ಟಿ.ಎಂ.ಎ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ …

ಗಂಗಾವತಿ: ನಗರದ ಕೊಪ್ಪಳ ರಸ್ತೆಯ ಪ್ರಶಾಂತ ನಗರದಲ್ಲಿರುವ ಅನುದಾನಿತ ಟಿ.ಎಂ.ಎ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದ 2009-10 ನೇ ಸಾಲಿನಲ್ಲಿ ಕಲಿತ ಪ್ರಶಿಕ್ಷಣಾರ್ಥಿಗಳಿಂದ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸಿದರು. ಡೊಳ್ಳು ಬಾರಿಸಿ ಹೂ ಮಳೆಗೈದು ನೆಚ್ಚಿನ ಗುರುಗಳಿಗೆ ಹಾಳೇ ಮತ್ತು ಹಾಲಿ ಪ್ರಶಿಕ್ಷಣಾರ್ಥಿಗಳು ಸ್ವಾಗತಿಸಿದರು. ಕಲಿಸಿದ ಗುರುಗಳಿಗೆ ಸಸಿಗಳನ್ನ ನೀಡುವುದರ ಮೂಲಕ ಪರಿಸರ ಪ್ರಜ್ಞೆ ಮೆರೆದರು.ನಂತರ ವೇದಿಕೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಈ ವೇಳೆ ದೇಶ ಸೇವೆ ಮಾಡುವ ಬಿಎಸ್ ಎಫ್ ಸೈನಿಕ ಜಗದೀಶ ಯರಡೋಣ ಅವರನ್ನ ಸನ್ಮಾನಿಸಲಾಯಿತು. ಹಳೇ ಪ್ರಶಿಕ್ಷಣಾರ್ಥಿಗಳು ಅನಿಸಿಕೆಗಳನ್ನ ಹಂಚಿಕೊಂಡರು. ನಂತರ ಹಳೆ ವಿದ್ಯಾರ್ಥಿಗಳಿಂದ ಕಲಿಸಿದ ಗುರುಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಗುರುಗಳು ಮಾತನಾಡಿ ವಿದ್ಯಾರ್ಥಿ ಜೀವನ ಶಿಕ್ಷಕರ ಕೈಯಲ್ಲಿ ಇರುತ್ತೆ ಅವರನ್ನ ಸನ್ಮಾರ್ಗದೆಡೆಗೆ ಕೊಂಡ್ಯೊಯಲು. ಆ ನಿಟ್ಟಿನಲ್ಲಿ ತಾವುಗಳು ಇದ್ದಲ್ಲೆ ಇರದೆ ಎತ್ತರದ ಮಟ್ಟಕ್ಕೆ ಹೋಗಬೇಕು, ತಮ್ಮ ಮಕ್ಕಳಿಗು ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು. ಹಳೇ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೇಮ್ ಆಡಿಸುವುದರ ಮೂಲಕ ಸಂತಸಪಟ್ಟರು. ಈ ಸಂದರ್ಭದಲ್ಲಿ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಕೆಸಿ ಕುಲಕರ್ಣಿ.ನಿಕಟಪೂರ್ವ ಪ್ರಾಂಶುಪಾಲರಾದ ವಿಶ್ವನಾಥ,ಜಿಎಮ್. ಹರಪನಹಳ್ಳಿ ಬಿಇಡಿ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ವಿಜಯಲಕ್ಷ್ಮೀ,ಹರಪನಹಳ್ಳಿ ಬಿಇಡಿ ಕಾಲೇಜು ಹಾಲಿ ಪ್ರಾಂಶುಪಾಲರಾದ ವೀರೇಶ, ಉಪನ್ಯಾಸಕರಾದ ಅರಣಕುಮಾರ,ರಮೇಶ,ಪಂಚಾಕ್ಷರಯ್ಯ,ರುದ್ರಪ್ಪ ಸೇರಿದಂತೆ ನೂರಾರು ಹಳೇ ಮತ್ತು ಹಾಲಿ ಪ್ರಶಿಕ್ಷಣಾರ್ಥಿಗಳು ಇದ್ದರು.