ನ.28ರಂದು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಪ್ಪು ಉತ್ಸವ ಕಾರ್ಯಕ್ರಮ: ಕಕರವೇ ಅಧ್ಯಕ್ಷ ಸೈಯದ್  ಜಿಲಾನಿ ಪಾಷಾ ಖಾದ್ರಿ ..

ನ.28ರಂದು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಪ್ಪು ಉತ್ಸವ ಕಾರ್ಯಕ್ರಮ: ಕಕರವೇ ಅಧ್ಯಕ್ಷ ಸೈಯದ್  ಜಿಲಾನಿ ಪಾಷಾ ಖಾದ್ರಿ ..

ಗಂಗಾವತಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ 13ನೇ ವಾರ್ಷಿಕೋತ್ಸವ ಪ್ರಯುಕ್ತ ಅಪ್ಪು ಉತ್ಸವ ಕಾರ್ಯಕ್ರಮವನ್ನು ನಗರದ ಬಸ್ ನಿಲ್ದಾಣದ ಎದುರುಗಡೆ ನವಂಬರ್ 28  ಶುಕ್ರವಾರದಂದು ಜರುಗುತ್ತದೆ. ಅಪ್ಪು ಉತ್ಸವ ಕಾರ್ಯಕ್ರಮಕ್ಕೆ ಡಾಕ್ಟರ್ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷರಾದ ಸಾ ರಾ ಗೋವಿಂದ ರವರು ಆಗಮಿಸುತ್ತಿರುವ ಗಣ್ಯರಿಗೆ ಹಾಗೂ ಬಂಧು ಮಿತ್ರರಿಗೆ ಸನ್ಮಾನ ಸಮಾರಂಭ ಹಾಗೂ ಹಾಸ್ಯ ಚಟಾಕಿ ಮತ್ತು ಸಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೈಯದ್ ಜಲಾನಿ ಪಾಷ ಖಾದ್ರಿ ಮಾಧ್ಯಮದ ಮುಖಾಂತರ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮನೋಹರಗೌಡ ಹೇರೂರ ಮಾತನಾಡಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಡೆಯುವ ಕಾರ್ಯಕ್ರಮಕ್ಕೆ ನುರಿತ ಕಲಾವಿದರಿಂದ ಹಾಸ್ಯ ಚಟಾಕಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಈ ಕಾರ್ಯಕ್ರಮಕ್ಕೆ ಜನಪ್ರಿಯ ಶಾಸಕರಾದ ಗಾಲಿ ಜನಾರ್ದನ್ ರೆಡ್ಡಿ.ಶ್ರೀಮತಿ ಗಾಲಿ ಲಕ್ಷ್ಮಿ ಅರುಣಾ ರವರು ಮತ್ತು ಮಹೆಪುಜ್ ಅಲಿ ಖಾನ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.ಆದಕಾರಣ ಕನ್ನಡದ ಅಭಿಮಾನಿಗಳು.ಕನ್ನಡದ ಚಿಂತಕರು. ನಗರದ ನಾಗರಿಕ ಸಮಸ್ತ ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ದಳಪತಿ ದುರ್ಗಪ್ಪ ನಾಯಕ ಅವರು ಮಾತನಾಡಿ ಜನಪ್ರಿಯ ಶಾಸಕರಾದ ಗಾಲಿ ಜನಾರ್ದನ್ ರೆಡ್ಡಿ ಅವರು  ಅಪ್ಪು ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ವೇದಿಕೆ ಮೇಲೆ ಹಾಸ್ಯ ಚಟಾಕಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವುವು ಗಂಗಾವತಿ ಕ್ಷೇತ್ರದ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *