ಕುದ್ರಿಮೋತಿ : ವರುಣನ ಆಗಮನಕ್ಕೆ ವಿಶೇಷ ಅಭಿಷೇಕ,,

ಕುದ್ರಿಮೋತಿ : ವರುಣನ ಆಗಮನಕ್ಕೆ ವಿಶೇಷ ಅಭಿಷೇಕ,,

ಕುಕನೂರು :ತಾಲೂಕಿನಾದ್ಯಂತ ಕೃಷಿ ಚಟುವಟಿಕೆ ಪ್ರಾರಂಭವಾದಾಗಿನಿಂದ ಇಲ್ಲಿಯ ವರೆಗೆ ಸಕಾಲಕ್ಕೆ ಮಳೆಯಾಗದೇ ರೈತರು ಸಂಕಷ್ಟಕ್ಕಿಡಾಗಿದ್ದುಬಿತ್ತನೆ ಮಾಡಿದ ಬೆಳೆಗಳೆಲ್ಲವು ಕಮರಿ ಹೋಗುತ್ತಿದ್ದರಿಂದ ಮಳೆಗಾಗಿ ವಿವಿಧ ಪೂಜೆ, ಪುನಸ್ಕಾರಗಳ ಮೊರೆ ಹೋದ ರೈತರು ವರುಣನ ಆಗಮನಕ್ಕೆ ಗುರುವಾರದಂದು ವಿಷೇಶ ಪೂಜೆ, ಪ್ರಾರ್ಥನೆ ಸಲ್ಲಿಸಿದರು.ತಾಲ್ಲೂಕಿನ ಕುದರಿಮೋತಿ ಗ್ರಾಮದಲ್ಲಿ ವರುಣ ದೇವನ ಆಗಮನಕ್ಕಾಗಿ ಕುದ್ರಿಮೋತಿ ಮೈಸೂರ ಸಂಸ್ಥಾನ ಮಠದಲ್ಲಿ ಊರಿನ ಗುರು ಹಿರಿಯರು, ಯುವಕರು ಕೂಡಿ ವರುಣನಿಗಾಗಿ ಕರ್ತೃಗದ್ದುಗೆಗೆ ವಿಶೇಷ ಅಭಿಷೇಕ ಪೂಜೆ ಸಲ್ಲಿಸಿದರು.ಈ ಎಲ್ಲಾ ಪೂಜಾ ಕಾರ್ಯಕ್ರಮಗಳು ಮಠದ ಅಧಿಪತಿಗಳಾದ ಶ್ರೀ ವಿಜಯ ಮಹಾಂತ ಸ್ವಾಮಿಗಳ ನೇತೃತ್ವದಲ್ಲಿ ನೆರವೇರಿಸಿದ ಭಕ್ತರು, ಶ್ರೀಗಳಿಗೆ ಭಕ್ತಿ ಗೌರವವನ್ನು ಅರ್ಪಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸಣ್ಣ ದೊಡ್ಡಮನಿ, ಮುದಕಪ್ಪ ರಾವಣಿಕಿ, ಮಹಾಂತಪ್ಪ ಸಿಡ್ನೇಹಳ್ಳಿ, ಶಿವಪ್ಪ ಬೇವಿನಗಿಡದ, ಮಂಜುನಾಥ ಗಟ್ಟೆಪ್ಪನವರ್, ಅಮರೇಶ ತಲ್ಲೂರು, ಹಂಪಯ್ಯ ಕಲ್ಮಠ, ಗ್ರಾಪಂ.ಸದಸ್ಯರಾದ ಮಾಬುಸಾಬ ಮಕಾಂದರ್, ರವಿ ಕಟಗಿ, ಖಾಸೀಮ್ ಸಾಬ ಮಕಾಂದರ್, ದಾನನಗೌಡ ಮಾ.ಪಾಟೀಲ್, ದೇವಪ್ಪ ಬೊಮ್ಮನಾಳ, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *