ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಿಧನ: ಕೆ.ಎಂ.ಶರಣಯ್ಯಸ್ವಾಮಿ ಸಂತಾಪ…

ಗಂಗಾವತಿ :15 ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ(114)ಅವರು ಬೆಂಗಳೂರಿನ ಜಯನಗರ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.ವೃಕ್ಷ ಮಾತೆ ನಿಧನಕ್ಕೆ ಪರಿಸರ ಪ್ರೇಮಿ, ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು, ಡಾ.ವಿ.ಎಸ್.ವಿಷ್ಣು ಸೇನಾ ಸಂಘಟನೆ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಶರಣಯ್ಯಸ್ವಾಮಿ ಅವರು ಮತ್ತು ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಳಗ ಸಂತಾಪ ಸೂಚಿಸಿದರು.ಕನ್ನಡ ನಾಡಿನ ಹೆಮ್ಮೆಯ ಸಾಧಕಿ ಪದ್ಮ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನರಾಗಿದ್ದಾರೆ.ನವೆಂಬರ್ 2ರಿಂದ ಜಯನಗರ ಅಪೊಲೋ ಆಸ್ಪತ್ರೆಯಲ್ಲಿ ತಿಮ್ಮಕ್ಕ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಾಲುಮರದ ತಿಮ್ಮಕ್ಕ ಅವರಿಗೆ 114 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.ಇವರನಿಧನದಿಂದ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಳಗ ಅತೀವ ದುಃಖ ನೋವುಂಟಾಗಿದೆ.ತಿಮ್ಮಕ್ಕ ಅವರ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸುವ ಮೇಲಿನ ಆಸಕ್ತಿ. ಅವರ ಹೊರಟಗಳು, ಮತ್ತು ಆದರ್ಶಗಳು ವನಸಿರಿ ತಂಡಕ್ಕೆ ಮಾರ್ಗದರ್ಶನಗಳಾಗಿದ್ದವು. ಅವರ ಅಗಲಿಕೆಗೆ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಳಗದಿಂದ ಸಂತಾಪ ಸುಚಿಸುತ್ತದೆ ಎಂದರು.

