ಕೋಟೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು….

ಕೋಟೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು….

ಬಳ್ಳಾರಿ/ ಕಂಪ್ಲಿ : ‘ಪಲ್ಸ್ ಪೋಲಿಯೊ ಲಸಿಕೆಯನ್ನು ಕಡ್ಡಾಯವಾಗಿ 5 ವರ್ಷದೊಳಗಿನ ಮಕ್ಕಳಿಗೆ ನೀಡುವುದರಿಂದ ಮಕ್ಕಳನ್ನು ಪೋಲಿಯೊಗೆ ತುತ್ತಾಗದಂತೆ ರಕ್ಷಿಸಬಹುದು’ ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಸಂಚಾಲಕ ಬಡಿಗೇರ್ ಜಿಲಾನಸಾಬ್ ಹೇಳಿದರು.ಪಟ್ಟಣದ ಕೋಟೆ ಪ್ರದೇಶದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನಕ್ಕೆ ವಿಶೇಷವಾಗಿ ನವಜಾತಾ ಶಿಶುಗಳಿಗೆ ಲಸಿಕೆ ಹಾಕಿ ಚಾಲನೆ ನೀಡಿ ಅವರು ಮಾತನಾಡಿದರು.‘ವಿಶ್ವಸಂಸ್ಥೆ ಮತ್ತು ರೋಟರಿ ಅಂತರರಾಷ್ಟ್ರೀಯ ಸಂಸ್ಥೆ ಸಹಕಾರದೊಂದಿಗೆ ಆರಂಭವಾದ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನ ಇಂದು ವಿಶ್ವದ ಅನೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ವರವಾಗಿದೆ. ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದು, ಇದನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಹೆಗಲಿಗಿದೆ’ ಎಂದರು. ಮಕ್ಕಳಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಹಾಗೂ ಸಂಘ- ಸಂಸ್ಥೆಗಳು ಬೂತ್ ಗಳಲ್ಲಿ, ಬಸ್ ನಿಲ್ದಾಣದಲ್ಲಿಯೂ ಬೂತ್ ತೆರೆದು ಪ್ರಯಾಣಿಸುವ ಮಕ್ಕಳಿಗೆ ಲಸಿಕೆ ಹಾಕಿಸಲು ಸಹಕಾರಿಯಾಗಿದೆ ಎಂದರು.ಲಸಿಕೆ ಅಭಿಯಾನದಲ್ಲಿ 2019 ಎಪಿಎಂಸಿ ಸಮಿತಿಯ ನಾಮ ನಿರ್ದೇಶಕರಾದ ಟಿ. ಲಕ್ಷ್ಮೀ ದೇವಿಯಮ್ಮ, ಬಡಿಗೇರ್ ದೊಡ್ಡ ಖಾಜಸಾಬ್, ಬಸವರಾಜ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರದ ಆರ್. ವಲಿಮಾ, ಶಿವಲೀಲಮ್ಮಾ, ಗಿರಿಜಾ, ಸಹಾಯಕಿಯರಾದ ಖಾನಮ್ಮಾ, ರಾಧಾ, ಶರಣಮ್ಮ, ತಾಯಂದಿರಾದ ಕಾವ್ಯ, ವಸಂತಮ್ಮ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *