ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದ ಭಾಗ್ಯನಗರದಲ್ಲಿ ನವಜಾತ ಶಿಶುವನ್ನು ನಾಯಿಗಳು ಎಳೆದುಕೊಂಡು ಬಂದಿರುವ ಘಟನೆ ಜರುಗಿದೆ….

ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದ ಭಾಗ್ಯನಗರದಲ್ಲಿ ಫೆಬ್ರವರಿ 16ರಂದು ಮಧ್ಯಾಹ್ನ 3:00ಯ ಸುಮಾರಿಗೆ ನವಜಾತ ಶಿಶುವನ್ನು ನಾಯಿಗಳು ಎಳೆದುಕೊಂಡು ಬಂದಿರುವಂತಹ ಘಟನೆ ಜರುಗಿದೆ. ಸ್ಥಳೀಯರು ಮಗುವನ್ನು ನೋಡಿ ನಾಯಿಯನ್ನು ಓಡಿಸಿದ್ದಾರೆ ನಂತರ ಸ್ಥಳೀಯ ಪೊಲೀಸ್ ವನ್ ವನ್ ಟು ಗೆ ಕರೆ ಮಾಡಿ ಮಾಹಿತಿ ತಿಳಿಸಿದರು ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ನವಜಾತ ಶಿಶು ಗಂಡು ಮಗು ಎಂದು ತಿಳಿದುಬಂದಿದ್ದು ಪೊಲೀಸ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
