ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷ ಗುಜ್ಜಲ್ ನಾಗರಾಜಗೆ ಅದ್ದೂರಿ ಸನ್ಮಾನ..

ಕಂಪ್ಲಿ : ವಿಜಯನಗರ ಜಿಲ್ಲಾ ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷ ಗುಜ್ಜಲ್ ನಾಗರಾಜ ಇವರಿಗೆ ಕಂಪ್ಲಿ ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜ ನೇತೃತ್ವದಲ್ಲಿ ಮುಖಂಡರು ನಗರದಲ್ಲಿ ಸನ್ಮಾನಿಸಿ ಗೌರವಿಸಿದರು.ನಂತರ ಎಸ್.ಎಂ.ನಾಗರಾಜ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯ ನಂತರದ ವಿಜಯನಗರದಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲಾ ವಕೀಲರ ಸಂಘಕ್ಕೆ ನೂತನ ಜಿಲ್ಲಾಧ್ಯಕ್ಷರಾಗಿ ಗುಜ್ಜಲ್ ನಾಗರಾಜ ಆಯ್ಕೆಗೊಂಡಿರುವುದು ಹರ್ಷದಾಯಕವಾಗಿದೆ. ಪ್ರತಿಯೊಂದು ಹಂತದಲ್ಲಿ ವಕೀಲರ ವೃತ್ತಿ ಜೊತೆಗೆ ಸಮಾಜ ಸೇವೆ ಮಾಡಿಕೊಂಡ ಬಂದಂತಹ ನಾಗರಾಜ ಇವರಿಗೆ ಒಳ್ಳೆಯ ಸ್ಥಾನ ಲಭಿಸಿದೆ. ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಯಿಸಿದರು.ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಂಪ್ಲಿ ತಾಲೂಕು ಮಾಜಿ ಅಧ್ಯಕ್ಷ ಬಿ.ನಾರಾಯಣಪ್ಪ, ಹಿರಿಯ ಮುಖಂಡ ಹೊನ್ನಳ್ಳಿ ಗಂಗಾಧರಗೌಡ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್
