ರಮೇಶ್ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ…

ಗಂಗಾವತಿ:18 ಕರ್ನಾಟಕ ವಾಲ್ಮೀಕಿ ರತ್ನ ಪ್ರಶಸ್ತಿ – 2025. ಪ್ರಶಸ್ತಿಗೆ ಕೆ.ರಮೇಶ್ ಸಿದ್ದಪ್ಪ ಆಯ್ಕೆಯಾಗಿದ್ದಾರೆ. ದಿನಾಂಕ 26-10-2025 ಭಾನುವಾರ ರಂದು ಬೆಳಿಗ್ಗೆ 11-00 ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ, ದೊಡ್ಡಬಳ್ಳಾಪುರ ಹಾಗೂ ಕರ್ನಾಟಕ ವಾಲ್ಮೀಕಿ ನೌಕರರ ಒಕ್ಕೂಟ (ರಿ), ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೊಡ್ಡಬಳ್ಳಾಪುರ ತಾ. ಮೆಳೇಗೋಟೆ ಕ್ರಾಸ್, ಮಹರ್ಷಿ ವಾಲ್ಮೀಕಿ ಗುರುಪೀಠ, ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಕರ್ನಾಟಕ ವಾಲ್ಮೀಕಿರತ್ನ-2025 ಪ್ರಶಸ್ತಿಗೆ ಆಯ್ಕೆಯಾಗಿದ್ದು,ಈ ಸಮಾರಂಭದಲ್ಲಿ ನಾಗಶಕ್ತಿ ಶ್ರೀಶ್ರೀಶ್ರೀ ವಾಲ್ಮೀಕಿ ಬ್ರಹ್ಮನಾಂದ ಗುರೂಜಿ, ಪೀಠಾಧ್ಯಕ್ಷರು ಶ್ರೀ ಮಹರ್ಷಿ ವಾಲ್ಮೀಕಿ ದೊಡ್ಡಬಳ್ಳಾಪುರ ಇವರ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ರಮೇಶ್ ಅವರಿಗೆ ಸಿಕ್ಕ ಈ ಪ್ರಶಸ್ತಿ ಗೌರವಕ್ಕೆ ಸ್ಥಳೀಯ ಅಭಿಮಾನಿಗಳು, ಸಂಘ ಸಂಸ್ಥೆಯ ಮುಖಂಡರು ಅಭಿನಂದಿಸಿದ್ದಾರೆ.

