ಬೀದಿ ನಾಟಕಗಳಿಂದ ರಂಗಭೂಮಿ ಜೀವಂತಿಕೆಗೆ ಸಿ ಜಿ ಕೆ ಕೊಡುಗೆ ಅನನ್ಯ… ಕೆವಿ ನಾಗರಾಜ್ ಮೂರ್ತಿ ಹೇಳಿಕೆ..

ಕೊಪ್ಪಳ.. ಅಂಗವಿಕಲರಾಗಿ. ಪ್ರಾಧ್ಯಾಪಕರಾಗಿ. ಶೋಷಿತ ಜನಾಂಗದ ಧ್ವನಿಯಾಗಿ. ಬೀದಿ ನಾಟಕ ಗಳಿಂದ ಪ್ರಸ್ತುತ ರಂಗಭೂಮಿ ಜೀವಂತ ವಾಗಿರಲು. ಸಿ ಜಿ ಕೆ. ಕೊಡುಗೆ ಅನನ್ಯವಾಗಿದೆ ಎಂದು. ನಾಟಕ ಅಕಾಡೆಮಿ ಅಧ್ಯಕ್ಷ ಕೆ ವಿ ನಾಗರಾಜ್ ಮೂರ್ತಿ ಹೇಳಿದರು . ಅವರು ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಈ ಜಿಕೆ ಬೀದಿರಂಗ ದಿನಾಚರಣೆ ಮತ್ತು ರಂಗ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಂಕುಡೊಂಕುಗಳನ್ನು ಬೀದಿ ನಾಟಕಗಳ ಮೂಲಕ ಸರ್ಕಾರ ಗಮನ ಸೆಳೆಯುವ ಅವರ ರಂಗ ಚಟುವಟಿಕೆಗೆ. ಅಮೂಲ್ಯ ವಾಗಿದೆ. ಪ್ರೊಫೆಸರ್ ಕೃಷ್ಣಪ್ಪ ಅವರ ಆತ್ಮೀಯರಾಗಿದ್ದ ಸಿಜಿಕೆ ಅವರು ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಲು ಅತ್ಯಂತ ಪ್ರಮುಖರಾಗಿದ್ದರು. ಎಂದು ಅವರ ಜೀವನ ನಡೆದು ಬಂದ ದಾರಿ ಸ್ಮರಿಸಿದರು. ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಿಕೆ ರವಿ ಅಧ್ಯಕ್ಷತೆ ವಹಿಸಿ ಮಾತನಾಡಿ. ಜೀವಂತಿಕೆಯನ್ನು ಹೊಂದಿದ ರಂಗಕಲೆಯಲ್ಲಿ ಉಳಿಸಿ ಬೆಳೆಸುವ ಕಾರ್ಯ ಹೆಚ್ಚು ಆಗಬೇಕು. ನಮ್ಮ ನಾಡು ನುಡಿ ಜನಪದ ಸಾಹಿತ್ಯ ವೈವಿಧ್ಯಮಯ ಕಲೆ ವಿದ್ಯಾರ್ಥಿಗಳು ಹಾಗೂ ಯುವಕರು ತಮ್ಮ ಜೀವನದ ಉದ್ದಕ್ಕೂ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು… ಸಿ ಜಿ ಕೆ. ರಂಗ ಪ್ರಶಸ್ತಿಯನ್ನು ಪಡೆದ ಹಾಲಪ್ಪಹುಡೇ ಜಾಲಿ. ಬಸವರಾಜು ಕವಲೂರು ನಾಗರಾಜ್ ಇಂಗಳಗಿ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ನಟಿ ಬಿ ಸರೋಜಾ ದೇವಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪ್ರಸ್ತುತ ಸಮಾರಂಭವನ್ನು ಕರ್ನಾಟಕ ಬೀದಿ ನಾಟಕ ಅಕಾಡೆಮಿ ಕವಿ ಸಮೂಹ ಸೇವಾ ಮತ್ತು ಡೆವಸ್ ಸಂಸ್ಥೆ ಬಹುತ್ವ ಬಳಗ ಜಂಟಿಯಾಗಿ ಆಯೋಜಿಸಲಾಗಿತ್ತು. ಹಿರಿಯ ಪತ್ರಕರ್ತ ನಾರಾಯಣ್ ರಾವ್ ಕುಲಕರ್ಣಿ ಜಿಲ್ಲಾ ವಾರ್ತಾಧಿಕಾರಿ ಡಾ ಜಿ ಸುರೇಶ್ ಸಂಚಾಲಕ ಸಿರಾಜು ಬಿಸ ರಳ್ಳಿ. ಕಲೀಲ್ ಅಖಿಲ್ ಇತರರು ಉಪಸ್ಥಿತರಿದ್ದರು.

