ಹಂಪಿ ಉತ್ಸವದಲ್ಲಿ ಗಮನ ಸೆಳೆದ ಬಾದಾಮಿಯ ಕೈನಕಟ್ಟಿಯ ಸೋಮಲಿಂಗೇಶ್ವರ ಕಲಾ ಮತ್ತು ಭಜನಾ ತಂಡ…

ಸೋಮಲಿಂಗೇಶ್ವರ ಕಲಾ ಮತ್ತು ಬಜನಾ ತಂಡ ಸಾಕಿನ್ ಕೈನ ಕಟ್ಟಿ ತಾಲೂಕು ಬದಾಮಿ ಜಿಲ್ಲಾ ಬಾಗಲಕೋಟೆ ಇವರು 2026ರ ಹಂಪಿ ಉತ್ಸವದಲ್ಲಿ ಶ್ರೀ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಭಜನೆಯನ್ನು ಪ್ರಸ್ತುತಪಡಿಸಿ ಎಲ್ಲರ ಗಮನ ಸೆಳೆದರು ಈ ತಂಡವು ಆಕಾಶವಾಣಿ ಧಾರವಾಡ ಕೇಂದ್ರ ಮೈಸೂರು ದಸರಾ ಚಂದನ ವಾಹಿನಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ರನ್ನ ಉತ್ಸವ ಚಾಲುಕ್ಯ ಉತ್ಸವ ಹಾಗೂ ಕರ್ನಾಟಕದ ಇನ್ನಿತರ ಕಡೆಗಳಲ್ಲಿ ಭಜನೆಯನ್ನ ಪ್ರಸ್ತುತಪಡಿಸಿ ಉತ್ತಮ ತಂಡವೆನಿಸಿದೆ ಈ ವರ್ಷದ ದೇವಸ್ಥಾನದಲ್ಲಿ ಸಹ ಈ ತಂಡವು ಭಜನೆಯನ್ನ ಪ್ರಸ್ತುತಪಡಿಸಿ ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದೆ ಈ ಭಜನಾi ತಂಡದಲ್ಲಿ ಮುಖ್ಯ ಹಾಡುಗಾರರು ಶ್ರೀ ಪಾಂಡುರಂಗ ಹನುಮಪ್ಪ ತಳವಾರ್ ಶ್ರೀ ಸೋಮಪ್ಪ ಬಸಪ್ಪ ಹಮನಿ ಕರಿಯಪ್ಪ ಗಂಗುಡಿ ಗೌಡಪ್ಪ ಕುಂದರಗಿ ಬಸಪ್ಪ ಹಳ್ಳಿ ಮಟ್ಟಿ ಭೀಮಪ್ಪ ದಾಸರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

