ಅತ್ಯುತ್ತಮ ಶಿಕ್ಷಕಿ ಪಶಸ್ತಿಗೆ ಉಷಾ ರಾಣಿ ಭಾಜನ,,! ಅಭಿನಂದನೆ…

ಗಂಗಾವತಿ :19 ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿರುಪಾಪುರ ಹೆ.ಆರ್.ಜಿ. ಶಾಲೆಯ ಶ್ರೀಮತಿ ಆಶಾರಾಣಿಯವರು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು – ತಾಲೂಕ ಘಟಕ ಗಂಗಾವತಿಯಿಂದ ಕನಕಗಿರಿ ಪಟ್ಟಣದಲ್ಲಿ ಜರುಗಿದ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆಶಾರಾಣಿಯವರಿಗೆ 2025-26ನೇ ಸಾಲಿನ ಅತ್ಯುತ್ತಮ ಶಿಕ್ಷಕಿ ಪಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶ್ರೀಮತಿ ಆಶಾರಾಣಿಯವರ18 ವರ್ಷಗಳಿಂದ ಕ್ರೀಯಾಶೀಲ ಶಿಕ್ಷಕಿಯಾಗಿ ಉತ್ತಮ ಭೋದನೆಯನ್ನು ನೀಡುತ್ತಾ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಮಾದರಿ ಶಿಕ್ಷಕಿಯಾಗಿರು ವುದನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇವರು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಕ್ಕಾಗಿ ಸರಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಬಿ. ಆರ್ ಜೋಷಿ ಹಾಗೂ ಸರಕಾರಿ ನೌಕರರು ಸಂಘದ ಸರ್ವ ಸದಸ್ಯರು ಮುಖ್ಯೋಪಾಧ್ಯಾಯರು ಸೇರಿದಂತೆ ಸಹ ಶಿಕ್ಷಕರು, ಸಿಬ್ಬಂದಿಯವರು,ಶಿಕ್ಷಣ ಪ್ರೇಮಿಗಳು ಅಭಿನಂದಿಸಿದ್ದಾರೆ.

