಿದರು. ಆರ್ಯವೈಶ್ಯ ಸಮಾಜ ಮಹಿಳಾ ಅಧ್ಯಕ್ಷರಾದ ಭಾಗ್ಯ ಈಶ್ವರ್ ಶ್ರೇಷ್ಠಿ. ಉಪಾಧ್ಯಕ್ಷರಾದ ಜಿ ಸುರೇಶ ಶ್ರೇಷ್ಠಿ. ಕಾರ್ಯದರ್ಶಿ ಈಶ್ವರ ಶ್ರೇಷ್ಠಿ. ಖಜಂಚಿ ಮಾರುತಿ ಪ್ರಸಾದ್ ರಾಯಚೂರು. ಯುವ ಘಟಕದ ಅಧ್ಯಕ್ಷ ಪ್ರಸಾದ ಪಾಂಘಂಟಿ ಸೇರಿದಂತೆ ಇತರರು ಭೂಮಿ ಪೂಜ ಸಮಾರಂಭ ಕುರಿತು ಮಾತನಾಡಿದರು….

Leave a Reply

Your email address will not be published. Required fields are marked *