ಅವಸಾನದ ಅಂಚಿನಲ್ಲಿರುವ ಜಾನುವಾರುಗಳ ಸಂತೆ.ಮೂಲಭೂತ ಸೌಲಭ್ಯಕ್ಕೆ ಆಗ್ರಹ…

ಅವಸಾನದ ಅಂಚಿನಲ್ಲಿರುವ ಜಾನುವಾರುಗಳ ಸಂತೆ.ಮೂಲಭೂತ ಸೌಲಭ್ಯಕ್ಕೆ ಆಗ್ರಹ…

ಗಂಗಾವತಿ: ತಾಲೂಕಿನ ಶ್ರೀರಾಮ ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ಗುರುವಾರದಂದು ನಡೆಯುತ್ತಿರುವ ದನಗಳ ಸಂತೆಗೆ ಸರಿಯಾದ ರೀತಿಯಲ್ಲಿ ಜನ ಮತ್ತು ಜಾನುವಾರಗಳಿಗೆ ಮೂಲಭೂತ ಸೌಕರ್ಯಗಳಾದ ನೀರು ಮತ್ತು ರಸ್ತೆ ವ್ಯವಸ್ಥೆ, ಚರಂಡಿ ವ್ಯವಸ್ಥೆ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ಈ ದನಗಳ ಸಂಖ್ಯೆಯು ಸರ್ಕಾರದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಸಂತೆಗೆ ಬರುವ ರೈತರು ತಮ್ಮ ಅಳಲನ್ನು ಮಾಧ್ಯಮದವರ ಮುಂದೆ ತೋಡಿಕೊಂಡಿದ್ದಾರೆ. ಆದರೆ ಈ ಸಂತೆಗೆ 27 ಎಕರೆ ಭೂಮಿ ಇದೆ ಸೌಕರ್ಯಗಳು ಇಲ್ಲದ ಕಾರಣ ಪಕ್ಕದ ತಾಲೂಕು ಸಿಂಧನೂರಿಗೆ ಹೋಗುತ್ತೇವೆ ಮತ್ತು ಪಕ್ಕದ ಗಿಣಿಗೇರಾ ಸಂತೆ ಹೋಗುತ್ತೆವೆ. ಆದರೆ ನಮ್ಮ ಹತ್ತಿರದಲ್ಲಿರುವ ಅಂದಿನ ದೇಶಕ್ಯಾಂಪ್ ಇಂದಿನ ಶ್ರೀರಾಮ ನಗರದಲ್ಲಿರುವ ದನಗಳ ಸಂತೆಗೆ ರೈತರು ಬರುವುದಕ್ಕೆ ಹಿಂದೇಟು ಹಾಕುತ್ತಾರೆ. ಹಾಗಾಗಿ ಸರ್ಕಾರ ಶ್ರೀರಾಮನಗರದ ಸುತ್ತಮುತ್ತಲಿರುವ ರೈತ ಬಾಂಧವರಿಗೆ ಅನುಕೂಲವಾಗುವ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿ ಕೊಟ್ಟರೆ. ಶ್ರೀರಾಮನಗರದ ಜಾನುವಾರಗಳ ಸಂಖ್ಯೆ ಇನ್ನೂ ಎತ್ತರ ಮಟ್ಟಕ್ಕೆ ಬೆಳೆಯುತ್ತದೆ. ಜೊತೆಗೆ ಈಗಾಗಲೇ ರೈತರಿಗೆ ಜಾನುವಾರುಗಳ ಸಾಕುವುದಕ್ಕೆ ಸರ್ಕಾರದಿಂದ ಯಾವುದೇ ಲೋನ್ ಪಡೆಯುವುದು ಕಷ್ಟಕರವಾಗಿದೆ. ಇಂಥ ಸಂದರ್ಭದಲ್ಲಿ ಇಲ್ಲಿ ಹತ್ತಿರ ಇರುವ ಶ್ರೀರಾಮನಗರದ ಜಾನುವಾರಗಳ ಸಂತೆಗೆ ಹೋಗಬೇಕೆಂದರೆ ರೈತರಿಗೆ ಮತ್ತು ದನಗಳಿಗೆ ಸೌಲಭ್ಯಗಳಿಂದ ಮರಿಚಿಕೆಯಾಗಿದೆ. ಹಾಗಾಗಿ ಸರ್ಕಾರ ಇತ್ತ ಕಡೆ ಗಮನ ಹರಿಸಿ ಅಭಿವೃದ್ಧಿಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡಿದರು. ಈ ಸಂದರ್ಭದಲ್ಲಿ ರೈತರಾದ ಬೆಟ್ಟಪ್ಪ ನಾಯಕ. ನರಸಪ್ಪ ನಾಯಕ. ರಾಮಪ್ಪ. ಸೂಗಪ್ಪ. ಮಾಂತೇಶ. ರಮೇಶ್.ಹುಸೇನ್ ಸಾಬ್.ಹುಸೇನ್ ಬಾಷಾ ಕಾರಟಗಿ ಸೇರಿದಂತೆ ಅನೇಕ ರೈತ ಮುಖಂಡರು ಇದ್ದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾರಾಟ ಸಹಾಯಕರಾದ ಮಾರುತಿ ಅವರು ಮಾತನಾಡಿ ರೈತರು ಹೇಳುವುದು ಸರಿ ಇದೆ ಹಾಗಾಗಿ ಎಪಿಎಂಸಿ ದನಗಳ ಸಂತೆಗೆ ಸರ್ಕಾರ ಅಭಿವೃದ್ಧಿಪಡಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *