ಪೊಲೀಸ್ ವರಿಷ್ಠಾಧಿಕಾರಿ ದಯಾನಂದ ಅವರ ಅಮಾನತ ವಿರೋಧಿಸಿ ನಾಯಕ ಸಮುದಾಯದಿಂದ ಮನವಿ..

ಕಾರಟಗಿ ವರದಿ:- ಆರ್ ಸಿ ಬಿ ಗೆಲುವಿನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಸುಮಾರು 11 ಜನ ಕಾಲತುಳೀತದಿಂದ ಮರಣ ಹೊಂದಿದ ಘಟನೆಗೆ , ನೇರವಾಗಿ ಸರ್ಕಾರ ಕಾರಣ, ವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ವೈಪಲ್ಯ , ತಪ್ಪು ಮುಚ್ಚಿಕೊಳ್ಳೋಕೆ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ.. ಅತ್ಯಂತ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾದ ಶ್ರೀ ದಯಾನಂದ ಸರ್ ಅಮಾನತು ಗೊಳಿಸಿದ ಆದೇಶವನ್ನು ತಕ್ಷಣವೇ ಸರ್ಕಾರ ಹಿಂಪಡೆಯಬೇಕು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಾಲ್ಮೀಕಿ ಜನಾಂಗವನ್ನು ಟಾರ್ಗೆಟ್ ಮಾಡುತ್ತಿದೆ ಎಂಬುದಕ್ಕೆ ಐಎಸ್ ಅಧಿಕಾರಿಗಳು ಹಾಗೂ ನಿಷ್ಠಾವಂತ ಕೆಎಎಸ್ ಅಧಿಕಾರಿಗಳನ್ನು ಯಾವುದೇ ಲೋಪವಿಲ್ಲದೆ ವರ್ಗಾವಣೆ ಅಮಾನತು ಸೇರಿದಂತೆ ಹಲವಾರು ವಿಚಾರಗಳಲ್ಲಿ ಗುರಿಯನ್ನಾಗಿಸಿ ಕೊಂಡಿರುವುದು ಅತ್ಯಂತ ಖಂಡನೆ ಎಂದು ನಾಯಕ ಸಮಾಜದ ಮುಖಂಡರು ತಿಳಿಸಿದರು ಜೊತೆಗೆ ಶ್ರೀ ದಯಾನಂದ ಅವರ ಅಮಾನತು ಆದೇಶ ಹಿಂಪಡೆ ಇದ್ದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು .. ಈ ಸಂಧರ್ಭದಲ್ಲಿ ವಾಲ್ಮೀಕಿ ಮಹಾಸಭಾ ಅಧ್ಯಕ್ಷರು ಬೂದಿ ಗಿರಿಯಪ್ಪ, ಶಿವರೆಡ್ಡಿ ವಕೀಲರು, ಗದ್ದೆಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ಸೋಮನಾಥ್ ಎಚ್ ವಕೀಲರು, ದೇವರಾಜ ನಾಯಕ, ಶೇಖರಪ್ಪ, ಮುಕ್ಕಣ್ಣ, ಹನುಮಂತಪ್ಪ ತೋಳದ, ವೀರನಗೌಡ, ಸೋಮನಾಥ್ ಬೆರ್ಗಿ, ಬಿ. ಮಂಜುನಾಥ ನಾಯಕ, ಹನುಮಂತಪ್ಪ, ಮಂಜುನಾಥ್ ತೊಂಡಿಹಾಳ್, ವೆಂಕಟೇಶ್ ಬೂದಿ, ದೇವರಾಜ ಕಟ್ಟಿಮನಿ, ಮಂಜುನಾಥ್, ಶರಣಪ್ಪ, ಪ್ರಶಾಂತ್ ಕೋಟೆ, ದೇವರಾಜ್, ಹಾಗೂ ಸಮಾಜದ ಯುವಕರು, ಹಿರಿಯರು ಉಪಸ್ಥಿತರಿದ್ದರು…..
