ಕೊಪ್ಪಳ ತಾಲೂಕ ರಾಷ್ಟ್ರೀಯ ಈಡಿಗೇರ ಮಂಡಳಿ ಅಧ್ಯಕ್ಷರಾಗಿ ಬಸವರಾಜ ಗುತ್ತೇದಾರ್ ಆಯ್ಕೆ..

ಕೊಪ್ಪಳ ತಾಲೂಕ ರಾಷ್ಟ್ರೀಯ ಈಡಿಗೇರ ಮಂಡಳಿ ಅಧ್ಯಕ್ಷರಾಗಿ ಬಸವರಾಜ ಗುತ್ತೇದಾರ್ ಆಯ್ಕೆ..

ಗಂಗಾವತಿ.19ಇತ್ತೀಚೆಗೆ ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದ ಹತ್ತಿರ ಇರುವ ಬುದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಗೆ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಈ ಸಮಯದಲ್ಲಿ ದಿವ್ಯ ಸಾನಿಧ್ಯವನ್ನು ಪ್ರಣವಾನಂದ ಸ್ವಾಮಿಗಳು ವಹಿಸಿದ್ದರು, ಮತ್ತು ಎಚ್ಚ್ ಆರ್ ಶ್ರೀನಾಥ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಜಿಲ್ಲಾ ಅಧ್ಯಕ್ಷರಾದ ರಾಜಪ್ಪ ಎಚ್ ಈಳಿಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ. ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು, ಇದೇ ಸಂದರ್ಭದಲ್ಲಿ ಕೊಪ್ಪಳ ತಾಲೂಕ ರಾಷ್ಟ್ರೀಯ ಈಡಿಗರ ಮಂಡಳಿಯ ಅಧ್ಯಕ್ಷರನ್ನಾಗಿ ಬಸವರಾಜ್ ಗುತ್ತೇದಾರ್ ಸಾಕಿನ್ ಬೂದಗುಂಪ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಸಭೆಯಲ್ಲಿ ನೂರಾರು ಈಡಿಗರ ಕುಲಬಾಂಧವರು ಭಾಗವಹಿಸಿದ್ದರು ಮತ್ತು ಪ್ರಣವಾನಂದ ಶ್ರೀಗಳ ಆಶೀರ್ವಚನ ಪಡೆದು ಪುನೀತರಾದರು.

Leave a Reply

Your email address will not be published. Required fields are marked *