ಗಾಂಧಿ ಪ್ರಶಸ್ತಿ ಪಡೆದ ಗ್ರಾಮ ಪಂಚಾಯತಿಯ ದುಷ್ಥಿತಿ….

ಗಾಂಧಿ ಪ್ರಶಸ್ತಿ ಪಡೆದ ಗ್ರಾಮ ಪಂಚಾಯತಿಯ ದುಷ್ಥಿತಿ….

ಮಸ್ಕಿ. ತಾಲೂಕಿನ ಗಾಂಧಿ ಪ್ರಶಸ್ತಿ ಪಡೆದ ಗ್ರಾಮ ಪಂಚಾಯಿತಿ ಮಲ್ಲದಗುಡ್ಡ ನೆರೆಹೊರೆಯ ರಾಜಕಾರಣಿಗಳು ಒಮ್ಮೆ ಆಗಮಿಸಿ ಈ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮದ ಓಣಿಗಳನ್ನು ನೋಡಿಕೊಂಡು ಈ ಗ್ರಾಮದಂತೆ ರಾಜ್ಯದ ಗ್ರಾಮಗಳು ಮಾದರಿಯಾಗಬೇಕೆಂದು ಜನಪ್ರತಿನಿಧಿಗಳು ಶಾಸಕರು ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಒಮ್ಮೆ ಗ್ರಾಮದ ಪರಿಸರವನ್ನು ನೋಡಿಕೊಂಡು ಹೋಗಬೇಕೆಂದು ಕರ್ನಾಟಕ ರಾಜ್ಯಬೇಡರ ಸಮಿತಿ, ಬೆಂಗಳೂರು ಕಾರ್ಯಕಾರಿಣಿ ಸಮಿತಿ ಸದಸ್ಯ ಅಯ್ಯಪ್ಪ ನಾಯಕ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ ಈ ಗ್ರಾಮ ಪಂಚಾಯಿತಿಗೆ ಒಳಪಡುವ ರಸ್ತೆಗಳು ಗಬ್ಬೆದ್ದು ನಾರುತ್ತಿವೆ ಹಾಗೂ ಸರಕಾರಿ ಆಸ್ಪತ್ರೆಯೂ ಕೂಡ ಈ ರಸ್ತೆಗಳ ಪಕ್ಕದಲ್ಲಿ ಇದೆ ಈ ರೀತಿ ಆದರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾಂಕ್ರಾಮಿಕ ರೋಗ ಮೆದುಳು ಜ್ವರ ಕಾಲರಾ ರೋಗ ಇನ್ನು ಹಲವಾರು ಭಯಾನಕ ರೋಗಗಳು ಅಂಟಿಕೊಳ್ಳುವುದು ಕಟ್ಟಿಟ್ಟ ಬುತ್ತಿ ಹಸಿ ಕಸ ಒಣ ಕಸ ವಿಲೇವಾರಿ ಗಾಡಿಯು ಯಾವತ್ತೂ ಗ್ರಾಮದಲ್ಲಿ ಬರುವುದಿಲ್ಲ ಹೀಗಾಗಿ ಜನರು ರಸ್ತೆಗಳಲ್ಲಿ ನಾಲೆಗಳಲ್ಲಿ ಕಸ ಪ್ಲಾಸ್ಟಿಕ್ ಇನ್ನು ಹಲವಾರು ತ್ಯಾಜ್ಯಗಳನ್ನು ರಸ್ತೆಯಲ್ಲಿ ಬಿಸಾಡುತ್ತಿದ್ದಾರೆ ಪಂಚಾಯಿತಿಯ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ಹಕ್ಕು ಹಾಕಿದರೆ ಇಲ್ಲಿನ ಪಿಡಿಓ ರವರು ಬೆದರಿಕೆ ಹಾಕುತ್ತಾರೆ ಗುಂಡಾಗಳನ್ನು ಮನೆಗಳಿಗೆ ಕೂಡ ಕಳಿಸುತ್ತಿದ್ದಾರೆಗ್ರಾಮಸ್ಥರು ಏನಾದರೂ ಮಾಹಿತಿ ಕೇಳುವುದಕ್ಕೆ ಗ್ರಾಮ ಪಂಚಾಯಿತಿಗೆ ಹೋದಾಗ ಪಿ ಡಿ ಓ ಸಾಹೇಬರು ಬೆದರಿಕೆ ಹಾಕುತ್ತಾರೆ ಅವರ ಹೇಳಿಕೆಯಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಂಜುನಾಥ್ ನಡೆದುಕೊಳ್ಳುತ್ತಾರೆ ಹೀಗಾದರೆ ಗ್ರಾಮಗಳ ಸ್ವಚ್ಛತೆ ಹೇಗೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ ಇದಕ್ಕೆ ಸಂಬಂಧಪಟ್ಟ ತಾಲೂಕಾಡಳಿತ ಪಿಡಿಓ ಮತ್ತು ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ಅಯ್ಯಪ್ಪ ನಾಯಕ ಮಲ್ಲದಗುಡ್ಡ ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ಕಾರ್ಯಕಾರಿ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *