ದುಗಾ೯ದೇವಿ ಜಾತ್ರಾ ಮಹೋತ್ಸವ : ಪೂವ೯ಭಾವಿ ಸಭೆ…

ದುಗಾ೯ದೇವಿ ಜಾತ್ರಾ ಮಹೋತ್ಸವ : ಪೂವ೯ಭಾವಿ ಸಭೆ…


ಗಂಗಾವತಿ:>ನಗರದ ದುಗಾ೯ದೇವಿ ದೇವಸ್ಥಾನದ ಸಭಾಂಗಣದಲ್ಲಿ ದುಗಾ೯ದೇವಿ ಜಾತ್ರಾ ಮಹೋತ್ಸವದ ಕುರಿತು ಪೂವ೯ಭಾವಿ ಸಭೆಯನ್ನು ಮಂಗಳವಾರ ನಡೆಸಲಾಯಿತು.
ವಿಧಾನ ಪರಿಷತನ ಮಾಜಿ ಸದಸ್ಯರಾದ ಎಚ್.ಆರ್. ಶ್ರೀನಾಥ ಮಾತನಾಡಿ, ಪ್ರತಿ ಮೂರು ವಷ೯ಕ್ಕೆ ಒಂದು ಬಾರಿ ದುಗಾ೯ದೇವಿ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವಷ೯ದ ಡಿಸೆಂಬರ 18 ರಿಂರ 21ರ ವರೆಗೆ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿಯೇ ಈಗಾಗಲೇ ದೇವಸ್ಥಾನ ಆಡಳಿತ ಮಂಡಳಿಯವರು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಅದೇ ರೀತಿಯಾಗಿ 4 ದಿನಗಳ ಕಾಲ ನಡೆಯುವ ದೇವಿ ಜಾತ್ರೆಯಲ್ಲಿ ಸವ೯ ಸಮಾಜದವರು ಭಾಗವಹಿಸುವ ಮೂಲಕ ದೇವಿಯ ಸೇವೆಯನ್ನು ಮಾಡಲು ಮುಂದಾಗಬೇಕು. ಇದು ಊರ ಜಾತ್ರೆಯಾಗಿದ್ದು, ಯಾವುದೇ ಜಾತಿ, ಧಮ೯ಕ್ಕೆ ಸಿಮೀತವಾಗದೆ ಎಲ್ಲರನ್ನೂ ಒಗ್ಗುಡಿಸಿಕೊಂಡು ಜಾತ್ರೆಯನ್ನು ಮಾಡಬೇಕಾಗಿದೆ. ಹಾಗಾಗಿ ದೇವಸ್ಥಾನ ಸಮಿತಿಯವರು ಎಲ್ಲಾ ಸಮಾಜದವರಿಗೆ ಆಹ್ವಾನವನ್ನು ನೀಡಬೇಕು. ಇನ್ನೂ ಪ್ರತಿಯೊಬ್ಬರು ಸಹ ಸ್ವಯಂ ಸೇವಕರಾಗಿ ಕೆಲಸ ಮಾಡುವ ಮೂಲಕ ದೇವಿಯ ಸೇವೆಯನ್ನು ಮಾಡಿದರೆ ಮಾತ್ರ ಜಾತ್ರೆಯನ್ನು ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಪ್ರತಿ 3 ವಷ೯ಕ್ಕೆ ಒಮ್ಮೆ ನಡೆಯುವ ದೇವಿಯ ಜಾತ್ರಾ ಮಹೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. 4 ದಿನಗಳ ಕಾಲ ಜಾತ್ರೆ ನಡೆಯಲಿದ್ದು, ಡಿ.18 ರಂದು ನಗರದ ಕಲ್ಮಠದ ದೇವಸ್ಥಾನದಿಂದ ದುಗಾ೯ದೇವಿ ದೇವಸ್ಥಾನದವರೆಗೆ 251 ಪೂಣ೯ ಕುಂಭಗಳ ಮೆರವಣಿಗೆ ಮಾಡಲಾಗುವುದು. ನಂತರ ಮಹಾ ಸಂಕಲ್ಪ ದುಗಾ೯ ಸಪ್ತಶತೀ ಪಾರಾಯಣ ನಡೆಸಲಾಗುವುದು. ಡಿ.19 ರಂದು ಗಣಪತಿ ಪೂಜೆ, ಮಹಾಸಂಕಲ್ಪ, ಪುಣ್ಯಾಹವಾಚನ, ದುಗಾ೯ ಸಪ್ತಶತಿ ಪಾರಾಯಣ, ಲಲಿತ ಸಹಸ್ರ ನಾಮಪಾರಾಯಣ ಹಮ್ಮಿಕೊಳ್ಳಲಾಗುವುದು. ಡಿ.20 ರಂದು ನವಚಂಡಿಯಾಗ, ಪೂಣಾ೯ಹುತಿ ಹಾಗೂ ಸಂಜೆ ಕಲ್ಮಠದ ಗಾಳೆಮ್ಮ ದೇವಿ ದೇವಸ್ಥಾನದಿಂದ ದುಗಾ೯ದೇವಿ ದೇವಸ್ಥಾನದವರೆಗೆ ಡೊಳ್ಳು, ಭಜನೆ, ಭಾಜಾ ಭಜಂತ್ರಿ ಸಕಲ ವಾದ್ಯಗಳೊಂದಿಗೆ ದುಗಾ೯ದೇವಿಯ ಮೂತಿ೯ಯನ್ನು ಮೆರವಣಿಗೆ ಮಾಡಲಾಗುವುದು. ನಂತರ ಡಿ.21 ರಂದು ದೇವಸ್ಥಾನದಲ್ಲಿ ದೇವಿಯ ಮೂತಿ೯ಗೆ ಅಭಿಷೇಕ, ಕುಂಕುಮಾಚ೯ನೆ, ಅಲಂಕಾರ ಪೂಜೆ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾಮಿ೯ಕ ಪೂಜಾ ಕಾಯ೯ಕ್ರಮಗಳು ಜರುಗಲಿವೆ ಎಂದು ಹೇಳಿದರು.
ಮಾಜಿ ಸಚಿವರಾದ ಮಲ್ಲಿಕಾಜು೯ನ ನಾಗಪ್ಪ ಪ್ರಮುಖರಾದ ಮುಸ್ಟೂರ ರಾಜಶೇಖರಪ್ಪ, ಅಮರಜ್ಯೋತಿ ವೆಂಕಟೇಶ್, ಜೋಗದ ಹನುಮಂತಪ್ಪ ನಾಯಕ, ಅಶೋಕಪ್ಪ, ಬಿ. ನಾಗರಾಜ, ವೀರಭದ್ರಪ್ಪ ನಾಯಕ, ಈ.ರಾಮಕೃಷ್ಣ, ಎಫ್.ರಾಘವೇಂದ್ರ, ಅನ್ನಪೂಣ೯ ಸಿಂಗ್, ಹುಸೇನಪ್ಪ ಮಾದಿಗ, ಶಿವಪ್ಪ, ಗೀತಾ ವಿಕ್ರಮ್ ಹಾಗೂ ಇತರರಿದ್ದರು.

Leave a Reply

Your email address will not be published. Required fields are marked *