ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಸೂತಿ ತಜ್ಞರನ್ನು ಖಾಯಂ ಮತ್ತು ಅಸ್ಫತ್ರೆಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಡಾ.ಪೂರ್ಣಿಮ ಮನವಿ ಪತ್ರ ಸಲ್ಲಿಕೆ…

ಬಳ್ಳಾರಿ / ಕಂಪ್ಲಿ : ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರಕ್ಕೆ ಪ್ರಸೂತಿ ತಜ್ಞ ವೈದ್ಯರನ್ನು ಖಾಯಂ ಗೊಳಿಸಿ ಮತ್ತು ಅಗತ್ಯ ಸಲಕರಣೆಗಳನ್ನು ನಿಯೋಜನೆ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಬೆಂಬಲಿತ ಸಂಘಟನೆಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ನೋಡಲ್ ಅಧಿಕಾರಿ ಡಾ.ಪೂರ್ಣಿಮ ಮನವಿ ಪತ್ರ ಸಲ್ಲಿಸಿದರು. ನಂತರ ಕೆ.ಎಂ.ಆರ್ ವಿ.ರಾಜಾಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ ಅನುಭವಿ ತಜ್ಞ ವೈದ್ಯರನ್ನು ಖಾಯಂ ನಿಯೋಜಿಸಿ ಮತ್ತು ಅಗತ್ಯವಿರುವ ಮೂಲಭೂತ ಸೌಲಭ್ಯ ಒದಗಿಸಿ ಗರ್ಭಿಣಿಯರ ಹೆರಿಗೆಗೆ ಬಂದಾಗ ಸಮರ್ಪಕ ಚಿಕಿತ್ಸೆ ನೀಡಿ ಸಿಸೇರಿಯನ್ ಹೆರಿಗೆಯನ್ನು ಚಿಕ್ಕೆತ್ಸೆ ನಿರ್ವಾಹಿಸಿ ಹೆಚ್ಚಿನ ಚಿಕ್ಕಿತ್ಸೆಗಾಗಿ 108 ವಾಹನದಲ್ಲಿ ಬೇರೆ ಅಸ್ಫತ್ರೆಗೆ ಕಳುಹಿಸಿ ಅಸ್ಫತ್ರೆಯಲ್ಲಿ ಅಲ್ಟಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಹಾಳಾಗಿದೆ ಅದನ್ನು ಅನುಸ್ಥಾಪಿಸಿ ನುರಿತ ತಂತ್ರಜ್ಞರನ್ನು ನೇಮಿಸಿ ಸಾರ್ವಜನಿಕರು ಅಸ್ಫತ್ರೆಗೆ ಚಿಕ್ಕಿತ್ಸೆಗೆ ಬಂದಾಗ ಔಷದಗಳನ್ನು ಖಾಸಗಿ ಅಂಗಡಿಗಳಿಗೆ ಬರೆಯಬಾರದು ಅಸ್ಫತ್ರೆಯಲ್ಲಿರುವ ಔಷದಗಳನ್ನು ನೀಡಿ ಸ್ವಚ್ಚತೆಗೆ ಅಧ್ಯತೆ ನೀಡಿ ತಾಲೂಕು ಅಸ್ಫತ್ರೆಯನ್ನು ಸಾರ್ವಜನಿಕರ ಸೇವೆಗೆ ಸಜ್ಜು ಗೊಳಿಸಬೇಕು ಖಾಲಿ ಇರುವ ವೈದ್ಯರನ್ನು ಹಾಗೂ ಸಿಬ್ಬಂದಿ ಯನ್ನು ನೇಮಿಸಬೇಕೆಂದು ಘೋಷಣೆ ಕೊಗುತ್ತ ಧರಣಿ ಸತ್ಯಾಗ್ರಹದೊಂದಿಗೆ ಮೂಟಕಗೊಳಿಸಿದರು. ಈ ಸಂದರ್ಭದಲ್ಲಿ ಬೆಂಬಲಿತ ಸಂಘಟನೆಗಳಾದ ಟಿ.ಯು.ಸಿ.ಸಿ.ಮುಖಂಡ ಲಕ್ಷ್ಮಣ, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ವಂಸತರಾಜ ಕಹಳೆ, ಬೆಂಬಲಿತ ಸಂಘಟಿತರಾದ ಎಂ.ರವಿ ಕೆ.ದುರುಗೇಶ, ಮಂಗಳಮುಖಿ ರಾಜಮ್ಮ, ಸಣಾಪುರ ಮರಿಸ್ವಾಮಿ, ಸಿ.ಬಸವರಾಜ, ಪೆಂಟರ್ ನೀಲಪ್ಪ, ಬಿ. ಸಣ್ಣೆಪ್ಪ, ಹೆಚ್. ಬಸಪ್ಪ, ಪುರಷೋತ್ತಮ, ಸಿ.ಹುಸೇನಪ್ಪ, ಎನ್. ರಾಜಭಕ್ಷಿ ಸೇರಿ ಅನೇಕ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.ವರದಿ : ಜಿಲಾನಸಾಬ್ ಬಡಿಗೇರ್
