ಸೇವೆಯಿಂದ ನಿವೃತ್ತಿಯಾದ ರೆವೆರೆಂಡ್ ಎಡ್ವಿನ್ ಬಾಬು ಅವರಿಗೆ ಗ್ರಾಮ ಪಂಚಾಯತಿ ಸದಸ್ಯರಾದ ರಾಜೇಶ್ ಕುಮಾರ್ ನೇತೃತ್ವದಲ್ಲಿ ಬಿಳ್ಕೊಡುವ ಸಮಾರಂಭ…

ಸೇವೆಯಿಂದ ನಿವೃತ್ತಿಯಾದ ರೆವೆರೆಂಡ್ ಎಡ್ವಿನ್ ಬಾಬು ಅವರಿಗೆ ಗ್ರಾಮ ಪಂಚಾಯತಿ ಸದಸ್ಯರಾದ ರಾಜೇಶ್ ಕುಮಾರ್ ನೇತೃತ್ವದಲ್ಲಿ ಬಿಳ್ಕೊಡುವ ಸಮಾರಂಭ

ಗಂಗಾವತಿಯಲ್ಲಿ ದಿನಾಂಕ 20/7/2025 ರಂದು ಆತ್ಮೀಯ ದೇವಜನರೇ ತಮ್ಮೆಲ್ಲರಿಗೂ ಯೇಸುಕ್ರಿಸ್ತನ ನಾಮದಲ್ಲಿ ವಂದನೆಗಳು ಇಂದು. ಬೇತ್ಸಥಾ ಮೆಥೋಡಿಸ್ಟ್ ಚರ್ಚ್ ಗಾಳೆಮ್ಮ ಗುಡಿ ಕ್ಯಾಂಪ್ ಸಭಾ ಪಾಲಕರಾದ ರೆವ್. ಎಡ್ವಿನ್ ಬಾಬು ರವರು ಸುಮಾರು ಹನ್ನೊಂದು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದಾರೆ ಕ್ರಿಸ್ತನ ಮಾರ್ಗಗಳನ್ನು ಆತನ ದೇವೋಕ್ತಿಗಳನ್ನು ಭೋಧನೆ ಮಾಡುತ್ತಾ ಕ್ರಿಸ್ತನು ಈ ಭೂಮಿಯ ಮೇಲೆ ಸಾರಿರುವ ಸಂದೇಶವನ್ನು ಸಾರುತ್ತಾ ನಿನ್ನಂತೆಯೇ ನಿನ್ನ ನೆರೆ ಹೊರೆಯವರನ್ನು ಪ್ರೀತಿಸು ಎಂಬುದು ನೀನು ನಿನ್ನ ಸಹೋದರರ ನಿಮಿತ್ಯ ಪ್ರಾಣವನ್ನು ಪಣಕ್ಕಿಟ್ಟು ಪಾಪದಿಂದ ರಕ್ಷಿಸು ಎಂದು ಹೇಳಿದ ಆ ಯೇಸುವಿನ ಸಂದೇಶಗಳು ತಿಳಿಸುತ್ತಾ

ಈ ಭೂಮಿಯ ಮೇಲೆ ಮನುಷ್ಯರ ಬದುಕು ಶಾಶ್ವತವಲ್ಲ ನಾವು ಪರಲೋಕದಿಂದ ಬಂದವರು ಮರಳಿ ಪರಲೋಕಕ್ಕೆ ಹಿಂದಿರುಗಬೇಕು ಎಂದು ತಿಳಿಸುತ್ತಾ ತಮ್ಮ ಜೀವನದುದ್ಧದಕ್ಕೂ ಯೇಸುವಿನ ವಿಷಯಗಳನ್ನು ಭೋದಿಸುತ್ತಾ ಬದುಕಿದರು ಅವರು ಇಂದು ನಿವೃತ್ತಿಯನ್ನು ಹೊಂದುವ ಮೂಲಕ ತಮ್ಮ ಮುಂದಿನ ಜೀವನ ಸುಕಕರವಾಗಲಿ ಎಂದು ಚಿಕ್ಕ ಅಳಿಲು ಸೇವೆಯನ್ನು ಮಾಡುವುದರ ಮುಖಾಂತರ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ. ಸಭೆಯ ಕಾರ್ಯದರ್ಶಿಯಾದ ರಾಜೇಶಕುಮಾರ್ ಉಗ್ರಾಣಿಕರಾದ ಬಂಡಿ ಇಂಜಪ್ಪ, ಸುದರ್ಶನ್, ಜೇಮಿಸ್, ಆನಂದ್ ಊರಿನ ಹಿರಿಯರಾದ ಸಣ್ಣ ತಾಯಪ್ಪ, ಸಣ್ಣ ಭೀಮಣ್ಣ, ಎಮ್.ನರಸಿಂಹಲು, ಬುಜ್ಜಪ್ಪ , ಯುವಕರು ಯುವತಿಯರು ಮಹಿಳೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *