ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಕಾರ್ಯಕ್ರಮ.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಕಾರ್ಯಕ್ರಮ.

ಕೊಪ್ಪಳ : ಇಲ್ಲಿನ ಸರಕಾರಿ ಪ್ರೌಢ ಶಾಲೆ ಬೆಟಗೇರಿಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲೆಯ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ತಾವಿಕವಾಗಿ ಗ್ರಂಥಪಾಲಕ ಮರ್ದಾನಲಿ ಗಡಾದ ಮಾತನಾಡಿ ಪ್ರತಿ ವರ್ಷ ಪೆಬ್ರುವರಿ 14 ರಿಂದ 20 ರ ವರೆಗೆ ಒಂದು ವಾರಗಳ ಕಾಲ ಗ್ರಂಥಾಲಯ ಸಪ್ತಾಹ ದಿನ ವಾಗಿ ಆಚರಿಸಲಾಗುತ್ತದೆ. ಅದರಂತೆ ನಮ್ಮ ಶಾಲೆಯ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳನ್ನು ಪ್ರದರ್ಶನ ಮಾಡಲಾಗಿತ್ತಿದೆ. ಇಂದಿನ ಮಕ್ಕಳಲ್ಲಿ ಮೊಬೈಲ್ ನೋಡುವ ಗೀಳು ಹೆಚ್ಚಾಗಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನ ಹಿರಿಯ ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ ಮಾತನಾಡಿ ಮನೆ ಬೆಳಗಲು ದೀಪ ಬೇಕು, ಮನ ಬೆಳಗಲು ಪುಸ್ತಕ ಬೇಕು ನಮ್ಮ ಶಾಲೆಯಲ್ಲಿ ಸುಸಜ್ಜಿತ ಗ್ರಂಥಾಲಯವಿದ್ದು ಅದನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಜಾಸಾಬ್ ಬಳಿಗಾರ್, ರವಿಕಿರಣ್ ಟಿಕಾರೆ, ನಾರಾಯಣಪ್ಪ ಬಿಸನಳ್ಳಿ, ಶಾಂತವೀರಯ್ಯ ಕಳ್ಳಿಮಠ, ಸುನೀತಾ ಯಾಳಗಿ, ಸೋಮಪ್ಪ ತಳಕಲ್, ಪರಶುರಾಮ್ ಯಡವಟ್ಟಿ ಹಾಜರಿದ್ದರು.ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *