ಮಧುಮೇಹ ನಿಯಂತ್ರಣ ಜಾಗೃತಿ ಸಂವಾದ ಕಾರ್ಯಕ್ರಮ ಯಶಸ್ವಿ…

ಮಧುಮೇಹ ನಿಯಂತ್ರಣ ಜಾಗೃತಿ ಸಂವಾದ ಕಾರ್ಯಕ್ರಮ ಯಶಸ್ವಿ..

ಮಧುಮೇಹ ಸಂವಾದ ಕಾರ್ಯಕ್ರಮ ಯಶಸ್ವಿ ;ಭಾರತೀಯ ವೈದ್ಯಕೀಯ ಸಂಘ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಮಧುಮೇಹ ತಪಾಸಣೆ ಹಾಗೂ ಖ್ಯಾತ ವೈದ್ಯರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಹುಬ್ಬಳ್ಳಿಯ ಡಾ.ಜಿ.ಬಿ.ಸತ್ತೂರ್ ಅವರೊಂದಿಗೆ ಸಂವಾದ ಕಾರ್ಯಕ್ರಮ IMA ಹಾಲ್ ನಲ್ಲಿ ಯಶಸ್ವಿಯಾಗಿ ನೆರವೇರಿತು.ಜಿಲ್ಲಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಸದಾನಂದ ನಾಯ್ಕ ಸರ್ ಕಾರ್ಯಕ್ರಮ ಉದ್ಘಾಟಿಸಿದರು.ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ಮಲ್ಲನಗೌಡ ಪಾಟೀಲ್ ಅವರು ಸ್ವಾಗತ ಕೋರಿದರು.ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಶಿವಕುಮಾರ್ ಮಾಲಿಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಂವಾದದಲ್ಲಿ ನಗರದ ಹಲವಾರು ಸಂಘಟನೆಗಳು ಭಾಗವಹಿಸಿದ್ದವು. ಮಧುಮೇಹ ರೋಗಿಗಳು ಡಾ.ಸತ್ತೂರ್ ಅವರಿಗೆ ಪ್ರಶ್ನೆಗಳನ್ನು ಕೇಳಿ ಸಲಹೆಗಳನ್ನು ಪಡೆದುಕೊಂಡರು.ಹಿರಿಯ ವೈದ್ಯರಾದ ಡಾ.ಚಂದ್ರಪ್ಪ , ಡಾ.ಸೋಮರಾಜು ,ಡಾ.ಮಲ್ಲನಗೌಡ,ಡಾ.ಮಧುಸೂದನ್ , ಡಾ. ಸತೀಶ್ ರಾಯ್ಕರ್, ಡಾ.ವಿಜಯಗೌಡರ್, ಡಾ.ಮಗದಾಳ್ , ಡಾ.ಸುನೀಲ್ ಅರಳಿ , ಹಿರಿಯ ವಕೀಲರಾದ ಸಿದ್ದನಗೌಡ , ವಕೀಲರ ಸಂಘ ಅಧ್ಯಕ್ಷರಾದ ಎಸ್. ಎನ್ ,ನಾಯಕ,ಲಯನ್ಸ್ ಕಾರ್ಯದರ್ಶಿ ಜಂಬಣ್ಣ ಐಲಿ, ಖಜಾಂಚಿ ಶಿವಪ್ಪ ಗಾಳಿ , ಶ್ರಮಜೀವಿ ಕಟ್ಟಡ ಕಾರ್ಮಿಕರ ಅಧ್ಯಕ್ಷರಾದ ಶಿವಕುಮಾರಗೌಡ ಹಾಗೂ ಅದರ ಸದಸ್ಯರು ,ಯೋಗ ಸಮಿತಿ, ರೋಟರಿ ಕ್ಲಬ್ ಪ್ರಮುಖರು, ಭಾರತೀಯ ವೈದ್ಯಕೀಯ ಸಂಘದ ಮಹಿಮಾ ಘಟಕದ ಅಧ್ಯಕ್ಷರಾದ ಡಾ.ಅನಿತಾ, ಡಾ.ಅಕ್ಷತಾ ಇತರರು ಭಾಗವಹಿಸಿದ್ದರು.ಡಾ.ನಾಗರಾಜ ಲೋಕರೆ ,ಮೈಲಾರಪ್ಪ ಬೂದಿಹಾಳ ನಿರೂಪಣೆ ಮಾಡಿದರು.ಡಾ.ಭಾನು ಪ್ರತಾಪ್ ವಂದನಾರ್ಪಣೆ ತಿಳಿಸಿದರು.ಅದಕ್ಕೂ ಮೊದಲು ಮುನ್ನೂರುಕ್ಕೂ ಹೆಚ್ಚು ಜನರಿಗೆ ರಕ್ತ ಆರೋಗ್ಯ ತಪಾಸಣೆ ನಡೆಸಲಾಯಿತು.

Leave a Reply

Your email address will not be published. Required fields are marked *