ಎಂ.ಜೆ ಶ್ರೀನಿವಾಸ ಅವರಿಗೆ ಸಂಪಾದಕ ರತ್ನ ಪ್ರಶಸ್ತಿಗೆ …

ಎಂ.ಜೆ ಶ್ರೀನಿವಾಸ ಅವರಿಗೆ ಸಂಪಾದಕ ರತ್ನ ಪ್ರಶಸ್ತಿಗೆ …

ಗಂಗಾವತಿ.ಡಿ.18: ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ(ರಿ) ತುಮಕೂರು ಜಿಲ್ಲಾ ಘಟಕದಿಂದ ಕೊಡಮಾಡುವ 2024-25ನೇ ಸಾಲಿನ ಸಂಪಾದಕ ರತ್ನ ದತ್ತಿನಿಧಿ ರಾಜ್ಯ ಪ್ರಶಸ್ತಿಗೆ ಮಾನವೀಯ ಮೌಲ್ಯವುಳ್ಳ ಪರಿಣಾಮಕಾರಿ ವರದಿಗಳಿಗಾಗಿ ಪ್ರಜಾಪರ್ವ ಕನ್ನಡ ದಿನಪತ್ರಿಕೆ ಸಂಪಾದಕ ಎಂ.ಜೆ.ಶ್ರೀನಿವಾಸ ಅವರನ್ನು ಆಯ್ಕೆ ಮಾಡಲಾಗಿದೆ.ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಬೆಂಗಳೂರಿನಲ್ಲಿ ಡಿ.21ರ ಭಾನುವಾರದಂದು ನಡೆಯುವ ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಸಂಪಾದಕರ ರತ್ನ ರಾಜ್ಯ ದತ್ತಿ ನಿಧಿ ಪ್ರಶಸ್ತಿ ಹಾಗೂ ರಾಜಕಾರ್ಯಕಾರಿಣಿ ಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಜಿ.ಕರುಣಾಕರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್.ಮಂಜುನಾಥ ತಿಳಿಸಿದ್ದಾರೆ.ಸಾಮಾಜಿಕ ಕಳಕಳಿಯ ವರದಿಗಳಿಂದ ಕೊಪ್ಪಳ ಜಿಲ್ಲೆಯ ಮನೆ ಮಾತಾಗಿರುವ ಪ್ರಜಾಪರ್ವ ದಿನಪತ್ರಿಕೆಯ ಸಂಪಾದಕ ಎಂ.ಜೆ ಶ್ರೀನಿವಾಸ ಅವರಿಗೆ 2024-25ನೇ ಸಾಲಿನ *ಸಂಪಾದಕ ರತ್ನ ದತ್ತಿನಿಧಿ ರಾಜ್ಯ ಪ್ರಶಸ್ತಿ ಲಭಿಸಿದ್ದಕ್ಕೆ ಕಕಾನಿಪ ಸಂಘದ ಹಿರಿಯ ಪತ್ರಕರ್ತ ಪಿ.ದಶರಥ ಹಾಗೂ ಕಕಾನಿಪಸಂ ಸದಸ್ಯ, ಕಿಷ್ಕಿಂದಾ ಟಿವಿ ವರದಿಗಾರ ಮಲ್ಲಿಕಾರ್ಜುನ ಗೋಟೂರು ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *