ಉನ್ನತ ಶಿಕ್ಷಣದಿಂದ ಸಧೃಡ ಗ್ರಾಮಗಳ ನಿರ್ಮಾಣಕ್ಕೆ ಯುವಕರು ಮುಂದಾಗಿ – ಪ್ರೊ. ಕರಿಗೂಳಿ..

ಕೊಪ್ಪಳ ವಿಶ್ವವಿದ್ಯಾಲಯದ ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ, ಸಹಪಠ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆಯ ಅಂಗವಾಗಿ ದಿನಾಂಕ 19.09.2025ರಂದು ವಿನೂತನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಜೊತೆಗೆ ನೂತನವಾಗಿ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆದ ಬಿ,ಎ, ಬಿ.ಕಾ.ಂ (ಸಾಮಾನ್ಯ )ಮತ್ತು ಬಿ.ಕಾo AEDP BFSI ಕೋರ್ಸಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಸಂಭ್ರಮ-ಸಡಗರದಿಂದ ಸಾಂಪ್ರದಾಯಿಕ ಉಡುಗೆಗಳಲ್ಲಿ ಭಾಗವಹಿಸಿದ್ದು ವಿಶೇಷ. ಈ ಕಾರ್ಯಕ್ರಮದಲ್ಲಿ ಘನ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕರಿಗೂಳಿ ಅವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಳ್ಳಿ-ಹಳ್ಳಿಗಳಿಂದ ಬರುತ್ತಿದ್ದು ಅವರಿಗೆ ಅಗತ್ಯವಿರುವ ಸಾರಿಗೆ ವ್ಯವಸ್ಥೆ ಮಾಡಲಾಗುವುದು, ಉತ್ತಮ ಗ್ರಂಥಾಲಯ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತಿಭಾನ್ವಿತ ಪ್ರಾಧ್ಯಾಪಕರಿಂದ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ ಡಿಜಿಟಲ್ ಪರಿಕರಗಳ ಮೂಲಕ ಪಾಠ ಪ್ರವಚನದ ವ್ಯವಸ್ಥೆ ಮಾಡಲಾಗಲಗುವುದು, ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರ ಈ ಎಲ್ಲಾ ಸೌಲಭ್ಯಗಳನ್ನು ಪಡೆದು ಉನ್ನತ ಶಿಕ್ಷಣದ ಮೂಲಕ ಗ್ರಾಮೀಣಭಿವೃದ್ಧಿಗೆ ಮುಂದಾಗಿ ಗ್ರಾಮರಾಜ್ಯದ ನಾಯಕರಾಗಿ ಎಂದು ಕರೆ ಕೊಟ್ಟರು. ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತಮಟ್ಟಕ್ಕೆ ಬೆಳೆದರೆ ಕಾಲೇಜಿಗೆ ಅಷ್ಟೇ ಅಲ್ಲದೇ ನಿಮ್ಮ ಕುಟುಂಬಕ್ಕೂ ಮತ್ತು ನಿಮ್ಮ ಹಳ್ಳಿಗೂ ಕೀರ್ತಿ ಬರುತ್ತದೆ. ವಿದ್ಯಾರ್ಥಿಗಳಾದ ನಿಮ್ಮ ಯಶಸ್ಸಿನಲ್ಲಿಯೇ ಕಾಲೇಜಿನ ಕೀರ್ತಿ ಅಡಗಿದೆ. ಹಾಗಾಗಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉನ್ನತವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.ಇವತ್ತಿನ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಡಾ. ಸರಫರಾಜ್ ಅಹ್ಮದ್ ಅವರು ನಮ್ಮದು ಹಳ್ಳಿಯ ಕಾಲೇಜು ಆದರೂ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿನೂತನ ಕೋರ್ಸ್ಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಗುಣಾತ್ಮಕ ಬದಲಾವಣೆಗಾಗಿ ಶ್ರಮಪಡುತ್ತಿದ್ದೇವೆ ಎಂದು ತಿಳಿಸಿದರು.

ಈ ಅನುಕೂಲಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಉತ್ಸಾಹ ತೋರಬೇಕು, ಆ ಮೂಲಕ ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು. ಅದಕ್ಕಾಗಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಕಾಲೇಜಿನ ಪ್ರಾಧ್ಯಾಪಕರ ಜೊತೆಗೆ ಗ್ರಾಮ ಮುಖಂಡರು ಹಾಗೂ ಶಿಕ್ಷಣ ಪ್ರೇಮಿಗಳು ಸದಾ ಸನ್ನದ್ಧರಾಗಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಪ್ರಾಂಶುಪಾಲರಾದ ಡಾ. ಶೋಭಾ ಕೆ.ಎಸ್. ಹಾಗೂ ಈ ಹಿಂದೆ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ತಾತಪ್ಪ ಕೆ ಅವರನ್ನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳು ಮಾತನಾಡುತ್ತಾ ವಿದ್ಯಾರ್ಥಿಗಳು ಶಿಕ್ಷಣದ ಮೂಲಕವೇ ಉನ್ನತ ಹಂತಕ್ಕೆ ಹೋಗಲು ಸಾಧ್ಯವಿದೆ, ಅದಕ್ಕೆ ಈ ಕಾಲೇಜಿನಲ್ಲಿಯೇ ವಿದ್ಯಾಭ್ಯಾಸ ಮಾಡಿದವರು ಇಂದು ಉನ್ನತ ಹಂತಕ್ಕೆ ಏರಿದವರು ಸಾಕಷ್ಟು ಜನರಿದ್ದಾರೆ. ಅಂತಹ ಉನ್ನತ ಹಂತಕ್ಕೆ ಏರಲು ನಿಮಗೂ ಸಾಧ್ಯವಿದೆ, ಆದರೆ ಅದಕ್ಕೆ ಅದಮ್ಯ ಶ್ರದ್ಧೆ ಅಗತ್ಯ ಎಂದು ಕಿವಿಮಾತು ಹೇಳಿದರು. ಈ ಕಾಲೇಜಿನಲ್ಲಿ ಪದವಿಯ ಎಲ್ಲಾ ಸೆಮಿಸ್ಟರ್ಗಳನ್ನು ಸೇರಿ ಹೆಚ್ಚು ಅಂಕಗಳನ್ನು ಪಡೆಯುವ ಬಿ.ಎ ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿಯು ಇದೇ ಸಂದರ್ಭದಲ್ಲಿ ಕನ್ನಡ ಅಧ್ಯಾಪಕ ಕೆ ತಾತಪ್ಪ ರವರು ಘೋಷಣೆ ಮಾಡಿದರು. *ವಿನೂತನ ಬಿ.ಕಾo ಕೋರ್ಸ್ ಆರಂಭ*ಇದೇ ಸಂದರ್ಭದಲ್ಲಿ ಭಾರತ ದೇಶದಲ್ಲಿ ಮೊಟ್ಟಮೊದಲು ಮಹಾರಾಷ್ಟ್ರ ನಂತರ ತೆಲಂಗಾಣ ಹಾಗೂ ಮೂರನೇ ರಾಜ್ಯವಾಗಿ ಕರ್ನಾಟಕ ಕೌಶಲ್ಯ – ಸಹಾಯಧನ- ಉದ್ಯೋಗ ಆಧಾರಿತ ಕೋರ್ಸ್ ಗಳನ್ನು ಆರಂಭಿಸಿವೆಇಡೀ ಕರ್ನಾಟಕದಲ್ಲೇ ಮೊಟ್ಟ ಮೊದಲು ಎಂಬಂತೆ 2025-26 ನೇ ಸಾಲಿನಲ್ಲಿ ಈ ಭಾಗದ ಶ್ರೀರಾಮನಗರದಂತಹ ಹಳ್ಳಿ ಕಾಲೇಜಿನಲ್ಲಿಯೇ ನೂತನವಾಗಿ ಈ ಬಿ.ಕಾಂ-ಎ.ಇ.ಡಿಪಿ-ಬಿ.ಎಫ್.ಎಸ್.ಐ ಎಂಬ ಕೋರ್ಸ್ ಪ್ರಾರಂಭಿಸಲಾಗಿದೆ. ಎಲ್ಲಾರ ಸಮ್ಮುಖದಲ್ಲಿ ಈ ಕೋರ್ಸ್ ಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಎಲ್ಲಾ ಕಾರ್ಯಕ್ರಮದ ಕುರಿತು ಸಹಾಯಕ ಪ್ರಾಧ್ಯಾಪಕರಾದ ವೀರೇಶ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಐಕ್ಯೂಎಸಿ ಸಂಚಾಲಕರಾದ ರವಿಕುಮಾರ, ಸಹಾಯಕ ಪ್ರಾಧ್ಯಾಪಕರಾದ ಡಾ. ಶಶಿಕುಮಾರ, ಶಂಕ್ರಪ್ಪ ಎಂ, ವಿರುಪಾಕ್ಷ ಕೆ. ಮತ್ತು ಆಡಳಿತ ಸಿಬ್ಬಂದಿಯಾದ ಜಬೀನಾ ಬೇಗಂ, ವಿನಾಯಕ, ಚಿನ್ನ ವರಪ್ರಸಾದ್, ಶರಣ ಮತ್ತು ಶಾಂತಿ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ನಡೆಸಿಕೊಡಲಾಯಿತು. *ದೀಪಿಕಾ-ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಲೋಕಾರ್ಪಣೆ ಕಾರ್ಯಕ್ರಮದ ವೀಕ್ಷಣೆ.* ಉನ್ನತ ಶಿಕ್ಷಣ ಇಲಾಖೆಯ ಆದೇಶದಂತೆ ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅಜೀo ಪ್ರೇಮ್ ಜೀ ಫೌಂಡೇಶನ್ ಹಾಗೂ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜರುಗಿದ, ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ ಉತ್ತೀರ್ಣರಾಗಿ ಹಾಗೂ 12ನೇ ತರಗತಿ ಸರ್ಕಾರಿ ಕಾಲೇಜಿನಲ್ಲಿ ಉತ್ತೀರ್ಣ ರಾಗಿ 2025-26 ನೇ ಸಾಲಿನಲ್ಲಿ ಸ್ನಾತಕ ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರಿಗೆ ನೀಡುವ ವಾರ್ಷಿಕ 30000 ರೂಪಾಯಿ ಶಿಷ್ಯವೇತನದ ಕುರಿತ ಕಾರ್ಯಕ್ರಮ ‘ದೀಪಿಕಾ’ ವನ್ನು ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ವಿಜಯೀಭವ ಯುಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರವಾದ ಕಾರ್ಯಕ್ರಮವನ್ನು ವೀಕ್ಷಿಸಲು ಕಾಲೇಜಿನಲ್ಲಿ ವ್ಯವಸ್ಥೆ ಕಲ್ಪಿಸಿ ಈ ಕುರಿತು ಜಾಗೃತಿ ಮೂಡಿಸಲಾಯಿತು ಹಾಗೂ ಕಾಲೇಜಿನ ವತಿಯಿಂದಲೇ ಅರ್ಹ ವಿದ್ಯಾರ್ಥಿನಿಯರಿಗೆ ಈ ಶಿಷ್ಯವೇತನಕ್ಕೆ ನೊಂದಣಿ ಮಾಡಿಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು ನಮ್ಮ ಭಾಗದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಈ ಶಿಷ್ಯವೇತನ ಅತ್ಯಂತ ಸಹಕಾರಿ ಆದುದರಿಂದ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಪ್ರಾಚಾರ್ಯರು ಹೇಳಿದರು. ಈ ಕಾರ್ಯಕ್ರಮ ಮೊದಲ ವರ್ಷದ ವಿದ್ಯಾರ್ಥಿನಿಯರು ಹಾಗೂ ಎಲ್ಲಾ ಅಧ್ಯಾಪಕರಿದ್ದರು.

