ಪತ್ರಿಕಾ ಭವನದಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶ್ರೀನಿವಾಸ ಮತ್ತು ಹರೀಶಗೆ ಸನ್ಮಾನ….

ಪತ್ರಿಕಾ ಭವನದಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶ್ರೀನಿವಾಸ ಮತ್ತು ಹರೀಶಗೆ ಸನ್ಮಾನ….

ಗಂಗಾವತಿ:-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ನಡೆದ ಸ್ವಾತಂತ್ರೋತ್ಸವದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಅತ್ಯುತ್ತಮ ಪ್ರಶಸ್ತಿ ಪಡೆದಿರುವ ಪ್ರಜಾಪರ್ವ ಪತ್ರಿಕ ಸಂಪಾದಕ ಶ್ರೀನಿವಾಸ ಎಂ.ಜೆ. ಮತ್ತು ಸಮರ್ಥವಾಣಿ ಪತ್ರಿಕೆ ಉಪ ಸಂಪಾದಕ ಹರೀಶ ಕುಲಕರ್ಣಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಶುಕ್ರವಾರ ನಗರದ ತಾಪಂ ಆವಣರದ ಪತ್ರಿಕಾ ಭವನದಲ್ಲಿ ಕಾನಿಪ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಇಂಗಳಗಿ ರಾಷ್ಟ್ರಧ್ವಜಾರೋಹಣ ಮಾಡಿ ನಂತರ ಎಲ್ಲಾ ಪತ್ರಕರ್ತ ಸದಸ್ಯರ ಸಮ್ಮುಖದಲ್ಲಿ ಇರ್ವರು ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನಿಸಿ ಮಾತನಾಡಿ, ಗಂಗಾವತಿ ತಾಲೂಕಿನ ಕಾನಿಪ ಸಂಘದ ತಾಲೂಕು ಉಪಾಧ್ಯಕ್ಷ ಹಾಗೂ ಸಮರ್ಥವಾಣಿ ಪತ್ರಿಕೆ ಉಪ ಸಂಪಾದಕ ಹರೀಶ ಕುಲಕರ್ಣಿ ಹಾಗೂ ಹಿರಿಯ ಸದಸ್ಯ ಹಾಗೂ ಪ್ರಜಾಪರ್ವ ಪತ್ರಿಕೆ ಸಂಪಾದಕ ಶ್ರೀನಿವಾಸ ಎಂ.ಜೆ ಅವರು ನಮ್ಮ ಕಾನಿಪ ಸಂಘಟನೆಯಲ್ಲಿ ಸಕ್ರೀಯರಾಗಿದ್ದಾರೆ. ಮತ್ತು ವೃತ್ತಿಯಲ್ಲಿ ಅವರು ಅತ್ಯಂತ ಪ್ರಭಾವಿಯಾಗಿ ಕಾರ್ಯ ನಿರ್ವಹಿಸಿ ಸಮಾಜದ ಗೌರವವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ ನಮ್ಮ ಕಾನಿಪ ಸಂಘದ ಜಿಲ್ಲಾ ಘಟಕ ಇತ್ತೀಚಿಗೆ ಅವರಿಗೆ ದತ್ತಿ ನಿಧಿ ಮತ್ತು ಕೆಯುಡಬ್ಲುಜೆ ಜಿಲ್ಲಾ ಉತ್ತಮ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗಾಗಿ ಇಂದು ನಮ್ಮ ಭವನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರನ್ನು ನಮ್ಮ ತಾಲೂಕು ಘಟಕದಿಂದ ಸನ್ಮಾನಿಸಿ ಗೌರವಿಸಿದ್ದೇವೆ. ಅವರಿಗೆ ಇನ್ನು ಹೆಚ್ಚಿನ ಪ್ರಶಸ್ತಿಗಳು ಲಭಿಸಲಿ ಮತ್ತು ಅವರು ಪತ್ರಿಕೋಧ್ಯಮದಲ್ಲಿ ಹೆಚ್ಚು ಕ್ರೀಯಾಶೀಲರಾಗಿ ಕೆಲಸ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವಿಶ್ವನಾಥ ಬೆಳಗಲ್‌ಮಠ, ಪ್ರಸನ್ನ ದೇಸಾಯಿ, ಚಂದ್ರು ಮುಕ್ಕುಂದಿ, ಶಿವಪ್ಪ ನಾಯಕ ಸಂಘದ ತಾಲೂಕು ಉಪಾಧ್ಯಕ್ಷ ಕೃಷ್ಣ ನಾಯಕ, ಖಜಾಂಚಿ ಮಂಜುನಾಥ ಹೊಸಕೇರಿ, ಸಹ ಕಾರ್ಯದರ್ಶಿ ವಸಂತ ಸದಸ್ಯರಾದ ಮಲ್ಲಿಕಾರ್ಜುನ ಗೋಟೂರು, ಸುದರ್ಶನ ವೈದ್ಯ, ವೆಂಕಟೇಶ ಹೊಸಳ್ಳಿ, ಶರಣಯ್ಯಸ್ವಾಮಿ, ಮಂಜುನಾಥ ಗುಡ್ಲಾನೂರು, ಹನುಮೇಶ ಭಟಾರಿ, ಟಿ.ಅಕ್ಷಯ್, ವೆಂಕಟೇಶ ಮಾಂತಾ, ಚನ್ನಬಸ ಕೊಟಗಿ ಮತ್ತಿತರು ಇದ್ದರು.೧೫ ಜಿವಿಟಿ ಫೋಟೋ- ೩ (ಪತ್ರಿಕಾ ಭವನದಲ್ಲಿ ನಡೆದ ಸ್ವತಂತ್ರೋತ್ಸವ ಸಮಾರಂಭದಲ್ಲಿ ಇಬ್ಬರು ಪತ್ರಕರ್ತರಿಗೆ ಸನ್ಮಾನಿಸಿರುವುದು
.

Leave a Reply

Your email address will not be published. Required fields are marked *