ಹಿರೇಬೆಣಕಲ್: ಇತಿಹಾಸಪೂರ್ವ ಶಿಲಾಚಿತ್ರಗಳಿಂದಲೂ ಕೂಡಿದ ಅದ್ಭುತ ನೆಲೆ ಜಾಗತಿಕ ಮನ್ನಣೆಗೆ ಸಿದ್ಧ…

ಗಂಗಾವತಿ: ಕಲೆ, ಸಂಸ್ಕೃತಿ, ಮತ್ತು ಇತಿಹಾಸದ ಅಪೂರ್ವ ಸಂಗಮವಾದ ಹಿರೇಬೆಣಕಲ್ ನೆಲೆಯು ಈಗ ಬೆಂಗಳೂರಿನ ವಿಧಾನಸೌಧದ ಪ್ರತಿಷ್ಠಿತ ಪ್ರದರ್ಶನದ ಮೂಲಕ ನಾಡಿನ ಜನತೆಯನ್ನು ಆಹ್ವಾನಿಸುತ್ತಿದೆ. ರಾಜ್ಯ ಪ್ರವಾಸೋದ್ಯಮ ಮಂತ್ರಿ ಎಚ್.ಕೆ. ಪಾಟೀಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟಿಸಲ್ಪಟ್ಟ ಛಾಯಾಚಿತ್ರ ಪ್ರದರ್ಶನವು ಈ ನೆಲೆಯ ಅಪಾರ ಮಹತ್ವಕ್ಕೆ ರಾಜ್ಯದ ಅತ್ಯುನ್ನತ ಮನ್ನಣೆ ನೀಡಿದೆ.ಹಿರೇಬೆಣಕಲ್ ಕೇವಲ ಒಂದು ಪುರಾತತ್ವ ಸ್ಥಳವಲ್ಲ, ಮಾನವನ ಬದುಕಿನ ದಿವ್ಯ ಮಾರ್ಗದರ್ಶಿಯಾಗಿದೆ. ಇಲ್ಲಿ ಕಂಡುಬರುವ ವಿಶಿಷ್ಟವಾದ ಗವಿ ಚಿತ್ರಗಳು ನಮ್ಮ ಪೂರ್ವಜರ ಜೀವನ, ಕಲೆ ಮತ್ತು ಸಂಸ್ಕೃತಿಯ ಜೀವಂತ ದಾಖಲೆಗಳಾಗಿವೆ. ಕೈಕೈ ಹಿಡಿದು ನಿಂತಿರುವ ನೃತ್ಯದ ಚಿತ್ರಗಳು ಸಾಮಾಜಿಕ ಜೀವನದ ಬೆಳವಣಿಗೆಯನ್ನು ತೋರಿಸಿದರೆ, ಅಭಿಮುಖವಾಗಿ ನಿಂತಿರುವ ಎತ್ತು-ಆಕಳ ಚಿತ್ರಗಳು ಸಾಕುಪ್ರಾಣಿಗಳೊಂದಿಗಿನ ಬಾಂಧವ್ಯವನ್ನು ಚಿತ್ರಿಸುತ್ತವೆ. ಅಶ್ವಸವಾರರ ಚಿತ್ರಗಳು ಸಂಚಾರದ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ್ದರೆ, ಜಿಂಕೆ ಮತ್ತು ನವಿಲುಗಳ ಚಿತ್ರಗಳು ಪ್ರಕೃತಿ ಮೇಲಿನ ಅಭಿಮಾನವನ್ನು ಪ್ರತಿಬಿಂಬಿಸುತ್ತವೆ. ಶಿಲಾಸಮಾಧಿಗಳು ಸ್ಮಶಾನ ಸಂಸ್ಕೃತಿಯ ಪ್ರಾಚೀನ ಪರಿಕಲ್ಪನೆಯನ್ನು ತಿಳಿಸುತ್ತವೆ.

ಈ ನೆಲೆಯ ಕೇಂದ್ರಬಿಂದು ಬೃಹತ್ ಶಿಲಾ ಸಮಾಧಿಗಳು. ಆಳೆತ್ತರದ ಸಮಾಧಿಗಳಿಂದಲೂ ಹಿಡಿದು ಕಂಡಿರಹಿತ ಮತ್ತು ಕಂಡಿಸಹಿತ ಸಮಾಧಿಗಳವರೆಗೆ, ಸ್ವಸ್ತಿಕ್ ಆಕಾರದಿಂದ ಹಿಡಿದು ಕಲ್ಲಿನ ಕಾಂಪೌಂಡ್ ನಿರ್ಮಾಣದವರೆಗೆ—ಇವೆಲ್ಲವೂ ಈ ಸ್ಥಳದ ವೈಶಿಷ್ಟ್ಯತೆಯನ್ನು ಎತ್ತಿತೋರಿಸುತ್ತವೆ. ಒಂದು ಸಮಾಧಿಯ ಮೇಲಿನ ಎರಡು ಜಿಂಕೆಗಳ ಚಿತ್ರವು ವಿಶೇಷ ಆಕರ್ಷಣೆಯಾಗಿದೆ. ಕಲ್ಗೊಂಬೆ , ನಗಾರಿ ಗುಂಡು ತುಂಬಾ ಆಕರ್ಷನೀಯಈ ಸಮಾಧಿ ನಿರ್ಮಾಣದಲ್ಲಿ ಬಂಡೆಗಳನ್ನು ಕತ್ತರಿಸಲು ನೀರಿನ ಬಳಕೆಯಾಗುತ್ತಿತ್ತು ಎನ್ನುವುದನ್ನು ಅಲ್ಲಿರುವ ಸುಂದರ ಕೆರೆ ಸಾಬೀತುಪಡಿಸುತ್ತದೆ.

ಕಮಲದ ಹೂವುಗಳಿಂದ ಅಲಂಕೃತವಾದ ಈ ಕೆರೆ ನೆಲೆಯ ಸೌಂದರ್ಯವನ್ನು ದ್ವಿಗುಣಗೊಳಿಸಿದೆ.ಲಿಯೋನಾರ್ಡ್ ಮನ್, ಕೀಸ್, ಡಾ. ಸುಂದರ್, ಡಾ. ಶರಣಬಸಪ್ಪ ಕೋಲ್ಕರ್, ಡಾ. ಮೋಹನ್ ಮತ್ತು ಮಂಜುನಾಥ್ ಗುಡ್ಲಾನೂರು ಅವರಂತಹ ಇತಿಹಾಸಕಾರರು ಮತ್ತು ಸೇವಕರು ಈ ನೆಲೆಯ ಮಹತ್ವವನ್ನು ಬೆಳಕಿಗೆ ತಂದಿದ್ದಾರೆ. ಗಂಗಾವತಿ ಚಾರಣ ಬಳಗದ ಮೂಲಕ ಮೊದಲು ಈ ನೆಲೆಗೆ ಭೇಟಿ ನೀಡಿದ ಗುಡ್ಲಾನೂರು, ಇದರ ಅನಾಥ ಸ್ಥಿತಿಯನ್ನು ಕಂಡು ಮನಸ್ಸು ಕಲಕಿದರು. ಇದರ ಪರಿಣಾಮವಾಗಿ, ಅವರು ಈ ನೆಲೆಯ ಅದ್ಭುತಗಳನ್ನು ಒಂದು ಪುಸ್ತಕದ ರೂಪದಲ್ಲಿ ದಾಖಲಿಸಿದರು. ಅನೇಕ ತೊಂದರೆಗಳ ನಡುವೆಯೂ ಸಹೃದಯರ ಸಹಾಯದಿಂದ ಪುಸ್ತಕವನ್ನು ಹೊರತಂದರು. ನೂರಾರು ಬಾರಿ ಪ್ರವಾಸಿಗರು ಮತ್ತು ಸಂಶೋಧಕರನ್ನು ಈ ನೆಲೆಗೆ ಕರೆತಂದು ಪರಿಚಯಿಸಿದರು.

ಸಾಮಾಜಿಕ ಜಾಲತಾಣಗಳ ಮೂಲಕ ದಿನನಿತ್ಯ ಒಂದು ಪೋಸ್ಟ್ ಹಂಚಿ, ಸಂಚಿಕೆ ಹೊರ ತಂದು ಹಿರೇಬೆಣಕಲ್ ಅನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಮಾಡಿದರು. ಗಂಗಾವತಿ ಚಾರಣ ಬಳಗದ 60 ಸದಸ್ಯರ ಪ್ರಪ್ರಥಮ ಚಾರಣ, ಡಾ. ಶರಣಬಸಪ್ಪ ಕೋಲ್ಕಾರ್ ಅವರ ಮಾರ್ಗದರ್ಶನ,ವೈದ್ಯ ಶಿವಕುಮಾರ್ ಮಾಲಿಪಾಟೀಲ್, ಪತ್ರಕರ್ತರು ಮತ್ತು ಸಾಹಿತಿಗಳ ಲೇಖನಗಳು, ‘ಕಿಷ್ಕಿಂದ ಯುವ ಚಾರಣ ಬಳಗ’ದ ಕಾರ್ಯಕ್ರಮ, ಮತ್ತು 7 ಅದ್ಭುತಗಳ ಚುನಾವಣೆಯಲ್ಲಿ ಸಾರ್ವಜನಿಕರು ನೀಡಿದ ಅಪಾರ ಮತ—ಇವೆಲ್ಲವೂ ಈ ನೆಲೆಯನ್ನು ಜನಪ್ರಿಯಗೊಳಿಸಲು ಕಾರಣವಾಗಿದೆ. ಮತ ಹಾಕಿಸುವಲ್ಲಿ ಸೇವೆ ನೀಡಿದ ಮಂಜುನಾಥ್, ರಾಮನಾಥ ಭಂಡಾರ್ಕರ್, ಮೈಲಾರಪ್ಪ ಬೂದಿಹಾಳ, ಪ್ರಹ್ಲಾದ ಕುಲಕರ್ಣಿ, ಅರ್ಜುನ್ ಜಿ ಆರ್, ಹರನಾಯಕ್, ವಿಜಯ ಬಳ್ಳಾರಿ,ಸೌಮ್ಯ ಎಸ್ ಪಿ, ಮಂಜುನಾಥ್ ಶ್ರೇಷ್ಠಿ ಮುಂತಾದವರ ಶ್ರಮ ಶ್ಲಾಘನೀಯ ಸ್ಥಳೀಯರಾದ ವೀರೇಶ್ ಅಂಗಡಿ, ಮಂಜುನಾಥ್ ದೊಡ್ಮನಿ, ಶಿಕ್ಷಕ ಚಂದ್ರು, ಬಸನಗೌಡ, ಈಶಪ್ಪ ಹೀಗೆ ಅನೇಕರು ನೆಲೆಗೆ ಸೇವೆ ನೀಡಿ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಟೇಟ್ ಮತ್ತು ಸೆಂಟ್ರಲ್ ಆರ್ಕ್ಯಾಲಜಿ ಸಿಬ್ಬಂದಿಗಳು ಮತ್ತು ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸೇವೆ ನೀಡುವ ಮೂಲಕ ಈ ನೆಲೆಯ ಮಹತ್ವ ಹೆಚ್ಚಾಗಿದೆ.ಹಿರೇಬೆಣಕಲ್ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಪಾಪತಿ ವೀರಭದ್ರ ಪ್ರವಾಸಿಗರನ್ನು ನೆಲೆಯ ತನ ಕರೆದುಕೊಂಡು ಹೋಗಿ ಬರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ವಿಶೇಷವಾಗಿ ಸುವರ್ಣ ನ್ಯೂಸ್ ಏಷ್ಯಾನೆಟ್ ರವರು ಆಯೋಜಿಸಿದ ಏಳು ಅದ್ಭುತಗಳ ಆಯ್ಕೆ ಕಾರ್ಯಕ್ರಮ ಈ ನೆಲೆಯ ಮಹತ್ವದ ಬದಲಾವಣೆ ಪ್ರಾರಂಭವಾಯಿತು ಏಷ್ಯಾನೆಟ್ನ ಸರ್ವ ತಂಡಕ್ಕೂ ಅಭಿನಂದನೆಗಳು ಸಲ್ಲಲೇ ಬೇಕು ಹಾಗೂ ಎಲ್ಲಾ ಪತ್ರಿಕೆಗಳು ಕೂಡ ಟಿವಿಗಳು ಕೂಡ ಈ ನೆಲೆಯ ಅಭಿಮಾನವನ್ನು ಇರಿಸಿ ಸುದ್ದಿ ಬಿತ್ತರಿಸಿ ಈ ಮಟ್ಟಕ್ಕೆ ತಂದಿರುವುದು ಶ್ಲಾಘನೀಯ ಈ ನೆಲೆಯ ಮಹತ್ವವನ್ನು ರಾಜ್ಯದ ಶಾಸನಸಭೆಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಪ್ರಶ್ನೆಯ ರೂಪದಲ್ಲಿ ಮಂಡಿಸಿದ್ದು ಒಂದು ಮಹತ್ವದ ತಿರುವಾಗಿದೆ. ಇದರ ಪ್ರತಿಕ್ರಿಯೆಯಾಗಿ ಪ್ರವಾಸೋದ್ಯಮ ಸಚಿವ ಶ್ರೀ ಎಚ್.ಕೆ. ಪಾಟೀಲ್ ಅವರು ಸದನದಲ್ಲಿ ಹಿರೇಬೆಣಕಲ್ ನೆಲೆಯ ಇತಿಹಾಸಿಕ ಮಹತ್ವ, ಅದನ್ನು ಜಾಗತಿಕ ಪರಂಪರೆಯ ತಾಣವಾಗಿ ಪ್ರಕಟಿಸಲು ನಡೆಸಲಾಗುತ್ತಿರುವ ತಯಾರಿಗಳ ಕುರಿತು ವಿವರವಾಗಿ ವಿವರಿಸಿದ್ದು, ಈ ನೆಲೆಗೆ ಸಿಕ್ಕಿರುವ ದೊಡ್ಡ ರಾಜಕೀಯ ಮನ್ನಣೆಯಾಗಿದೆ.ಅವಸಾನದ ಅಂಚಿನಲ್ಲಿದ್ದ ಈ ನೆಲೆ ಇಂದು ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಲು ಸಿದ್ಧವಾಗಿದೆ. ವಿಧಾನಸೌಧದಲ್ಲಿ ನಡೆಯುತ್ತಿರುವ ಪ್ರದರ್ಶನವು ಅದರ ಯಶಸ್ಸಿನ ನಿದರ್ಶನವಾಗಿದೆ. ಈ ಭಾಗದ ಜನರು, ಶಾಸಕ ಗಾಲಿ ಜನಾರ್ದನ ರೆಡ್ಡಿ, ಪ್ರವಾಸೋದ್ಯಮ ಮಂತ್ರಿ ಎಚ್.ಕೆ. ಪಾಟೀಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ನೆಲೆಯ ಬಗ್ಗೆ ಇರುವ ಗಾಢವಾದ ಅಭಿಮಾನ ಮತ್ತು ಪ್ರೀತಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ . ಹಿರೇಬೆಣಕಲ್ ಈಗ ಜಗತ್ತಿನ ಎಲ್ಲರ ಸೇವೆ ಮತ್ತು ಅಭಿಮಾನಕ್ಕೆ ಯೋಗ್ಯವಾದ ಒಂದು ಜಾಗತಿಕ ತಾಣವಾಗಿ ರೂಪುಗೊಳ್ಳುತ್ತಿದೆ
