ರೈತರ ಜೀವನಾಡಿ ತುಂಗಭದ್ರ ಡ್ಯಾಮ್ ಶಾಶ್ವತ ಕ್ರಸ್ಟ್ ಗೇಟ್ ಅಳವಡಿಸಲು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ ಆರ್. ಕುಮಾರ್ ಆಗ್ರಹ.

ಗಂಗಾವತಿ ಗಂಗಾವತಿ ನಗರದ ಶ್ರೀ ಚನ್ನಬಸವಸ್ವಾಮಿ ಕಲಾಮಂದಿರದಲ್ಲಿ ಕನ್ನಡ ಸೇನೆ ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಅವರು ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರ ಡ್ಯಾಂ ಗೆ ಶಾಶ್ವತ ಕ್ರಸ್ಟ್ ಗೇಟ್ ಅನ್ನು ಅಳವಡಿಸಬೇಕು ಹಾಗೂ ತುಂಗಭದ್ರ ನದಿಯಲ್ಲಿ ತುಂಬಿರುವ ಹೂಳನ್ನು ಎತ್ತಲು ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣಮುನವಳ್ಳಿ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು ನಗರಸಭೆ ಅಧ್ಯಕ್ಷರಾದ ಹೀರಾಬಾಯಿ ಖ್ಯಾತ ಹಾಸ್ಯ ನಟರಾದ ಟೆನ್ನಿಸ್ ಕೃಷ್ಣ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ನರಸಿಂಹ ಜೋಶಿ ಬಸವರಾಜ ಮಹಾಮನಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಂಬರೀಷ್ ಗೋನಾಳ್ ರೆಡ್ಡಿ ಶ್ರೀನಿವಾಸ್ ಜೋಗದ ನಾರಾಯಣಪ್ಪ ನಾಯಕ್ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್ ತಾಲೂಕು ಅಧ್ಯಕ್ಷ ಮಂಜುನಾಥ್ ಪತ್ತಾರ್ ಸೇರಿದಂತೆ ಇತರ ಇದ್ದರು.

