ಎಸ್.ರಾಮಪ್ಪಗೆ ಹಾಗೂ ಜಗದೀಶ ಪೂಜಾರ್ ರವರಿಗೆ ಪ್ರಶಸ್ತಿ ಪುರಸ್ಕಾರದ ಗೌರವ.

ಕಂಪ್ಲಿ: ವಿಜಯಪುರದ ಸಂತ ಅಣ್ಣಮ್ಮನವರ ಚರ್ಚ್ ಸಭಾಂಗಣದಲ್ಲಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಬೆಂಗಳೂರು, ಯುಗದರ್ಶಿನಿ ಮಹಿಳಾ ಫೌಂಡೇಶನ್ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕವಿ ಕಾವ್ಯ ಸಂಭ್ರಮ ಮತ್ತು ವಿವಿಧ ಕ್ಷೇತ್ರದ ಸಾಧಕರ ರತ್ನ ಪ್ರಶಸ್ತಿ-2025 ವಿತರಣಾ ಸಮಾರಂಭದಲ್ಲಿ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ಎಸ್.ರಾಮಪ್ಪ ಹಾಗೂ ಸಮಾಜ ಸೇವೆಗಾಗಿ ಜಗದೀಶ ಪೂಜಾರ್ ರವರಿಗೆ ಶಿಕ್ಷಣ ರತ್ನ, ಸಮಾಜ ಸೇವೆ ಪ್ರಶಸ್ತಿ ಸ್ವೀಕರಿಸಿದರು. ಇಲ್ಲಿನ ಸಮಾರಂಭದಲ್ಲಿ ಶೈಕ್ಷಣಿಕ ಸಾಧನೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ, ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಜಿ.ಶಿವಣ್ಣ, ಯುಗದರ್ಶಿನಿ ಮಹಿಳಾ ಫೌಂಡೇಶನ್ ನ ಅಧ್ಯಕ್ಷ ಸರಸ್ವತಿ ಚಿಮ್ಮಲಗಿ, ಮಕ್ಕಳ ಸಾಹಿತಿ ರಾಶಿ ವಾಡಿದ್ ಆಶಾಕಿರಣ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮೀನಾಕ್ಷಿ ಸೇರಿದಂತೆ ಇತರರು ಇದ್ದರು.ವರದಿ : ಜಿಲಾನಸಾಬ್ ಬಡಿಗೇರ್
