ಯುವ ಸೇವಾ 11ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಎಫ್ ಸಿ ಸಿ ಹುಲಿಗಿ ತಂಡಕ್ಕೆ ಯುವಸೇವಾ ಕಿರೀಟ…

ಯುವ ಸೇವಾ 11ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಎಫ್ ಸಿ ಸಿ ಹುಲಿಗಿ ತಂಡಕ್ಕೆ ಯುವಸೇವಾ ಕಿರೀಟ…

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದಲ್ಲಿ ಯುವ ಸೇವಾ ಸಂಘದ 11ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಗ್ರಾಮೀಣ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್-2025 ಫೈನಲ್ ನಲ್ಲಿ ಶ್ರೀರಾಮನಗರದ ವಕ್ರ ರಾಯಲ್ಸ್ ತಂಡದ ವಿರುದ್ಧ ಎಫ್.ಸಿ.ಸಿ ಹುಲಿಗಿ ತಂಡದ ಹುಡುಗರು ಭಾನುವಾರದಂದು ಗೆಲುವಿನ ಕೇಕೆ ಹಾಕಿದರು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವಕ್ರ ರಾಯಲ್ಸ್ ತಂಡ 12.1 (14) ಓವರ್ ಗಳಲ್ಲಿ 106ರನ್ ಗಳಿಸಿ ಎಲ್ಲಾ ವಿಕೆಟ್ ಪತನಗೊಂಡವು. 107 ರನ್ ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಹುಲಿಗಿ ತಂಡ 13.3 ಓವರ್ ಗಳಲ್ಲಿ 7ವಿಕೆಟ್ ನಷ್ಟಕ್ಕೆ 110 ಗಳಿಸುವ ಮುಖಾಂತರ ಜಯಭೇರಿ ಭಾರಿಸಿತು.ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಪವನ್ ದುಂಗಾಡಿ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಟ್ಟಾರೆ ಟೂರ್ನಮೆಂಟ್ ನಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್‌ ಹಾಗೂ ಮ್ಯಾನ್ ಆಪ್ ದಿ ಸೀರಿಸ್ ಪದಕವನ್ನು ವಕ್ರ ರಾಯಲ್ಸ್ ತಂಡದ ಆಲ್ ರೌಂಡರ್ ಸಲಾರ್ ರಾಜು ಪಡೆದರು. ಅದೇರೀತಿ ಬೆಸ್ಟ್ ಬಾಲರ್ ಹುಲಿಗಿಯ ಪವನ್ ಕುಮಾರ್ ದುಂಗಾಡಿ ಹಾಗೂ ಬೆಸ್ಟ್ ಫಿಲ್ಡರ್ ಪದಕವನ್ನು ವಕ್ರ ತಂಡದ ಕೃಷ್ಣಾ ಯಾದವ್ ಪಡೆದರು.ಈ ವೇಳೆ ಮಾತನಾಡಿದ ಯುವ ಸೇವಾ ಸಂಘದ ಅಧ್ಯಕ್ಷ ಕೆ.ಪವನ್ ಕುಮಾರ್ ಅವರು, ಮಳೆಯ ಅಡಚಣೆ ನಡುವೆಯೂ ಸುಮಾರು 40ದಿನಗಳ ಕಾಲ ನಡೆದ ಯುವ ಸೇವಾ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ನೆರವೇರಿದ್ದು. ರಾಜ್ಯದ ವಿವಿಧ ಭಾಗದಿಂದ ಸುಮಾರು 40ಕ್ಕೂ ಅಧಿಕ ತಂಡಗಳ ಯುವ ಆಟಗಾರರು ಭಾಗವಹಿಸಿ ಯಶಸ್ವಿಯಾಗಿ ನೆರವೇರಲು ಸಹಕಾರ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಟೂರ್ನಮೆಂಟ್ ಯಶಸ್ವಿಗಿ ನಡೆಯಲು ಸಹಕಾರ ನೀಡಿದ ಸಚಿವರಾದ ಶಿವರಾಜ್ ತಂಗಡಗಿ ಅವರಿಗೂ, ಪ್ರಥಮ ಬಹುಮಾನ 1,11,111 ಮೊತ್ತ ನೀಡಿದ ಮನ್ನೆ ರಾಮು, ದ್ವಿತೀಯ ಬಹುಮಾನ 51,111 ನೀಡಿದ ಜಿ.ಹರಿಬಾಬು, ಸಮವಸ್ತ್ರ ಕೊಡುಗೆ ನೀಡಿದ ವಿಶಾಲಾಕ್ಷಿ ಕಂನ್ಟ್ರಕ್ಷನ್ಸ್, ಎಲ್ಲಾ ಟ್ರೋಫಿ ನೀಡಿದ ಮಹದೇವ್ ಸ್ಟೀಲ್ಸ್ ಗಂಗಾವತಿ ಹಾಗೂ ನೀರಿನ ವ್ಯವಸ್ಥೆ ಮಾಡಿದ ಡಿಆರ್.ರಘು ಅವರಿಗೆ ಹಾಗು ವ್ಯವಸ್ಥಿತವಾಗಿ ನಡೆಸಿದ ಕಮಿಟಿಯ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿದರು.ಪಂದ್ಯ ಆರಂಭಕ್ಕೂ ಮುನ್ನ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಟಾಸ್ ಹಾಕಿ ನಂತರ ಉಭಯ ತಂಡಗಳಿಗೆ ಶುಭ ಕೋರಿದ್ದರು.

ಈ ವೇಳೆ ರೆಡ್ಡಿ ಶ್ರೀನಿವಾಸ್, ಮನ್ನೆ ಕೃಷ್ಣಮೂರ್ತಿ, ಜಿ.ಹರಿಬಾಬು, ಕೆ.ಸುಬ್ರಮಣ್ಯೇಶ್ವರ ರಾವ್, ಮನ್ನೆ ರಾಮು, ಮಹಮ್ಮದ್ ರಫಿ, ಕೆ.ನಾಗೇಶ್ವರರಾವ್, ಪೊಟ್ಲೂರಿ ಸ್ವಾಮಿ, ಬುಲ್ಲಿ ಕಾಪು, ಗ್ರಾಪಂ ಸದಸ್ಯ ಮೆಹಬೂಬ್, ಮುನ್ನಾ, ಡಾ.ಸತೀಶ್ ಸೇರಿದಂತೆ ಗ್ರಾಮದ ಕ್ರೀಡಾಭಿಮಾನಿಗಳು ಇದ್ದರು.

Leave a Reply

Your email address will not be published. Required fields are marked *