ಹಿರೇ ಜಂತಕಲ್ಲಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ಶಿವರಾತ್ರಿ ಆಚರಣೆ…

ಸಮಾಜದ ಸಂಘಟನೆಗೆ ಧಾರ್ಮಿಕ ಆಚರಣೆಗಳು ಪೂರಕ. ದರೋಜಿ ನಾಗರಾಜ್ ಶೆಟ್ಟಿ ದೈನಂದಿನ ಬದುಕಿನಲ್ಲಿ ಜೀವನದ ಸಾರ್ಥಕತೆಗೆ ಹಾಗೂ ಸಮಾಜದ ಸಂಘಟನೆಗೆ ಧಾರ್ಮಿಕ ಆಚರಣೆಗಳು ಅತ್ಯಂತ ಮಹತ್ವದ ಆಗಿದೆ ಎಂದು ಆರ್ಯವೈಶ್ಯ ಸಮಾಜ ಹಿರೇ ಜಂತಕಲ್ ವಿರುಪಾಪುರದ ಅಧ್ಯಕ್ಷ ನಾಗರಾಜ ದರೋಜಿ ಹೇಳಿದರು ಅವರು ರವಿವಾರದಂದು . ಗಂಗಾವತಿ. ಇಲ್ಲಿನ ನಗರಸಭೆ ವ್ಯಾಪ್ತಿಯ ಹಿರೇ ಜಂತ ಕಲ್ಲಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಹಿರೇ ಜಂತಕಲ್ ವಿರುಪಾಪುರ ವಾಸವಿ ಮಹಿಳಾ ಸಂಘದ ನೇತೃತ್ವದಲ್ಲಿ ಮಹಾ ಶಿವರಾತ್ರಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಸೃಷ್ಟಿ ಲಯ ಸ್ವರೂಪವಾದ ಮಹಾಶಿವನು ವಿವಿಧ ಅವತಾರಗಳನ್ನು ಹೊಂದಿ ಭಕ್ತ ಮಹಾ ಕೋಟಿಯನ್ನು ಉದ್ದರಿ ಸೋದರ ಮೂಲಕ ಪಾಪಕರ್ಮಗಳನ್ನು ಹಾಗೂ ಕುಟುಂಬದಲ್ಲಿ ಶಾಂತಿ ಸೌಹಾರ್ದತೆಗೆ ಪ್ರೇರಕ ಶಕ್ತಿಯಾಗಿದ್ದಾನೆ ಎಂದು ಹೇಳಿದರು .

ವಾಸವಿ ಮಹಿಳಾಮಂಜಳಿಯ ಅಧ್ಯಕ್ಷರಾದ ರುಕ್ಮಿಣಿ ದಮ್ಮೂರು ಮಾತನಾಡಿ ಪ್ರಥಮ ಬಾರಿಗೆ 12 ಜ್ಯೋತಿರ್ಲಿಂಗಗಳನ್ನು ನಾಗದೇವತೆಯ ಹುತ್ತದ ಮಣ್ಣಿನಿಂದ 12 ಜ್ಯೋತಿ ಲಿಂಗಗಳನ್ನು ಸ್ಥಾಪಿಸಿ 112 ಗೋತ್ರಗಳಲ್ಲಿ 55ಕ್ಕೂ ಅಧಿಕ ಗೋತ್ರ ಹೊಂದಿದ ಸುಮಂಗಳಿಯರು ವಿಶೇಷ ಪೂಜೆ ಧಾರ್ಮಿಕ ಆಚರಣೆಗಳನ್ನು ವೇದಮೂರ್ತಿ ಪ್ರಸನ್ನ ಆಚಾರ ನೇತೃತ್ವದಲ್ಲಿ ನಡೆಸಲಾಯಿತು. ಶಿವ ಮತ್ತು ಪಾರ್ವತಿಯ ಕಲ್ಯಾಣ ಮಹೋತ್ಸವ ಒಂದಡೆಯಾದರೆ ಶಿವ ನಾಮ ಸ್ಮರಣೆಯಿಂದ ಸಂಕಷ್ಟಗಳು ದೂರವಾಗುತ್ತದೆ ಜೊತೆಗೆ ಸನ್ಮಾರ್ಗದಲ್ಲಿ ಸಾಗಲು ಪಂಚಾಕ್ಷರಿ ಮಹಾ ಮಂತ್ರ ಅವಶ್ಯವಾಗಿದೆ ಎಂದು ತಿಳಿಸಿದರು.

ಶಿವ ಪಂಚಾಕ್ಷರ ಮಂತ್ರದಿಂದ ಮಾಡಿದ ಪಾಪ ಕರ್ಮಗಳು ದೂರವಾಗುತ್ತವೆ ಮಕ್ಕಳಲ್ಲಿ ಧಾರ್ಮಿಕ ಆಚರಣೆಯ ಮೂಲಕ ಸಂಸ್ಕಾರ ಬೆಳಸುವ ಉದ್ದೇಶದಿಂದ ಇಂತಹ 10 ಹಲವಾರು ಕಾರ್ಯಕ್ರಮಗಳನ್ನು ದೇವಸ್ಥಾನದಲ್ಲಿ ಸಮಾಜದ ಅಧ್ಯಕ್ಷ ಧರೋಜಿ ನಾಗರಾಜ ಶೆಟ್ಟಿ ಅವರ ಸಮ್ಮುಖದಲ್ಲಿ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯುವಜನ ಸಂಘದ ಅಧ್ಯಕ್ಷ ಮಂಜುನಾಥ್ ಜಿ ಆರ್ ಎಸ್ ಸತ್ಯನಾರಾಯಣ ರಾಜಕುಮಾರ್ ದಮ್ಮೂರ್ ವಿಜಯ ಪದ್ಮಾವತಿ ದಮ್ಮೂರ್ ರಾಧಿಕಾ ಡಿ ಮಂಜುಳಾ ಡಿ ರೇಖಾ ಲಕ್ಷ್ಮಿ ಸೇರಿದಂತೆ ಇತರರು ಸಮಾರಂಭದ ನೇತೃತ್ವವನ್ನು ವಹಿಸಿದ್ದರು.

