11 ಲಕ್ಷ ಜಪಮಾಲೆಗೆ ಮಹಾಸಂಕಲ್ಪ… ನಾಗರಾಜ್ ದರೋಜಿ….

ಗಂಗಾವತಿ. 20-01-2026, ಮಂಗಳವಾರ, ನಮ್ಮ ಆರ್ಯವೈಶ್ಯ ಕುಲದೇವಿ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ಆತ್ಮಾರ್ಪಣೆ ದಿನದ ಪಾವನ ಸಂದರ್ಭದಲ್ಲಿ, 50ಕ್ಕೂ ಹೆಚ್ಚು ವಾಸವಿ ಮಾಲಾಧಾರಿಗಳು ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಇರುಮುಡಿ ಕಟ್ಟಿ ಮೆರವಣಿಗೆಯ ಮೂಲಕ ಹಿರೇ ಜಂತಕಲ್‌ನ ಶ್ರೀ ವಾಸವಿ ವೈಭವದ ಮೆರವಣಿಗೆಯಲ್ಲಿ ಸಮಸ್ತ ಆರ್ಯವೈಶ್ಯ ಸಮಾಜವು ಭಕ್ತಿಭಾವದಿಂದ ಭಾಗವಹಿಸಿತು.ಈ ಸಂದರ್ಭದಲ್ಲಿ ಕರ್ನಾಟಕದ ಪ್ರಥಮ ಮಹಿಳಾ ಅಧ್ಯಕ್ಷರಾದ ರೂಪಾರಾಣಿ ಲಕ್ಷ್ಮಣ್ (ರಾಯಚೂರು) ಅವರು ವಾಸವಿ ಮಾಲೆ ಧರಿಸಿ, ಮೂರು ದಿನಗಳ ಮೌನ ವ್ರತದೊಂದಿಗೆ ವಾಸವಿ ದೇವಸ್ಥಾನ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳಲಿ ಎಂದು ಸಂಕಲ್ಪ ಕೈಗೊಂಡಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಯಿತು.

ಈ ಸಂದರ್ಭದಲ್ಲಿ ಧರ್ಮಸಭೆಯನ್ನು ಉದ್ದೇಶಿಸಿ ಅಧ್ಯಕ್ಷ ನಾಗರಾಜ್ ಶೆಟ್ಟಿ ದರೋಜಿ ಮಾತನಾಡಿ ಸಮಸ್ತ ಆರ್ಯವೈಶ್ಯ ಸಮಾಜ ಬಾಂಧವರಿಂದ ಶ್ರೀ ವಾಸವಿ ಅಮ್ಮನವರ ಆತ್ಮಾಸ್ಮರಣೆ ಶ್ರದ್ಧೆ ಭಕ್ತಿಯಿಂದ ಜರುಗಿತು. ಇಂದಿನಿಂದ ಸಮಾಜ ಬಾಂಧವರು 11 ಲಕ್ಷ ಜಪಮಾಲಿಯನ್ನು ಅಮ್ಮನವರಿಗೆ ಸಮರ್ಪಣೆ ಮಾಡುವುದರ ಮೂಲಕ ಸುಖ ಶಾಂತಿ ಸಮೃದ್ಧಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿಕೊಳ್ಳಲಾಯಿತು ಎಂದು ಹೇಳಿದರು ಈ ಮಹತ್ವದ ಕಾರ್ಯಕ್ರಮದಲ್ಲಿ ಗಂಗಾವತಿ ಆರ್ಯವೈಶ್ಯ ಸಮಾಜದ ಸುರೇಶ್ ಶ್ರೇಷ್ಠಿ, ವಾಸು ಬಂಡಾರಿ, ಗೋಪಾಲ್ ಕೃಷ್ಣ ಪನಗಂಟಿ,ಯುವಜನ ಸಂಘದ ಅಧ್ಯಕ್ಷರಾದ ಪನಗಂಟಿ ಪ್ರಸಾದ್,ಕಾರ್ಯದರ್ಶಿಗಳಾದ ಮಂಜುನಾಥ್ ಇಲ್ಲೂರು, ಹಾಗೂ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷ ನರಸಿಂಹ ಶೆಟ್ಟಿ. ವೀರೇಶ್ ಇಲ್ಲೂರು,ಶ್ರೀನಿವಾಸ, ಶ್ರೇಷ್ಠಿ, ರಾಘವೇಂದ್ರ ಶ್ರೇಷ್ಠಿ, ನರಸಿಂಹ ದರೋಜಿ,ಹಿರೇ ಜಂತಕಲ್ ವಾಸವಿ ದೇವಸ್ಥಾನದ ಆರ್ಯವೈಶ್ಯ ಸಮಾಜ, ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಮಂಡಳಿ ಹಾಗೂ ವಾಸವಿ ಭಜನಾ ಮಂಡಳಿಯ ಸರ್ವ ಸದಸ್ಯರು ಭಜನೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಭಕ್ತಿಮಯ ಶೋಭೆ ತಂದರು. ಶ್ರೀ ವಾಸವಿ ದೇವಸ್ಥಾನ ಹಿರೇ ಜಂತಕಲ್ ಶ್ರೀ ವಾಸವಿ ಅಮ್ಮನವರಿಗೆ ಕ್ಷೀರಭಿಷೇಕ ನಂತರ ಸಮಸ್ತ ಮಾಲಧಾರಿಗಳ ಸಮ್ಮುಖದಲ್ಲಿ ಹೋಮ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳನ್ನು ಗುರು ಭೀಮ ಭಟ್ ಆಚಾರ್ ಸಾಂಗತವಾದ ನಡೆಸಿದರು..

