ಶ್ರೀ ಕೊಟ್ಟೂರೇಶ್ವರ ಶಿವಯೋಗಿಗಳವರ ಭಾವಚಿತ್ರದ ಭವ್ಯ ಮೆರವಣಿಗೆ….

ಗಂಗಾವತಿ.. ನಗರದ ಕಲ್ಮಠದ ಪರಮಪೂಜ್ಯ ಶಿವಯೋಗಿಗಳಾದ ಲಿಂಗೈಕ್ಯ ಶ್ರೀ. ಮ.ನಿ ಪ್ರ. ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳವರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಹಾಗೂ ಗವಿಮಠದ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ಹುಚ್ಚೇಶ್ವರ ಭಜನಾ ಮಂಡಳಿ ಇವರಿಂದ ಕಲ್ಮಠದ ಆವರಣದಿಂದ ಶುಕ್ರವಾರ ಬೆಳಗ್ಗೆ ಪ್ರಾರಂಭಗೊಂಡಿತು. ನಗರದ ಪ್ರಮುಖ ರಾಜಬೀದಿಗಳ ಮೂಲಕ ಶ್ರೀ ಮಲ್ಲಿಕಾರ್ಜುನ ಮಠ ಗ್ರಾಮ ದೇವತೆ ಶ್ರೀ ದುರ್ಗಾ ದೇವಿ ದೇವಸ್ಥಾನ ತೆರಳಿ ಪುನಹ ಕಲ್ಮಠಕ್ಕೆ ಆಗಮಿಸಿತು.

ಈ ಸಂದರ್ಭದಲ್ಲಿ ಕಲ್ಮಠದ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡಿ. ಕಲ್ಮಠ ಪರಮಪೂಜ್ಯ ಲಿಂll ಶ್ರೀ ಕೊಟ್ಟೂರೇಶ್ವರ ಮಹಾ ಶಿವಯೋಗಿಗಳವರ 104 ವರ್ಷದ ಮಹೋತ್ಸವ ಹಾಗೂ ಶ್ರೀ ಸಿದ್ಧಾರೂಢ ಸ್ವಾಮಿಗಳವರ ಪುರಾಣ ಪ್ರವಚನ ಹಾಗೂ ಶರಣ ಸಂಸ್ಕೃತಿ ಉತ್ಸವ ಕಳೆದ ಎಂಟರಿಂದ ಆರಂಭಗೊಂಡು ಇಂದು ಸಂಜೆ ಕಲ್ಮಠದ ಪುರಾಣಮಂಟಪದಲ್ಲಿ ಪುರಾಣ ಮಂಗಳೋತ್ಸವ ಹಾಗೂ ಧರ್ಮಸಭೆಯೊಂದಿಗೆ ಸಂಪನ್ನಗೊಳ್ಳಲಿದೆ. ಸಭೆಯಲ್ಲಿ ನಾಡಿನ ಹರ ಗುರು ಶರಣರು ಹಾಗೂ ಮಠಗಳ ಪೀಠಾಧಿಪತಿಗಳು ಪೂಜ್ಯರು ಭಾಗವಹಿಸುವರು ಎಂದು ಹೇಳಿದರು. ಇದಕ್ಕೂ ಪೂರ್ವದಲ್ಲಿ ಶ್ರೀ ರುದ್ರಯ್ಯ ಸ್ವಾಮಿ ಅಯೋಧ್ಯ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಇವರಿಂದ ಶಿವಯೋಗಿಗಳವಾರ ಗದ್ದುಗೆಗೆ ಮಹಾ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ನಡೆಸಲಾಯಿತು ಎಂದು ತಿಳಿಸಿದರು.
