ಶ್ರೀಜಡೆಸಿದ್ಧ ಶಿವಯೋಗಿಗಳ ಮೂಲಗದ್ದುಗೆಯ ಅದ್ದೂರಿ ಹೂವಿನ ಮಹಾರಥೋತ್ಸವ.

ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಪವಾಡ ಪುರುಷರಾದ ಶ್ರೀಜಡೆಸಿದ್ದ ಶಿವಯೋಗಿಗಳ ಮೂಲಗದ್ದುಗೆಯ ಅದ್ದೂರಿ ಹೂವಿನ ಮಹಾರಥೋತ್ಸವವು ಇಂದು ಬೆಳಿಗ್ಗೆ ಜರುಗಿತು.ಶ್ರೀಜಡೆಸಿದ್ದ ಯೋಗಿಗಳ ಮೂಲ ಗದ್ದುಗೆಗೆ ವಿವಿಧ ಅಭಿಷೇಕಗಳು, ಹೂವಿನ ಅಲಂಕಾರ, ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿಗಳು ಶ್ರದ್ಧೆ, ಭಕ್ತಿಗಳಿಂದ ಜರುಗಿದವು. ಮೂಲಗದ್ದುಗೆಯ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮದ ಹಂಪಿ ಸಾವಿರದೇವರು ಮಹಾಂತರ ಮಠದ ಪೀಠಅಧಿಪತಿಗಳಾದ ಶ್ರೀ 108 ವಾಮದೇವ ಮಹಾಂತ ಶಿವಾಚಾರ್ಯ ಭಾಗವಹಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಅಶೀರ್ವಚನ ನೀಡಿದ ಶ್ರೀಗಳು ಹಬ್ಬ, ಹರಿದಿನಗಳು, ಜಾತ್ರೆ, ರಥೋತ್ಸವಗಳ ಆಚರಣೆಯಿಂದ ಸರ್ವರಿಗೂ ಮಾನಸಿಕ, ಶಾಂತಿ ನೆಮ್ಮದಿ ದೊರಕಲಿದೆ. ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆ,ಭಕ್ತಿಗಳಿಂದ ಭಾಗವಹಿಸಬೇಕು ಎಂದರು.ನAತರ ವೈವಿದ್ಯಮಯ ಹೂಗಳಿಂದ ಅಲಂಕರಿಸಿದ್ದ ಹೂವಿನ ರಥದಲ್ಲಿ ಶ್ರೀಜಡೆಸಿದ್ದ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೂವಿನ ಮಹಾರಥೋತ್ಸವಕ್ಕೆ ಸ್ವಾಮೀಜಿಗಳು ಸೇರಿದಂತೆ ಗ್ರಾಮದ ಗಣ್ಯರು ಚಾಲನೆ ನೀಡಿದರು. ರಥೋತ್ಸವದಲ್ಲಿ ಮುತೈದೆಯರ ಕಳಸ, ಕನ್ನಡಿ, ಮಂಗಳ ವಾದ್ಯಗಳು, ತಾಷಾರಾಂಡೋಲ್, ಡೊಳ್ಳುಗಳು ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ವಿಶೇಷ ಮೆರಗನ್ನು ನೀಡಿದ್ದವು. ಹೂವಿನ ರಥವು ಗ್ರಾಮದ ರಾಜಬೀದಿಯಲ್ಲಿ ಸಾಗಿ ಎದರು ಬಸವಣ್ಣವರೆಗೆ ತೆರಳಿ, ಪುನಃ ಮರಳಿ ಮೂಲಗದ್ದುಗೆಗೆ ಬಂದು ತಲುಪಿತು.ಹೂವಿ ರಥೋತ್ಸವದಲ್ಲಿ ಸ್ವಾಮೀಜಿಗಳು, ಗ್ರಾಮದ ಮುಖಂಡರು, ವಿವಿಧ ಸಮಾಜಗಳ ಮುಖಂಡರು, ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.ವರದಿ : ಜಿಲಾನಸಾಬ್ ಬಡಿಗೇರ್
