ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ :ಕುಮಾರಿ ಸಿಂಧೂ ರಾಜ್ಯಮಟ್ಟಕ್ಕೆ ಆಯ್ಕೆ.

ಬಳ್ಳಾರಿ / ಮುದ್ದಟನೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬಳ್ಳಾರಿ ಹಾಗೂ ಉಪನಿರ್ದೇಶಕರ ಕಛೇರಿ ಬಳ್ಳಾರಿ ಇವರ ಜಂಟಿ ಸಹಯೋಗದಲ್ಲಿ ಬಳ್ಳಾರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ದಟನೂರಿನ ಕುಮಾರಿ ಸಿಂಧು ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗಾ ಕಲೋತ್ಸವ ಸ್ಪರ್ಧೆಯಲ್ಲಿ 5 ರಿಂದ 7ನೇ ತರಗತಿ ವೈಯಕ್ತಿಕ ವಿಭಾಗದ ‘ಕನ್ನಡ ಕಂಠಪಾಠ’ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದ ಕುಮಾರಿ ಸಿಂಧುಗೆ ಗಳಿಸಿದ್ದಕ್ಕಾಗಿ ಶಾಲಾ ಮುಖ್ಯಗುರುಗಳಾದ ರಂಗಸ್ವಾಮಿ ಹಾಗೂ ಶಿಕ್ಷಕರ ಬಳಗದಿಂದ ವಿದ್ಯಾರ್ಥಿನಿ ಕುಮಾರಿ ಸಿಂಧುಗೆ ಸನ್ಮಾನಿಸಿ ಅಭಿನಂದಿಸಿದರು. ನಂತರ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ನೀವೆಲ್ಲರೂ ಕೂಡ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಉನ್ನತ ಮಟ್ಟದ ಸ್ಥಾನವನ್ನು ಗಳಿಸಬೇಕೆಂದು ಹಾಗೂ ಶಾಲೆ ಸೇರಿದಂತೆ ನಿಮ್ಮ ತಂದೆ ತಾಯಿಗೆ ಒಳ್ಳೆಯ ಕೀರ್ತಿಯನ್ನು ಹಾಗೂ ಗ್ರಾಮದ ಗೌರವನ್ನು ತರಬೇಕೆಂದು ಮಕ್ಕಳಿಗೆ ಮನವರಿಕೆಯ ಮೂಲಕ ಪ್ರೇರಿಪಿಸಿದರು. ಶಿಕ್ಷಕರ ಬಳಗ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಆಗಡಿಗೆ ಸಿಬ್ಬಂದಿಯರು ವಿದ್ಯಾರ್ಥಿಯನ್ನು ಹೃದಯಪೂರ್ವಕವಾಗಿ ಅಭಿನಂದಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್
