ಹಸಿರು ನಿಶಾನೆ ತೋರಿಸಿ ಚಾಲುಕ್ಯ ಉತ್ಸವದ ರಥೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಕಾಶಪ್ಪನವರ…

ಹಸಿರು ನಿಶಾನೆ ತೋರಿಸಿ ಚಾಲುಕ್ಯ ಉತ್ಸವದ ರಥೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಕಾಶಪ್ಪನವರ.

ಇಳಕಲ್:ಹತ್ತು ವರ್ಷಗಳಿಂದ ಚಾಲುಕ್ಯ ಉತ್ಸವ ಆಚರಣೆ ನಡೆಯದ ಕಾರಣ ಬಾಗಲಕೋಟ ಜಿಲ್ಲೆಯ ಎಲ್ಲಾ ಶಾಸಕರು ಕೂಡಿಕೊಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಉತ್ಸವ ಮಾಡುವಂತೆ ಒತ್ತಡ ನೀಡಿದರ ಫಲವಾಗಿ ಇಂದು 2026 ರ ಚಾಲುಕ್ಯ ಉತ್ಸವನಡೆಯುವಂತೆ ಮಾಡಿದ್ದೇವೆ ಎಂದುರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು,ಶಾಸಕ ವಿಜಯಾನಂದ ಎಸ್.ಕಾಶಪ್ಪನವಜ.12 ರ ಮೂರನೆ ದಿನದ ಚಾಲುಕ್ಯ ಉತ್ಸವದ ರಥೋತ್ಸವಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಅವರು ಇಮ್ಮಡಿ ಪುಲಕೇಶಿ ನಾಡುಕಂಡ ಧೀಮಂತ ರಾಜಈಡಿ‌ ಭಾರತದ ಉದ್ದಗಲಕ್ಕೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ನಾಡಿನ ಕೀರ್ತಿಯನ್ನು ದೇಶದ ತುಂಬೆಲ್ಲ ಹಬ್ಬುವಂತೆ ಮಾಡಿದರು.ವೀರ ಪುಲಕೇಶಿಯು ದೊಡ್ಡ ಸೈನ್ಯವನ್ನು ಕಟ್ಟಿಕೊಂಡು ಯುದ್ದಕ್ಕೆ ಸನ್ನದರಾದ್ರೆ ಸಾಕು ಎದುರಾಳಿಗಳ ಮೈಯಲ್ಲಿ ನಡುಕ ಪ್ರಾರಂಭಅಂತಹ ರಾಜ ನನ್ನು ಪಡೆದ ನಾವು ಪುಣ್ಯವಂತರು. ವೀರ ಪುಲಕೇಶಿಯನ್ನ ದಕ್ಷೀಣ ಪಥೇಶ್ವೆರ ಎಂಬ ಬಿರುದು ಗಳಿಸಿದವರು.ಮೊದಲನೇ ದಿನದ ಚಾಲುಕ್ಯ ಉತ್ಸವಕ್ಕೆ ರಾಜ್ಯದ ದೊರೆಸಿದ್ಧರಾಮಯ್ಯನವರು ಅದ್ದೂರಿಯಾಗಿ ಚಾಲನೆ ನೀಡಿದರು.ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ,ನಗರಾಭಿವೃದ್ಧಿ ಸಚಿವರಾದ ಸುರೇಶ್ ಬೈರತಿ,ಜಿಲ್ಲಾ ಉಸ್ತುವಾರಿ ಸಚಿವರು,ಚಿಮ್ಮನಕ್ಟಿ ತಮ್ಮ ಆದಿಯಾಗಿ ಉತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತು.ರಥೋತ್ಸವ ಮೊದಲನೆದಿನ ಬದಾಮಿ,ಎರಡನೆ ದಿನ ಪಟ್ಟದ ಕಲ್ಲು ಇವತ್ತು ಮೂರನೆ ದಿನದ ಸಮಾರೂಪ ಸಮಾರಂಭದ ರಥೋತ್ಸವಕ್ಕೆ ಇಳಕಲ್ ನಗರದ ಶ್ರೀ ಬಸವೇಶ್ವರ ವೃತ್ತದಿಂದ ಚಾಲನೆ ದೊರಕಿತು.ಸಾಯಂಕಾಲ 6 ಕ್ಕೆ ತಮ್ಮ ಅಧ್ಯಕ್ಷತೆಯಲ್ಲಿಅಂತಿಮ‌ ದಿನದ ಉತ್ಸವಕ್ಕೆ ಇಂದು ಚಾಲನೆ ನಿಡಲಿದ್ದೇವೆ ಎಂದು ಪತ್ರಕರ್ತರ ಮುಂದೆ ನುಡಿದರು.ತಾಲೂಕಾ ತಹಶಿಲ್ದಾರರ ಅಮರೇಶ್ ಪಮ್ಮಾರ,ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾದವ್,ವಿಜಯ ಮಹಾಂತೇಶ ಗದ್ದನಕೇರಿ,ಹಾಗೂ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *