ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಅವಿರೋದ ಆಯ್ಕೆ….

ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಅವಿರೋದ ಆಯ್ಕೆ….

ಬಳ್ಳಾರಿ / ಕಂಪ್ಲಿ : ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಸೋಮವಾರದಂದು 21 ಜನ ನಾಮಪತ್ರ ಹಿಂಪಡೆದ ಹಿನ್ನಲೆ 8 ಜನ ನೂತನ ನಿರ್ದೇಶಕರಾಗಿ ಅವಿರೋದವಾಗಿ ಆಯ್ಕೆಗೊಂಡರು.ಸೆ.26ರಂದು ನಡೆಯಲಿರುವ ಸಹಕಾರ ಸಂಘದ ಚುನಾವಣೆಯಲ್ಲಿ 8 ಸ್ಥಾನಗಳ ನಿರ್ದೇಶಕರ ಸ್ಥಾನಗಳಿಗೆ ಒಟ್ಟು 29 ಜನರು ನಾಮಪತ್ರ ಸಲ್ಲಿಸಿದ್ದರು. ಆದರೆ, ಸೋಮವಾರಂದು 8 ಜನ ಅಭ್ಯರ್ಥಿಗಳು ಸಂಘದ ನಿರ್ದೇಶಕರಾಗಿ ಆಯ್ಕೆಯಾದರು.ವಿ.ಬಿ.ನಾಗರಾಜ(ಎಸ್ಸಿ ಮೀಸಲು), ಎನ್.ಆಂಜನೇಯಲು(ಎಸ್ಟಿ ಮೀಸಲು), ಗೌಡ್ರು ಅಂಜಿನಪ್ಪ(ಹಿಂದುಳಿದ ವರ್ಗ-ಎ), ಕೆ.ಭಾಸ್ಕರ್ ರೆಡ್ಡಿ(ಹಿಂದುಳಿದ ವರ್ಗ-ಬಿ), ಅರಳೆ ಮುತ್ತಯ್ಯ, ಹನುಮಂತಪ್ಪ ಕುರುಬರು(ಸಾಮಾನ್ಯ ಮೀಸಲು), ಜಿ.ಅಯ್ಯಮ್ಮ, ಕೆ.ರಾಧಾ(ಮಹಿಳಾ ಮೀಸಲು ಸ್ಥಾನ) ಇವರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರರಾಗಿ ಆಯ್ಕೆಯಾಗಿದ್ದಾರೆ. ಮತ್ತು ಕಡೆಮನೆ ನಾಗರಾಜ(ದೇವಸಮುದ್ರ ಪ್ರಾ.ಕೃ.ಪ.ಸ.ಸಂ), ಟಿ.ರಾಮು(ಎಮ್ಮಿಗನೂರು), ಕೆ.ದೊಡ್ಡಬಸಪ್ಪ(ಹಂಪಾದೇವನಹಳ್ಳಿ), ಅಳ್ಳಿ ನಾಗರಾಜ(ಕಂಪ್ಲಿ), ಪಿ.ಚೊಕ್ಕರಾವ್(ಸಣಾಪುರ) ಇವರು ಸಹಕಾರ ಸಂಘದ ಡೆಲಿಗೇಟ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು. ನಂತರ ರಿಟರ್ನಿಂಗ್ ಅಧಿಕಾರಿ ರಾಮು ಮಾತನಾಡಿ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ 29 ಜನ ನಾಮಪತ್ರ ಸಲ್ಲಿಸಿದ್ದರು. ಆದರೆ, ಸೋಮವಾರ 3ಗಂಟೆ ಒಳಗಾಗಿ 21 ಜನ ನಾಮಪತ್ರ ಹಿಂಪಡೆದ ಹಿನ್ನಲೆ ಕಣದಲ್ಲಿ ಉಳಿದ 8 ಜನರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದರು. ತದನಂತರ ನೂತನ ನಿರ್ದೇಶಕರಿಗೆ ಮಾಲಾರ್ಪಣೆಯೊಂದಿಗೆ ಗೌರವ ಸಲ್ಲಿಸಿದರು. ಸಹಾಯಕ ರಿಟರ್ನಿಂಗ್ ಅಧಿಕಾರಿ ರಮೇಶ, ಮುಖ್ಯಕಾರ್ಯನಿರ್ವಾಹಕ ಕೆ.ವಿರೇಶ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಾಮ ನಿರ್ದೇಶಿತ ಸದಸ್ಯ ಬಳ್ಳಾಪುರ ಲಿಂಗಪ್ಪ, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯರಾದ ಡಾ.ವಿ.ಎಲ್.ಬಾಬು, ಎನ್.ರಾಮಾಂಜಿನೇಯಲು, ಮುಖಂಡರಾದ ಪಿ.ಮೂಕಯ್ಯಸ್ವಾಮಿ, ಬಿ.ನಾರಾಯಣಪ್ಪ, ಅಳ್ಳಳ್ಳಿ ವಿರೇಶ, ಕಡೆಮನೆ ಪಂಪಾಪತಿ, ವೆಂಕಟರಾಮರಾಜು, ದೇವೇಂದ್ರಗೌಡ, ಕರೇಕಲ್ ಮನೋಹರ, ಹೊನ್ನೂರಸಾಬ್, ಶಿವುಕುಮಾರ, ಜಿ.ಮರೇಗೌಡ, ಹೊಸಕೋಟೆ ಜಗದೀಶ, ತಿಮ್ಮಪ್ಪನಾಯಕ, ಬಳೆ ಮಲ್ಲಿಕಾರ್ಜುನ, ಬಿ.ವಿ.ಗೌಡ, ಕೊಟ್ಟೂರು ರಮೇಶ, ಶರಣ, ಮಂಜುನಾಥ, ಕೆ.ಬಸವರಾಜ, ದೊಡ್ಡಬಸುವ, ಸಹಕಾರ ಸಂಘದ ಸಿಬ್ಬಂದಿಗಳಾದ ಕೆ.ಕರಿಬಸುವ, ಎ.ಸಿದ್ದೇಶ, ಬಿ.ಶ್ರೀನಿವಾಸ, ಮಣಿಕಂಠ, ಉಮೇಶ, ಶರಣಗೌಡ ಸೇರಿದಂತೆ ರೈತ ಮುಖಂಡರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್..

Leave a Reply

Your email address will not be published. Required fields are marked *