ದುಂಡಗಿ ಶಾಲೆಗೆ ನೂತನ ಎಸ್ ಡಿ ಎಂ ಸಿ ರಚನೆ: ಅಧ್ಯಕ್ಷರಾಗಿ ರಾಘವೇಂದ್ರ ಬುಕ್ಕನಟ್ಟಿ,ಉಪಾಧ್ಯಕ್ಷರಾಗಿ ವೀಣಾ ಬಸವರಾಜ್ ಗೋಮರ್ಸಿ ಅವಿರೋಧ ಆಯ್ಕೆ.

ದುಂಡಗಿ ಶಾಲೆಗೆ ನೂತನ ಎಸ್ ಡಿ ಎಂ ಸಿ ರಚನೆ: ಅಧ್ಯಕ್ಷರಾಗಿ ರಾಘವೇಂದ್ರ ಬುಕ್ಕನಟ್ಟಿ,ಉಪಾಧ್ಯಕ್ಷರಾಗಿ ವೀಣಾ ಬಸವರಾಜ್ ಗೋಮರ್ಸಿ ಅವಿರೋಧ ಆಯ್ಕೆ.

ಕಾರಟಗಿ: ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮ ಪಚಾಯತಿ ವ್ಯಾಪ್ತಿಯ ತೊಂಡಿಹಾಳ ಕ್ಯಾಂಪ್ (ದುಂಡಗಿ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2025-26 ನೇ ಸಾಲಿನ ನೂತನ ಎಸ್ ಡಿ ಎಮ್ ಸಿ ರಚನೆ ಮಾಡಲಾಯಿತು. 52 ವಿದ್ಯಾರ್ಥಿಗಳಿದ್ದು 18 ಸದಸ್ಯರನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಾಘವೇಂದ್ರ ಶರಣಪ್ಪ ಬಿಕ್ಕನಟ್ಟಿ,ಉಪಾಧ್ಯಕ್ಷರಾಗಿ ವೀಣಾ ಬಸವರಾಜ್ ಗೋಮರ್ಸಿ ಇವರನ್ನ ಕೂಡ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗ್ರಾಮದ ಹಿರಿಯರ,ಯುವಕರ ಶಿಕ್ಷಣ ಪ್ರೇಮಿಗಳ ನೂತನ ಶಾಲಾ ಸುಧಾರಣ ಸಮಿತಿ ರಚಿಸುವಲ್ಲಿ ಯಶಸ್ವಿಯಾದರು. ಕೆಲಕಾಲ ಶಾಲೆಯ ಅಭಿವೃದ್ಧಿ ಬಗ್ಗೆ ಪರಸ್ಪರ ಚರ್ಚಿಸಿ ಶಿಕ್ಷಣ ಮತ್ತು ಶಾಲೆಯ ಬಗ್ಗೆ ಕಳಕಳಿ ಇರುವವರನ್ನ ಆಯ್ಕೆ ಮಾಡಬೇಕು ಅಂತ ಒಮ್ಮತದ ನಿರ್ಧಾರಗೈದು ಯಾವುದೇ ಅಹಿತಕರ ಘಟನೆ ನಟೆಯದಂತೆ ಶಾಂತರೀತಿಯಲ್ಲಿ ಎಸ್ ಡಿ ಎಂ ಸಿ ರಚಿಸಿದರು. ಅಧ್ಯಕ್ಷ ಉಪಾಧ್ಯಕ್ಷರು ನಮ್ಮೂರ ಶಾಲೆ ಉಳಿಸಿ ಬೆಳೆಸಲು ಅವಿರತವಾಗಿ ಶ್ರಮಿಸುವುದಾಗಿಳಿ ಹೇಳಿದರು. ಈ ಸಂದರ್ಭದಲ್ಲಿ ನೂತನ ಎಸ್,ಡಿ,ಎಮ್,ಸಿ ಸದಸ್ಯರಾದ ವಿಜಯಕುಮಾರ ಹಿರೇಮನಿ,ಮಲ್ಲಪ್ಪ ಹಣವಾಳ,ರವಿಚಂದ್ರ ವಿರಾಪೂರ,ಕರಿಯಪ್ಪ ಸಿಂಗನಾಳ,ವೀರೇಶ ನವಲಿ,ಯಮನೂರ ತಳವಾರ,ಮಲ್ಲಮ್ಮ ದೇವಪ್ಪ ಕೊಪ್ಪಳ,ರೇಣುಕಮ್ಮ ವಿರುಪಣ್ಣ ವೀರಾಪೂರ,ಶ್ರೀದೇವಿ ಚೌಡಪ ಹಿರೇಮನಿ,ನಾಗಮ್ಮ ಶ್ಯಾಮಣ್ಣ ಮೆತ್ತಿನಾಳ,ಹುಲಿಗೆಮ್ಮ ಬಸವರಾಜ್ ಮಂಗಳಾಪೂರ,ಪಾರ್ವತಿ ಹನುಮೇಶ ಜೂರಟಗಿ,ಬೀಮಮ್ಮ ರಮೇಶ ಕೊಪ್ಪಳ,ಯಮನಮ್ಮ ಈರಪ್ಪ,ಬಸವರಾಜ್ ಕೊಟ್ರಪ್ಪ ಚಲವಾದಿ,ಬಸಮ್ಮ ಪಂಪಾಪತಿ ಆಯ್ಕೆಯಾಗಿದ್ದಾರೆ.ಇನ್ನು ನಾಮನಿರ್ದೇಶನ ಸದಸ್ಯರಾಗಿ ವೀರನಗೌಡ ಪೋಲಿಸ್.ಪಾಟೀಲ್,ಮಲ್ಲಪ್ಪ ತಳವಾರ,ದೇವರಾಜ್ ಹಿರೇಮನಿ, ಪದನಿಮಿತ್ಯ ಸದಸ್ಯರಾಗಿ ಪಾಲಕ್ಷಪ್ಪ ಹಿರೇಮನಿ, ಶರಣಪ್ಪ ಚಲವಾದಿ,ಬಸವರಾಜ್ ಬೆಣಕಲ್ ಇವರನ್ನ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಹೋಮಣ್ಣ,ಅಥಿತಿ ಶಿಕ್ಷಕರಾದ ಹನುಮಂತ,ಸೋಮನಾಥ,ಈರಮ್ಮ ಸೇರಿದಂತೆ ಶೇಶಪ್ಪ ಹಿರೇಮನಿ,ನಿಂಗಪ್ಪ,ದ್ಯಾಮಣ್ಣ,ಭೀಮೇಶ ಕೊಪ್ಪಳ,ಮೌನೇಶ ನಾಡಿಗೇರ,ಗಂಗಪ್ಪ ಮಳಗಡ್ಡಿ,ಯಂಕೋಬ,ಅಯ್ಯಪ್ಪ,ನಾಗಪ್ಪ ಕೊಪ್ಪಳ,ಸೋಮನಾಥ ಕೊಪ್ಪಳ, ಬಸವರಾಜ್ ಸೇರಿದಂತೆ ಶಿಕ್ಷಣ ಪ್ರೇಮಿಗಳು ಗ್ರಾಮಸ್ಥರು ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *