ಶ್ರೀ ಗಂಗಾಮಾತಾ ದೇವಿಗೆ ವಿಶೇಷ ಪೂಜಾ…

ಗಂಗಾವತಿ : ಶ್ರಾವಣ ಮಾಸದ ಕೊನೆಯ ಶುಕ್ರವಾರ ಪ್ರಯುಕ್ತ ಶ್ರೀ ಗಂಗಾಮಾತಾ ದೇವಿಗೆ ವಿಶೇಷ ಪೂಜಾ ನೆರವೇರಿಸಲಾಯಿತು. ಶ್ರೀ ಗಂಗಾಮಾತ ದೇವಿಗೆ ಅಭಿಷೇಕ ಕುಂಕುಮರ್ಚನೆ ಮಹಾಮಂಗಳಾರತಿ ವಿವಿಧ ಧಾರ್ಮಿಕ ಪೂಜಾ ಪುನಸ್ಕಾರಗಳು ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ತಾಲೂಕು ಅಧ್ಯಕ್ಷ ಬೈರೇಶ್, ಜಂಬಣ್ಣ, ರಾಘವೇಂದ್ರ, ಗಿರೀಶ್, ದೇವರಾಜ್, ಚಂದ್ರ, ಹನುಮೇಶ್ ಪೂಜಾರಿ, ಶ್ರೀಕಾಂತ್, ಮಂಜುನಾಥ್, ಅರ್ಚಕರು ಶರತ್ ದಂಡಿನ್, ಬಸವರಾಜ್, ರಾಮಲಿಂಗಮ್ಮ, ಚಾಮುಂಡೇಶ್ವರಿ, ಶಾರದ, ಜಯಶ್ರೀ ಬಿ, ಉಪಸ್ಥಿತರಿದ್ದರು.
