ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಬೆಂಗಳೂರು ಬೃಹತ್ ಪ್ರತಿಭಟನಾ. ಸಮಾವೇಶ….

ಗಂಗಾವತಿ.. ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತ್ರತ್ವದ ಅಡಿಯಲ್ಲಿ ನಾಡಿನ ಬಂಜಾರ ಭೋವಿ ಚರ್ಮಕಾರ. ಸಮಾಗಾ ರ.ಕೊರಮ ಕೊರಚ. ಬಲಗೈ ಚಲುವಾದಿ. ಅಲೆಮಾರಿ ಸೇರಿದಂತೆ ಸೂಕ್ಷ್ಮ ಸಮುದಾಯಗಳ ಜಂಟಿಯಾಗಿ ಆಯೋಜಿಸಿದ ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಹಾಗೂ ಹಳೆಯ ಮೀಸಲಾತಿ ನಿಯಮದಂತೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ಮಾರ್ಚ್ 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುತ್ತಿದ್ದು ಮೇಲ್ಕಾಣಿಸಿದ ಎಲ್ಲಾ ಜನಾಂಗ ಸಮುದಾಯದವರು ಭಾಗವಹಿಸಬೇಕೆಂದು ಭೋವಿ ಸಮಾಜದ ತಾಲೂಕ ಅಧ್ಯಕ್ಷ ಗಾಳೆಪ್ಪ ಭೋವಿ. ಜಿಲ್ಲಾ ಮಹಿಳಾ ಅಧ್ಯಕ್ಷ ಪುಷ್ಪಾಂಜಲಿ ಗುನ್ನಾಳ. ಕನಕಗಿರಿ ಅಧ್ಯಕ್ಷ ಭೋಜಪ್ಪ ಕಾರಟಗಿ ಅಧ್ಯಕ್ಷ ಪಂಪಾಪತಿ ಸೇರಿದಂತೆ ರವಿ ಹನುಮಂತಪ್ಪ ಗುತ್ತೇದಾರ್ ಹುಲಿಗೇಶ ಬಂಡಿ ವೆಂಕಟೇಶ್ ರಾಂಪುರ್ ಸೋಮಪ್ಪ ಸಾಯಿ ನಗರ ಈರಪ್ಪ ಕಟ್ಟಿಮನಿ ಮಣಿಕಂಠ ರಾಘವೇಂದ್ರ ಸೇರಿದಂತೆ ಇತರರು ಹೇಳಿದರು.. ಅವರು ಶನಿವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಹಳೆಯ ಮೀಸಲಾತಿಯ ನಿಯಮಾನುಸಾರ ಶೇಕಡ 50ರ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಮುಂದುವರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಣೆ ಮಾಡಿರುವುದು ಸ್ವಾಗತದಾಯಕವಾಗಿದ್ದು ತ್ವರಿತವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗ ಬೇಕು. ದೇಶ ವ್ಯಾಪ್ತಿ ನಡೆಯುತ್ತಿರುವ ಜನಗಣತಿಯ ಸಮಗ್ರ ದತ್ತಾಂಶ ಬರುವವರೆಗೆ ಕುರಿತು ಏಕ ಪಕ್ಷಿಯ ನಿರ್ಧಾರ ತೆಗೆದುಕೊಳ್ಳಬಾರದು ಒಳ ಮೀಸಲಾತಿ ಹಂಚಿಕೆಯ ಪ್ರಕ್ರಿಯೆ ಸಂಬಂಧಿಸಿದಂತೆ ನಮ್ಮ ಸಮುದಾಯದ ಮುಖಂಡರ ಜೊತೆಗೆ ಸಮಾಲೋಚನೆ ನಡೆಸಬೇಕು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಆ ಸ್ಪಷ್ಟ ವೈಜ್ಞಾನಿಕತೆಯಿಂದ ಕೂಡಿದ್ದು ಈ ಸಮೀಕ್ಷೆಯ ತಾಲೂಕ ಹಾಗೂ ಸಮಗ್ರ ದತ್ತಾಂಶ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಗೊಳಿಸಬೇಕು ಸೇರಿದಂತೆ ಶಿಕ್ಷಣ ಪ್ರವೇಶ ಹಾಸ್ಟೆಲ್ ಉದ್ಯೋಗ ನೇಮಕಾತಿ ಇತ್ತೀಚಿಗೆ ಹೊರಡಿಸಿರುವ ಎಲ್ಲಾ ರೋಸ್ಟರ್ ಹಂಚಿಕೆ ಆದೇಶ ಸುತ್ತೋಲೆಗಳನ್ನು ಹಿಂಪಡೆಯುವುದರ ಮೂಲಕ ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಮುಂದಾಗಬೇಕೆಂದು ತಿಳಿಸಿದ ಅವರುಗಳು ಈ ಒಂದು ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಸಮಾಜದ ಗುರುಗಳು ಶಾಸಕರು ಸಚಿವರು ಭಾಗವಹಿಸಲಿದ್ದಾರೆ ವಿಶ್ವಾಸವನ್ನು ವ್ಯಕ್ತಪಡಿಸಿದರು.
