ವಿಶ್ವ ಕ್ಷೌರಿಕರ ದಿನದ ನಿಮಿತ್ತ ಉಚಿತ ಕ್ಷೌರ ಸೇವೆ…

ವಿಶ್ವ ಕ್ಷೌರಿಕರ ದಿನದ ನಿಮಿತ್ತ ಉಚಿತ ಕ್ಷೌರ ಸೇವೆ…

ಗಂಗಾವತಿ: ಪ್ರತಿಯೊಬ್ಬರ ವೃತ್ತಿ ಶ್ರೇಷ್ಟವಾದದ್ದು. ವಿಶ್ವಗುರು ಬಸವಣ್ಣನವರು ಹೇಳಿದಂತೆ ಕಾಯಕದಲ್ಲಿ ಕೈಲಾಸವನ್ನು ಕಾಣುವ ಪ್ರತಿಯೊಬ್ಬರಲ್ಲಿಯೂ ದೇವರಿದ್ದಾನೆ ಎಂದು ಕ್ಯೂಟ್ ಮ್ಯಾನ್ ಸಲೂನ್ ಮಾಲೀಕರು ವಿಶ್ವನಾಥ್ G, ಹೇಳಿದರು.ಅವರು ವಿಶ್ವ ಕ್ಷೌರಿಕರ ದಿನದ ಅಂಗವಾಗಿ ನವ ಜೀವನ ರುದ್ರ ಆಶ್ರಮ ಮತ್ತು ಭಿಕ್ಷುಕರಿಗೆ ಉಚಿತ ಉಪಹಾರ ಹಾಗೂ ಉಚಿತ ಕ್ಷೌರ ಸೇವೆಗೆ ಚಾಲನೆ ನೀಡಿ ಮಾತನಾಡಿದರು ಮಾನವ ಇತಿಹಾಸದಲ್ಲಿ ಕ್ಷೌರಿಕ ವೃತ್ತಿಯ ಪ್ರಾರಂಭ ಬಹಳ ಹಳೆಯದು. ಪ್ರಾಚೀನ ಮನುಷ್ಯನು ಅನಗತ್ಯ ಕೂದಲು ಮತ್ತು ಉಗುರುಗಳನ್ನು ತೊಲಗಿಸಲು ಸ್ವತಃ ಅಥವಾ ಇತರರ ಸಹಾಯದಿಂದ ಕೂದಲನ್ನು ಕತ್ತರಿಸುತ್ತಿದ್ದನು. ಪ್ರಾಚೀನ ಶಿಲ್ಪಗಳು, ಭಿತ್ತಿಚಿತ್ರಗಳು ಮತ್ತು ಪುರಾತನ ಲಿಪಿಗಳಲ್ಲಿ ಒಬ್ಬನು ಮತ್ತೊಬ್ಬರ ಕೂದಲು ಕತ್ತರಿಸುವ ದೃಶ್ಯಗಳು ದೊರಕುತ್ತವೆ. ಸಂಶೋಧನೆಗಳ ಪ್ರಕಾರ ಕ್ಷೌರಿಕ ವೃತ್ತಿಯ ಇತಿಹಾಸವು ಕನಿಷ್ಠ ಕ್ರಿ.ಪೂ. 6000 ವರ್ಷಗಳ ಹಿಂದಿನಿಂದಲೇ ಅಸ್ತಿತ್ವದಲ್ಲಿದೆ. ಕ್ರಿ.ಪೂ.5000ರಲ್ಲಿ ಅವರು ಚಿಪ್ಪು, ಹರಿತವಾದ ಕಲ್ಲು, ಕ್ರೂರ ಪ್ರಾಣಿಗಳ ಉಗುರುಗಳು ಹಾಗೂ ಶಾರ್ಕ್ ಮೀನಿನ ಹಲ್ಲುಗಳನ್ನು ಬಳಸಿಕೊಂಡು ಕೂದಲು ಕತ್ತರಿಸುತ್ತಿದ್ದರು.ವಿಶೇಷ ಕತ್ತರಿ ಮತ್ತು ಬಾಚಣಿಗಳ ಬಳಕೆಯ ಪ್ರಾಮಾಣಿಕ ದಾಖಲೆಗಳು ಸುಮಾರು 7000 ವರ್ಷಗಳ ಹಿಂದೆಯೇ ದೊರೆತಿವೆ ಎಂದರು. ಈ ಸಂದರ್ಭದಲ್ಲಿ ಓಬಳೇಶ್ H,ಶಶಿಕುಮಾರ್ H,ಆನಂದ್,ಸಾಯಿ ಚರಣ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *