ಶ್ರೀರಾಮನಗರ ವಾಸವಿ ದೇವಸ್ಥಾನದ ಲಕ್ಷ್ಮೀ ದೇವಿಗೆ 3.ಲಕ್ಷ ರೂ. ನೋಟಿನ ಅಲಂಕಾರ..

ಶ್ರೀರಾಮನಗರ ವಾಸವಿ ದೇವಸ್ಥಾನದ ಲಕ್ಷ್ಮೀ ದೇವಿಗೆ 3.ಲಕ್ಷ ರೂ. ನೋಟಿನ ಅಲಂಕಾರ..

ಶ್ರೀರಾಮನಗರ ವಾಸವಿ ದೇವಸ್ಥಾನದ ಲಕ್ಷ್ಮೀ ದೇವಿಗೆ 3.ಲಕ್ಷ ರೂ. ನೋಟಿನ ಅಲಂಕಾರ. ಶ್ರೀರಾಮನಗರ: ಇಲ್ಲಿನ ವಾಸವಿ ದೇವಸ್ಥಾನದ ಲಕ್ಷ್ಮೀ ದೇವಿಗೆ 4ನೇ ಶ್ರಾವಣ ಶುಕ್ರವಾರದ ಪ್ರಯುಕ್ತ 3ಲಕ್ಷ ರೂ. ಮೌಲ್ಯದ ವಿವಿಧ ನೋಟು ಹಾಗೂ ನಾಣ್ಯಗಳಿಂದ ಅಲಂಕಾರ ಮಾಡಲಾಗಿದೆ. ದೇವಸ್ಥಾನ ಅರ್ಚಕರು ಹಾಗೂ ಸಮಿತಿಯ ಎಲ್ಲಾ ಸದಸ್ಯರು ಸೇರಿ ಗುರುವಾರದಿಂದಲ್ಲೇ (ಆ.14) ಲಕ್ಷ್ಮೀ ದೇವಿಗೆ 5, 10, 20,50,100,200, 500 ರೂ. ನೋಟು ಹಾಗೂ ನಾಣ್ಯಗಳಿಂದ ಅಲಂಕಾರ ಮಾಡಿ ಭಕ್ತರ ಗಮನ ಸೆಳೆದಿದ್ದಾರೆ.ಈಗಾಗಲೇ ಗ್ರಾಮವು ಸೇರಿ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ಲಕ್ಷ್ಮೀ ಅಮ್ಮನವರಿಗೆ ದರ್ಶನ ಪಡೆದು ಪುನೀತರಾಗಿದ್ದಾರೆ.ಬಂದ ಭಕ್ತರಿಗೆ ಪೂಜಾ ಕಾರ್ಯ ನೆರವೇರಿಸಿ ಮಂಗಳಾರತಿ ತೀರ್ಥ ಪ್ರಸಾದ ವಿತರಿಸಲಾಗುತ್ತಿದೆ.

ಗ್ರಾಮದ ಭಕ್ತರಿಂದ ಹಣವನ್ನು ಸಂಗ್ರಹಿಸಿ ಅಲಂಕಾರ ಮಾಡಲಾಗಿದೆ. ಇನ್ನು ಮೂರು ದಿನಗಳವರಗೆ ಮಾತ್ರ ಅಲಂಕಾರ ವಿರುತ್ತದೆ. ಪುನಃ ಹಣ ಭಕ್ತರಿಗೆ ಹಿಂದಿರುಗಿಸಲಾಗುವುದು. ಈ ರೀತಿ ಲಕ್ಷ್ಮೀ ದೇವಿಗೆ ಅಲಂಕಾರಕ್ಕೆ ಹೊಂದಿಸಿದ ಹಣ ಮನೆಯಲ್ಲಿದ್ದರೆ ಒಳಿತು ಎಂಬ ನಂಬಿಕೆ ಇದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್.ನಾಗಮೋಹನ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *