*ಕೂಡ್ಲಿಗಿ : ಕ್ಷೇತ್ರದ ಭಿವೃದ್ಧಿಗೆ ಸರ್ವರೂ ಸಹಕರಿಸಿ – ನೀರಿನ ಅಭಾವ ಸಹಿಸಲಸಾಧ್ಯ – ಶಾಸಕ ಡಾ॥ ಎನ್ ಟಿ ಶ್ರೀನಿವಾಸ್*-

ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಗತ್ಯವಾಗಿದೆ , ಕಾರಣ ಸರ್ವರೂ ಸಹಕರಿಸಬೇಕಾಗಿದೆ ಎಂದು ಸಭೆಯಲ್ಲಿ ಶಾಸಕರಾದ ಡಾ॥ ಎನ್ ಟಿ ಶ್ರೀನಿವಾಸ್ ಕೋರಿದರು. ಮತ್ತು ಬೇಸಿಗೆ ಆರಂಭಗೊಳ್ಳಲಿದ್ದು , ಯಾವುದೇ ಕಾರಣಕ್ಕೆ ಕ್ಷೇತ್ರದಲ್ಲಿ ನೀರಿನ ಅಭಾವ ತಲೆದೋರಬಾರದು ಎಂದು ಶಾಸಕರು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ , ವಿವಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ. ಮತ್ತು ಪವನ ವಿದ್ಯತ್ ಕಂಪನಿಗಳ , ಹಾಗೂ ಸೋಲಾರ್ ವಿದ್ಯುತ್ ಕಂಪನಿಗಳ ಅಧಿಕಾರಿಗಳು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮತ್ತು ವಿವಿದ ಸಂಘ ಸಂಸ್ಥೆಗಳ ಮುಖಂಡರ ಸಮನ್ವ ಸಭೆಯಲ್ಲಿ ಮಾತನಾಡಿದರು.*ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ.*- ಪಂಚಾಯ್ತಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ನೀರಿನ ಅಭಾವ ಎದುರಾಗಬಹುದೆಂದು ಪಟ್ಟಿ ತಯಾರಿಸಿ, ಇರುವ ಕೊಳವೆ ಬಾವಿಗಳ ನೀರಿನ ಮಟ್ಟ ಎಷ್ಟಿದೆ. ಆ ಕೊಳವೆ ಬಾವಿಯ ನೀರು ಸರಬರಾಜು ಸಮರ್ಪಕವಾಗಿ ಬೇಸಿಗೆಯಲ್ಲಿ ನಡೆಯುತ್ತದೆಯೋ ಗಮನಿಸಿ. ತೀವ್ರ ತೊಂದರೆ ಜನರು ಅನುಭವಿಸುವಂತಾಗಬಾರದು. ಪ್ರಸ್ತುತ ವರ್ಷ ಉತ್ತಮ ಮಳೆಯಾಗಿ ಕೆರೆ, ಕಟ್ಟೆಗಳು ಭರ್ತಿಯಾಗಿದ್ದು ಅಂತರ್ಜಲ ಉತ್ತಮವಾಗಿದೆ. ಆದಷ್ಟು ನೀರಿನ ಸಮಸ್ಯೆ ತಲೆದೋರುವುದು ಕಡಿಮೆ. ಆದರೂ ಪಿಡಿಓ ಗಳು ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕ, ನೀರಿನ ಮಟ್ಟ ಹಾಗೂ ಪೈಪ್ ಲೈನ್ ಗಳ ದುರಸ್ತಿಯನ್ನು ಈಗಲೇ ಮುಗಿಸಿ ಯಾವುದೇ ಕಾರಣಕ್ಕೂ ಜನರಿಂದ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬರದಂತೆ ಎಚ್ಚರವಹಿಸಿ ಎಂದರು. *”ನೀರು ಅಭಾವ ” ದೂರಿಗೆ – ಗ್ರಾ ಪಂ ಅಧಿಕಾರಿ ಹೊಣೆ*-ಕ್ಷೇತ್ರದಲ್ಲಿ ಪಟ್ಟಣ ಪಂಚಾಯ್ತಿ ಸೇರಿದಂತೆ , ಪ್ರತಿಯೊಂದು ಹಳ್ಳಿಗಳಲ್ಲಿಯೂ ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಯೋಜನೆ ತಯಾರಿಸಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕೆಂದರು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಅಥವಾ ನೀರಿನ ಅಭಾವ ಸೃಷ್ಠಿಾಗಿರುವ ಬಗ್ಗೆ , ನಿಖರ ಸಾಕ್ತ್ಯಾಧಾರಗಳು ಅಥವಾ ದೂರುಗಳು ಬಂದಲ್ಲಿ. ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಅಧಿಕಾರಿಯನ್ನೇ , ನೇರ ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದೆಂದು ಅವರು ಎಚ್ಚರಿಸಿದರು. *ಕಂಪನಿಗಳ ಕಾನೂನಾತ್ಮಕ ಪ್ರಕ್ರಿಯೆಗಳಿಗೆ ಸಹಕರಿಸಿ* – ತಾಲೂಕಿನ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ , ಸೋಲಾರ್ ಹಾಗೂ ಪವನ ವಿದ್ಯುತ್ ಕಂಪನಿಗಳು. ರೈತರಿಗೆ ಅಲ್ಪ ಹಣದ ಆಮಿಷ ಒಡ್ಡಿ , ರೈತರ ಜಮೀನುಗಳನ್ನು ಅತ್ಯಂತ ಕಡಿಮೆ ಹಣದಲ್ಲಿ. ಕಂಪನಿ ಹೆಸರಲ್ಲಿ ನೋಂದಣಿ ಮಾಡಿಸುವ , ಬ್ರೋಕರ್ ಗಳ ಹಾವಳಿ ಹೆಚ್ಚಾಗಿರುವುದಾಗಿ ತಿಳಿದು ಬಂದಿದ್ದು. ಅವರಿಂದ ರೈತರಿಗೆ ಅನ್ಯಾಯವಾಗಿತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ , ಜೊತೆಗೆ ರೈತರಿಗೆ ಹಣದ ವ್ಯವಹಾರದಲ್ಲೂ , ಕಂಪನಿಯವರು ತುಂಬಾ ಅನ್ಯಾಯ ಮಾಡುತ್ತಿದ್ದಾರೆ ಎಂಬು ದೂರುಗಳಿವೆ. ಅಲ್ಲದೆ ರೈತರ ಜಮೀನಿನ ರಸ್ತೆ , ಹಾಗೂ ಸರ್ವೆ ಕಲ್ಲುಗಳನ್ನು ಸಹ ನೆಲ ಸಮ ಮಾಡಿ ಬೇಕಾಬಿಟ್ಟಿ ವರ್ತನೆ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ ಎಂದರು. ಶ್ರೀಘ್ರವೇ ಕಂಪನಿಗಳೊಂದಿಗೆ ತಾಲೂಕು ಆಡಳಿತ ಸಹಕಾರದೊಂದಿಗೆ, ಹಾಗೂ ತಾವು ಕಡಿವಾಣ ಹಾಕುವುದಾಗಿ ಭರವಸೆ ನೀಡಿದರು. ಈಗಾಗಲೇ ಕಳೆದ ಆರೇಳು ವರ್ಷಗಳಿಂದ , ಪವನ ವಿದ್ಯುತ್ ಕಂಪನಿಗಳು, ಸೋಲಾರ್ ವಿದ್ಯುತ್ ಕಂಪನಿಗಳು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೂ ನಾನು ಆಯ್ಕೆಯಾಗಿ ಬಂದಾಗಿನಿಂದ , ಕಾನೂನು ರೀತಿಯಲ್ಲಿ ವಿದ್ಯುತ್ ಯಂತ್ರಗಳ ಅಳವಡಿಕೆಗೆ ಮಾತ್ರ ಅವಕಾಶ ನೀಡಿರುವೆ ಎಂದು ಸ್ಪಷ್ಟಪಡಿಸಿದರು. *ರೈತರ ಹಿತ ಕಾಪಾಡಲು ಬದ್ಧ- ರೈತರಿಗೆ ಅನ್ಯಾಯವಾದರೆ ಸಹಿಸಲ್ಲ*- ಸೋಲಾರ್ ಕಂಪನಿಗಳಿಂದ , ಪವನ ವಿದ್ಯುತ್ ಕಂಪನಿ , ಅಥವಾ ಯಾವುದೇ ಕಂನಿಗಳಿಂದ ಕ್ಷೇತ್ರದ ರೈತರಿಗೆ. ಯಾವುದೇ ರೀತಿಯಲ್ಲಿ ಅನ್ಯಾವಾಗೋದನ್ನ , ನಾನೆಂದೂ ಯವುದೇ ಕಾರಣಕ್ಕೆ ಸಹಿಸಲ್ಲ ಎಂದು ಶಾಸಕರು ನುಡಿದರು. ಕ್ಷೇತ್ರದ ಅಭಿವೃದ್ಧಿ ಎಷ್ಟು ಮುಖ್ಯವೋ , ರೈತರ ಹಿತಾಸಕ್ತಿ ಅಷ್ಟೇ ಮುಖ್ಯವಾಗಿದೆ. ರೈತರ ಕಾನೂನಾತ್ಮಕ ಹೋರಾಟದಲ್ಲಿ , ನ್ಯಾಯ ಪರವಾದ ನಿಲುವಿಗೆ ನಾನು ಸದಾ ನಿಲ್ಲುವೆ ಎಂದರು. ಇತ್ತೀಚೆಗೆ ಕ್ಷೇತ್ರದ ಕೆಲವೊಂದು ಕಡೆಗಳಿಂದ , ಕೆಲ ಕಂಪನಿಗಳ ವಿರುದ್ಧ ಗಂಭೀರವಾದ ಆರೋಪಗಳು. ಹತ್ತಾರು ದೂರುಗಳು ಹಲವು ರೈತ ಹೋರಾಟಗಾರರಿಂದ ಬಂದಿವೆ , ಆ ಕುರಿತು ಶೀಘ್ರವೇ ಸುದೀಘ್ರವಾಗಿ ಚರ್ಚಿಸಿ ಸಮಸ್ಯೆಗಳಿಗೆ ತಾರ್ಕಿಕ ಪರಿಹಾರ ಕಂಡುಕೊಳ್ಳಲಾಗುದು. ಸೋಲಾರ್ ಹಾಗೂ ಪವನ ವಿದ್ಯುತ್ ಕಂಪನಿಗಳು , ಹಾಗೂ ರೈತರ ನಡುವೆ ಮಧ್ಯವರ್ತಿಗಳ ಹಾವಳಿ ತಡೆಯಲು. ಮತ್ತು ಕಂಪನಿಗಳ ಕಳ್ಳಾಟ ತಡೆಯಲು , ಹಾಗೂ ಜರುಗಬಹುದಾದ ಅಕ್ರಮಗಳನ್ನು ತಡೆಯಲು. ಕಂದಾಯ ಇಲಾಖೆಯ ಉಪ ಆಯುಕ್ತರು , ತಹಸೀಲ್ದಾರ್ ಹಾಗೂ ತಾಪಂ ಇಒ ನೇತೃತ್ವದಲ್ಲಿ , ಒಂದು ಸಮಿತಿ ರಚನೆ ಮಾಡಲಾಗುವುದು. ಕ್ಷೇತ್ರದಲ್ಲಿ ಯಾವುದೇ ಕಂಪನಿಗಳು ಬಂದರು , ಮೊದಲಿಗೆ ಸಮಿತಿಯ ಮುಂದೆ ಒಪ್ಪಿಗೆ ಪಡೆಯಲೇಬೇಕಿದೆ ಎಂದರು. ನಂತರ ಸಭೆಯಲ್ಲಿ ಇತರೆ ಇಲಾಖೆಗಳ ಸಮಸ್ಯೆಗಳ ಕುರಿತು , ಕೂಲಂಕುಷವಾಗಿ ಚರ್ಚೆ ಮಾಡಿದರು. ಉಪ ಆಯುಕ್ತರಾದ ವಿವೇಕಾನಂದ, ತಾಪಂ ಕಾರ್ಯನಿರ್ವಹಣಾಧಿಕಾರಿ ನರಸಪ್ಪ, ತಹಸೀಲ್ದಾರರಾದ ವಿ. ಕೆ.ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಸಿಪಿಐ ಪ್ರಲ್ಹಾದ್ ಎಸ್ ಚನ್ನಗಿರಿ. ಹಾಗೂ ವಿವಿದ ಇಲಾಖೆಗಳ ಅಧಿಕಾರಿಗಳು , ಹಾಗೂ ವಿವಿದ ಸಂಘ ಸಂಸ್ಥೆಗಳ ಮುಖಂಡರು , ಹೋರಾಟಗಾರರು ಸಭೆಯಲ್ಲಿ ಭಾಗಿಯಾಗಿದ್ದರು.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ – 9008937428 / 8151937428*
