ವಿಶ್ವಕರ್ಮರು ಸೃಷ್ಟಿಕರ್ತದೇವಶಿಲ್ಪಿ… ಶ್ರೀ ಗಣೇಶ್ವರ ಸ್ವಾಮಿಗಳು.

ವಿಶ್ವಕರ್ಮರು ಸೃಷ್ಟಿಕರ್ತದೇವಶಿಲ್ಪಿ… ಶ್ರೀ ಗಣೇಶ್ವರ ಸ್ವಾಮಿಗಳು.


ಗಂಗಾವತಿ. ಭಾರತೀಯ ಪರಂಪರೆಯಲ್ಲಿ ಗುರು ವಿಶ್ವಕರ್ಮರು ಸೃಷ್ಟಿಕರ್ತರಾಗಿ ಹಾಗು ದೇವ ಶಿಲ್ಪಿಯಾಗಿ ಕಾಣಿಸುತ್ತಾರೆ ಎಂದು ಡಾಕ್ಟರ್ ಗಣೇಶ್ವರ ಸ್ವಾಮಿಗಳು ಹೇಳಿದರ ಅವರು ಸಮೀಪದ ಜಂಗಮರ ಕಲ್ಗುಡಿಯಲ್ಲಿ ಶ್ರೀ ಬೆಟ್ಟದೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ವಿಶ್ವಕರ್ಮ ಜಯಂತೋತ್ಸವದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನದಲ್ಲಿ ನುಡಿಗಳು ಪರಂಪರೆಯಲ್ಲಿ ಆಧ್ಯಾತ್ಮ ಸಂಗೀತ ಚಿತ್ರಕಲೆ ಪಂಚಕರ್ಮ ವೃತ್ತಿಗಳು ಕುಲ ಕಸುಬುಗಳಾಗಿವೆ ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ವಿಶ್ವಕರ್ಮ ಜಯಂತಿಯ ಆಚರಣೆಯನ್ನು ಜಾರಿಗೆ ತಂದಿದ್ದು ಸಂತಸದಾಯಕವಾಗಿದೆ ಇತರೆ ಸಮಾಜಗಳಿಗಿಂತ ಹಿಂದುಳಿದ ಸಮಾಜವಾದ ವಿಶ್ವಕರ್ಮರು ವಿಶ್ವ ಬ್ರಾಹ್ಮಣ ಸಮಾಜವೆಂದು ಕರೆಯಲಾಗುತ್ತದೆ ಎಂದು ಹೇಳಿದರು .

ಹಾಗೆ ತುಂಗಭದ್ರಾ ಜಲಾಶಯ ನಿರ್ಮಾಣಕ್ಕಾಗಿ ನಮ್ಮ ಪೂರ್ವಜರು ಆಸ್ತಿ ಕಳೆದುಕೊಂಡು ಜಂಗಮರ ಕಲ್ಗುಡಿ ನೀಲಿ ಬಂದಿದ್ದಾರೆ ಇದರಿಂದ ವಿಜಯನಗರ ಸಾಮ್ರಾಜ್ಯ ಮೋಸದಿಂದ ಬಲಿಯಾಯಿತು ಎಂದು ಇತಿಹಾಸ ಕುರಿತು ಮಾತನಾಡಿದರು ಇದಕ್ಕೂ ಪೂರ್ವದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ವಿಶೇಷ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹಾನಗಲ್ ಕುಮಾರ ಸ್ವಾಮಿಗಳವರ 158ನೇ ಜಯಂತಿ ಉತ್ಸವ ಸದ್ಭಾವನೆಯ ಗುರುವರ್ಯರು. ಗ್ರಾಮ ಪಂಚಾಯತಿ ಅಧ್ಯಕ್ಷರು ಸುನಿತಾ. ಸದಸ್ಯರುಗಳಾದ ಕಳಕನ ಗೌಡ ಕಲ್ಲೂರ್. ಪ್ರಸಾದ್ ಸಕ್ಕರೆ ಶ್ರೀನಿವಾಸ್ ದೇವಸ್ಥಾನ ಸಮಿತಿಯ ಅಧ್ಯಕ್ಷ ಜೆ ಬಸಣ್ಣ ಸೇರಿದಂತೆ ಗ್ರಾಮದ ಮುಖಂಡ ರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *