ಚಂದನ ಫೌಂಡೇಶನ್ ವತಿಯಿಂದ ಬಸವರಾಜ ಅವರಿಗೆ ಸನ್ಮಾನ …

ಚಂದನ ಫೌಂಡೇಶನ್ ವತಿಯಿಂದ ಬಸವರಾಜ ಅವರಿಗೆ ಸನ್ಮಾನ …

ಇಳಕಲ್:ನಗರದ ಶ್ರೀ ನಾರಾಯಣ ಚಿತ್ರಮಂದಿರ ಹತ್ತಿರದಲ್ಲಿ ಫೆ.15 ರಮಹಾಶಿವರಾತ್ರಿ ದಿನದಂದು ಚಂದನ ಫೌಂಡೇಶನ್ ವತಿಯಿಂದ ಹಾಗೂ ಓಣಿಯ ಗುರು-ಹಿರಿಯರು ಸೇರಿ ಬಿಲ್ವಪತ್ರೆಸಸಿ ನೆಡುವುದರ ಮೂಲಕ ಶಿವರಾತ್ರಿ ಹಬ್ಬವನ್ನು ಆಚರಿಸಿದರು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ,ಮನೆಗೆ ಒಂದು ಮರ,ಊರಿಗೆ ಒಂದು ವಣ ಇದ್ದಾಗ ಮಾತ್ರ ಹಸಿರು ಗ್ರಾಮಗಳನ್ನು ನಿರ್ಮಿಸಲು ಸಾಧ್ಯ ಎಂದು ಇಳಕಲ್ ತಾಲೂಕಿನ ತುಂಬ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ,ಸಮಾಜ ಸೇವಕ ಬಸವರಾಜ ಜಾಲಿಹಾಳ ಅವರುಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಬಸವರಾಜ ಜಾಲಿಹಾಳ ಅವರಿಗೆ ಚಂದನ ಫೌಂಡೇಶನ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತುಇದೇ ಸಂದರ್ಭದಲ್ಲಿಮಹಾಂತೇಶ ತಿಮ್ಮಾಪುರ,ಮಲ್ಲಪ್ಪ ತಂಗಡಗಿ,ಹಿರಿಯಪತ್ರಕರ್ತರಾದ ವಿನೋದ ಬಾರಿಗಿಡ,ಚೇತನ ಬೋಮಸಾಗರ,ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣು ಪಾಟೀಲ,ಮುತೃಜಾ ಮಾರನಾಳ,ಅನೀಲ ತುಂಬಗಿ,ಪ್ರವೀಣ್ ಹೊಳಿ,ನಾಗರಾಜ ಕಿರಗಿ,ಸಂಗಪ್ಪ ತಾಳಿಕೋಟಿ,ಮಹಾಂತೇಶ ಯಲಬುರ್ತಿ,ಈರಣ್ಣ ಏಲಿಗಾರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *