ಆಶ್ರಯ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಗಾ ಪಿಟಿಎಂ ಪೋಷಕರ – ಶಿಕ್ಷಕರ ಸಭೆ – ಮಕ್ಕಳಿಗೆ ರೋಟರಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಸಾಮಾಗ್ರಿ ವಿತರಣೆ…

ಆಶ್ರಯ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಗಾ ಪಿಟಿಎಂ ಪೋಷಕರ – ಶಿಕ್ಷಕರ ಸಭೆ – ಮಕ್ಕಳಿಗೆ ರೋಟರಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಸಾಮಾಗ್ರಿ ವಿತರಣೆ…

ದೇಶದ ಪ್ರಪ್ರಥಮ ಪ್ರಧಾನಿ ಜವಹಾರಲಾಲ ನೆಹರುರವರ ಜನ್ಮದಿನವನ್ನು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.ಮಕ್ಕಳ ಮನಸ್ಸು ಮಲ್ಲಿಗೆ ಮೃದು, ಪಾರಿಜಾತದಂತೆ ಕೋಮಲ ಅಂತ ಮಕ್ಕಳ ಮನಸ್ಸಿನ ಮೇಲೆ ಮಹಾ ವ್ಯಕ್ತಿಗಳ ಪ್ರಭಾವ ಬೀರುವ ದೃಷ್ಟಿಯಿಂದ ದೇಶದ ಅನೇಕ ಆಗ್ರಗಣ್ಯ ನಾಯಕರ, ಸ್ವಾತಂತ್ರ ಹೋರಾಟಗಾರರ, ದೇಶ ಪ್ರೇಮಿಗಳ ಹೆಸರಿನಿಂದ ಜನ್ಮದಿನವನ್ನು ಆಚರಿಸಲಾಗುತ್ತದೆ ಎಂದು ಗಂಗಾವತಿ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಟಿ. ಆಂಜನೇಯ ರವರು ಇಂದು ಕನಕಗಿರಿ ರಸ್ತೆಯ ಶರಣಬಸವೇಶ್ವರ ಕ್ಯಾಂಪ್ ನ ಆಶ್ರಯ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಸರಕಾರ ಈ ವರ್ಷ ಮೆಗಾ ಪಿಟಿಎಂ ಪೋಷಕರ – ಶಿಕ್ಷಕರ ಮಹಾಸಭೆ ಪ್ರತಿ ಶಾಲಾ ಅವರಣದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ,ಪೋಷಕರು, ಮತ್ತು ಶಿಕ್ಷಣ ಪ್ರೇಮಿಗಳ, ಸಮುದಾಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮಕ್ಕಳ ಕಲಿಯುವಿಕೆ, ಮಕ್ಕಳ ಶಾಲಾ ಶಿಕ್ಷಣದಲ್ಲಿ ಪ್ರಗತಿ, ಕೌಶಲ್ಯತೆ, ಅನೇಕ ವಿಷಯಗಳ ಕಾರ್ಯಕ್ರಮ ಮತ್ತು ಶಿಕ್ಷಕರ ಪೋಷಕರ ನಡುವೆ ವಿದ್ಯಾರ್ಥಿಗಳ ಬಗ್ಗೆ ಚರ್ಚೆ, ಸಂವಾದ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಭವ್ಯ ಭಾರತದ ಶಿಲ್ಪಿಗಳು, ದೇಶದ ಸಂಸ್ಕೃತಿ, ಸಂಸ್ಕಾರ, ಹಾಗೂ ದೇಶಾಭಿಮಾನ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು* *ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರು ಶಿಕ್ಷಣ ಪ್ರೇಮಿಗಳಾದ ದುರ್ಗೇಶಪ್ಪ ದೊಡ್ಡಮನಿ ರವರು ತಮ್ಮ ಏರಿಯಾದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಶ್ರಯ ಕಾಲೋನಿಯ ಮಕ್ಕಳಿಗೆ ಸರಕಾರಿ ಶಾಲೆ ತುಂಬಾ ಆಶ್ರಯವಾಗಿದೆ. ಮಕ್ಕಳ ಪ್ರಗತಿಗೆ ಚಿಂತಿಸುವ, ಉತ್ತೇಜಿಸುವ, ಮತ್ತು ಪೋಷಕರ ನಡುವೆ ಮಕ್ಕಳ ಪ್ರಗತಿ ವಿಚಾರ ವಿನಿಮಯ, ಅಭಿವೃದ್ಧಿ ಬಗ್ಗೆ ವಿಚಾರಿಸಿ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು**ಈ ಸಂದರ್ಭದಲ್ಲಿ ಗಂಗಾವತಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಅಂಗಡಿಯವರು ರೋಟರಿ ಸಂಸ್ಥೆ 120 ವರ್ಷಗಳ ಇತಿಹಾಸ ಹೊಂದಿದ್ದು ಮುಖ್ಯವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ, ಮತ್ತು ಇತ್ತೀಚಿಗೆ ಟೀಚ್ ಶಿಕ್ಷಣ, ಶೈಕ್ಷಣಿಕ ಪ್ರಗತಿ ಹಲವು ಕಾರ್ಯಕ್ರಮಗಳು, ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಮತ್ತು ಅನೇಕ ರೀತಿಯ ಸ್ಕಾಲರ್ಶಿಪ್ ಗಳು, ವಿದ್ಯಾಭ್ಯಾಸಕ್ಕೆ ಸಹಾಯ ಸಹಕಾರವನ್ನು ನಮ್ಮ ಗಂಗಾವತಿ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದು ತಿಳಿಸಿದರು* *ರೋಟರಿ ಪದಾಧಿಕಾರಿಗಳಾದ ಡಾ.ಶ್ರೀಕಾಂತ.ಬಿ. ರವರು ಮಕ್ಕಳು ವಿದ್ಯಾಭ್ಯಾಸ ಜೊತೆಗೆ ಆಟೋಟ, ಆರೋಗ್ಯ, ಸಂಸ್ಕಾರ ಗುರುಹಿರಿಯರ ಭಾವನೆಗೆ ತಕ್ಕಂತೆ ವಿದ್ಯಾರ್ಜನೆ ಮಾಡಲು ತಿಳಿಸಿದರು**ಶಾಲಾ ಮುಖ್ಯೋಪಾಧ್ಯಾಯರಾದ ಸಚ್ಚಿದನಾಂದರವರು ಪ್ರಸ್ತಾವಿಕವಾಗಿ ಮಾತನಾಡಿ ರಾಜ್ಯ ಸರಕಾರದ ಆದೇಶದ ಅನ್ವಯ ಪೋಷಕರ – ಶಿಕ್ಷಕರ ಮತ್ತು ಶಿಕ್ಷಣ ಪ್ರೇಮಿಗಳ ಮತ್ತು ಸಮುದಾಯ ಜನಪ್ರತಿನಿಧಿಗಳ ಒಳಗೊಂಡ ಮಹಾಸಭೆಯನ್ನು ಕೈಗೊಳ್ಳಲು ತಿಳಿಸಿದ್ದು ಇಂದು ನಮ್ಮ ಸಂಸ್ಥೆಗೆ ಆಶ್ರಯ ಕಾಲೋನಿಯ ಪೋಷಕರು, ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು ಮತ್ತು ಅಂತರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆ ರೋಟರಿ ಯವರು ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಅನೇಕ ಸಲಹೆ ಸೂಚನೆಗಳನ್ನು ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು* *ಪ್ರಾರಂಭದಲ್ಲಿ ಶ್ರೀಮತಿ ವಿನೋದ ರವರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಶಾಲಾ ಸಹ ಶಿಕ್ಷಕಿಯರಾದ ಎಚ್. ನಾಗರತ್ನ ನಿರುಪಿಸಿದರು* *ಈ ಮಕ್ಕಳ ದಿನಾಚರಣೆ ಅಂಗವಾಗಿ ಗಂಗಾವತಿ ರೋಟರಿ ಸಂಸ್ಥೆಯವರು ಸುಮಾರು 35 ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ, ಶಾಲಾ ಶೈಕ್ಷಣಿಕ ಸಾಮಗ್ರಿಗಳು, ಮತ್ತು ಇನ್ನಿತರ ವಿದ್ಯಾರ್ಥಿಗಳಿಗೆ ಪ್ರೋತ್ಸಾದಾಯಕ ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು* *ಈ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿಗಳಾದ ಬಸವರಾಜ ಕುಂಬಾರ, ಸದಸ್ಯರಾದ ಡಾ. ಶ್ರೀಕಾಂತ್.ಬಿ. ಎಸ್. ಟಿ. ರಾಮಕೃಷ್ಣ, ರಾಜೇಶ್ ಚಿನಿವಾರ, ಬಿ.ಸತೀಶ ಕುಮಾರ ಅಲ್ಲದೆ ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಮೆಹಬೂಬ ಪಾಷಾ,ಉಪಾಧ್ಯಕ್ಷರಾದ ಶ್ರೀಮತಿ ನಾಗರತ್ನ,ಮತ್ತು ಕಾಲೋನಿಯ ಶಿಕ್ಷಣ ಪ್ರೇಮಿಗಳಾದ ಶ್ರೀ.ದುರ್ಗೆಶಪ್ಪ ದೊಡ್ಡಮನಿ,ಮಾರುತೆಪ್ಪ ,ಹನುಮಸಿಂಗಇನ್ನಿತರರು ಉಪಸ್ಥಿತರಿದ್ದರು**ಶಾಲಾ ಸಹ ಶಿಕ್ಷಕಿಯರಾದ ಶ್ರೀಮತಿ ವಿನೋದ, ಅಡುಗೆ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರು,ಮತ್ತು ಕಾಲೋನಿಯ ಮಾತೆಯರು ಇನ್ನಿತರ ಯುವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *