ವಾಲ್ಮೀಕಿ ನಗರದಲ್ಲಿ ಮಳೆಯಿಂದ ರಸ್ತೆಗಳು ಜಲಾವೃತ—-ಕೌನ್ಸಿಲರ್ ವಿರುದ್ಧ ನಿವಾಸಿಗಳ ಆಕ್ರೋಶ…

ವಾಲ್ಮೀಕಿ ನಗರದಲ್ಲಿ ಮಳೆಯಿಂದ ರಸ್ತೆಗಳು ಜಲಾವೃತ—-ಕೌನ್ಸಿಲರ್ ವಿರುದ್ಧ ನಿವಾಸಿಗಳ ಆಕ್ರೋಶ.

ಗಂಗಾವತಿ ನಗರದಲ್ಲಿ ಗುಡ್ಡ ಪ್ರದೇಶದ ಸಮೀಪದಲ್ಲಿರುವ ವಾಲ್ಮೀಕಿ ನಗರದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ಏರಿಯಾದ ನಿವಾಸಿಗಳಿಗೆ ಮಳೆ ನೀರಿನಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾದ ಘಟನೆ ಗಂಗಾವತಿ ನಗರದ ವಾಲ್ಮೀಕಿ ನಗರದಲ್ಲಿ ನಡೆದಿದೆ. ಇದರಿಂದ ವಾಲ್ಮೀಕಿ ನಗರದ ನಿವಾಸಿಗಳು ಕೌನ್ಸಿಲರ್ ವಿರುದ್ಧ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ.ಹೌದು ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಗುಡ್ಡ ಪ್ರದೇಶದ ಸಮೀಪದಲ್ಲಿರುವ ವಾಲ್ಮೀಕಿ ನಗರದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವಾಲ್ಮೀಕಿ ನಗರದ ನಿವಾಸಿಗಳು ಕೌನ್ಸಿಲರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 03ನೇ ವಾರ್ಡಿನ ಕೌನ್ಸಿಲರ್ ಅಮರೇಗೌಡ ಅವರಿಗೆ ನಮ್ಮ ಏರಿಯಾದಲ್ಲಿರುವ ಸಮಸ್ಯೆಗಳ ಬಗ್ಗೆ ಎಷ್ಟೇ ಸಲ ಅವರ ಗಮನಕ್ಕೆ ಹಾಕಿದ್ರು ಕೂಡ ಕ್ಯಾರೆ ಎನ್ನುತ್ತಿಲ್ಲ ನಮ್ಮ ಏರಿಯಾದ ಕಡೆ ಒಂದು ದಿನಾನೂ ತಿರುಗಿಯೂ ನೋಡದೆ ನಿರ್ಲಕ್ಷ ವಹಿಸಿದ್ದಾರೆ.

ಎಂದು ವಾಲ್ಮೀಕಿ ನಗರದ ನಿವಾಸಿ ಯಮನೂರ ಮತ್ತು ಯುವಕರು ಮಾಧ್ಯಮದ ಮುಂದೆ ತಮ್ಮ ಅಳಲನ್ನ ತೊಡಿಕೊಂಡಿದ್ದಾರೆ. ಕೂಡಲೇ ವಾರ್ಡಿನ ಕೌನ್ಸಿಲರ್ ಅಮರೇಗೌಡ ಅವರು ಎಚ್ಚೆತ್ತು ನಮ್ಮ ಏರಿಯಾದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಸ್ವಚ್ಛತೆಗೆ ಮುಂದಾಗಬೇಕು ಹಾಗೂ ಮಳೆ ನೀರಿನಿಂದ ಜಲವೃತಗೊಂಡ ರಸ್ತೆಗಳಿಗೆ ಸಾರಾಗವಾಗಿ ನೀರು ಹರಿಯುವಂತೆ ಮುಂದಿನ ಕ್ರಮ ವಹಿಸಬೇಕು ಏರಿಯಾದ ನಿವಾಸಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡದೆ ಹೋದರೆ ಮುಂದಿನ ದಿನಗಳಲ್ಲಿ ನಗರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ವಾರ್ಡಿನ ಕೌನ್ಸಿಲರ್ ಗೆ ಮಾಧ್ಯಮದ ಮುಖಾಂತರ ವಾಲ್ಮೀಕಿ ನಗರದ ನಿವಾಸಿ ಯಮನೂರ ನಾಯಕ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *