ಚಿ.ಉದಯಶಂಕರ್ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.*ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಚಿ.ಉದಯಶಂಕರ್ ಜನ್ಮದಿನಾಚರಣೆ.

ಗಂಗಾವತಿ: ಗೀತ ರಚನೆಕಾರ, ಸಂಭಾಷಣೆಕಾರ ಚಿ. ಉದಯಶಂಕರ್ ಅವರು ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚು ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಡಾ. ರಾಜಕುಮಾರ್ ಸೇರಿದಂತೆ ಎಲ್ಲಾ ಚಿತ್ರ ನಟರು ನಟಿಸಿರುವ ಸಿನಿಮಾಗಳಿಗೆ ಗೀತೆ ರಚನೆ ಮತ್ತು ಸಂಭಾಷಣೆ ಬರೆಯುವ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಕರೋಕೆ ಹವ್ಯಾಸಿ ಕಲಾವಿದ ಹನುಮಂತಪ್ಪ ಹುಳಿಹೈದರ್ ಹೇಳಿದರು. ಅವರು ನಗರದ ಹೊಸಳ್ಳಿ ರಸ್ತೆಯಲ್ಲಿರುವ ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಹವ್ಯಾಸಿ ಕಲಾವಿದರ ತಂಡದ ವತಿಯಿಂದ ಏರ್ಪಡಿಸಿದ್ದ ಚಿ.ಉದಯಶಂಕರ್ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕನ್ನಡ ಚಿತ್ರರಂಗವನ್ನು ಶ್ರೀಮಂತ ಗೊಳಿಸಿದವರ ಪೈಕಿ ಉದಯಶಂಕರ್ ಮೊದಲ ಸ್ಥಾನದಲ್ಲಿ ಬರುತ್ತಾರೆ. ಸಿನಿಮಾಗಳಿಗೆ ಹಾಡುಗಳನ್ನು ಮತ್ತು ಸಂಭಾಷಣೆಯನ್ನು ಬರೆಯುವ ಮೂಲಕ ಇನ್ನಷ್ಟು ಶ್ರೀಮಂತ ಗೊಳಿಸಿದ್ದಾರೆ. ಜೊತೆಗೆ ಅತ್ಯುತ್ತಮ ಹಾಸ್ಯ ಕಲಾವಿದರಾಗಿಯು ಕೆಲ ಸಿನಿಮಾಗಳಲ್ಲಿ ಉದಯಶಂಕರ್ ನಟನೆ ಮಾಡಿದ್ದಾರೆ. ಕೆಲವು ಚಿತ್ರಗಳಿಗೆ ನಿರ್ದೇಶನವನ್ನು ಮಾಡುವ ಮುಖಾಂತರ ಸಿನಿಮಾ ಕ್ಷೇತ್ರದ ಎಲ್ಲಾ ರಂಗದಲ್ಲಿ ಕಾರ್ಯ ಮಾಡಿ ಕನ್ನಡ ಭಾಷೆ ಸಾಹಿತ್ಯಕ್ಕೆ ತಮ್ಮದೇ ಆದಂತ ಕೊಡುಗೆ ನೀಡಿದ್ದಾರೆ. ಅವರನ್ನು ಕನ್ನಡ ಚಿತ್ರರಂಗ ಮತ್ತು ಕನ್ನಡ ಸಾಹಿತ್ಯ ಎಂದಿಗೂ ಮರೆಯುವುದಿಲ್ಲ ನಮ್ಮ ಸಂಗೀತ ಸ್ವರಾಂಜಲಿ ಹವ್ಯಾಸಿ ಕಲಾವಿದರ ತಂಡವು ಕನ್ನಡ ಸಿನಿಮಾ ನಟರ ಜಯಂತಿ, ಪುಣ್ಯಸ್ಮರಣೆಯನ್ನು ಮಾಡು ಮುಖಾಂತರ ಅತ್ಯುತ್ತಮ ಮಾರ್ಗವನ್ನು ಹಾಕಿ ಕೊಡುತಿದೆ ಎಂದರು.ಈ ಸಂದರ್ಭದಲ್ಲಿ ಪರಶುರಾಮ ದೇವರಮನೆ,ಪೋಲಕಾಲ್,ತಿಪ್ಪೇಸ್ವಾಮಿ ಹೊಸಮಠ,ಧೂಳ ವೆಂಕಟೇಶ, ವಿಕ್ರಂ ಬೆಂಗಳೂರು ಆನಂದ ಪೇಂಟರ್, ಐಲಿ ರಮೇಶ,ಐಲಿ ಸಣ್ಣ ಮಾರುತಿ, ಖಾಜಹುಸೇನ ಮುಳ್ಳುರು,ಕನಕಪ್ಪ ಹೊಸಳ್ಳಿ, ಲಲಿತಮ್ಮ ಚಲುವಾದಿ,ಗಿರಿಜಮ್ಮ, ನೂರ ಅಹಮದ್,ಕೆ.ಅಂಬಣ್ಣ ಸೇರಿ ಅನೇಕರಿದ್ದರು.

